ಚಿತ್ರರಂಗದಲ್ಲಿ ಸ್ಟಾರ್ ಜೋಡಿಗಳು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಚಿತ್ರರಂಗದಲ್ಲಿ ಸ್ಟಾರ್ ಜೋಡಿಗಳು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗಷ್ಟೇ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್‌ಗೆ ಸಿದ್ಧಾರ್ಥ್- ಅದಿತಿ ಜೋಡಿಯಾಗಿ ಬಂದು ಶುಭಹಾರೈಸಿದ್ದರು. ಈ ಬೆನ್ನಲ್ಲೇ ಸಿದ್ದಾರ್ಥ್, ಅದಿತಿ ಹೈದರಿ ಡೇಟಿಂಗ್ ಸುದ್ದಿ ಸದ್ದು ಮಾಡಿತ್ತು.

ಈ ಬಗ್ಗೆ ನಟಿ ಅದಿತಿ ರಾವ್ ಹೈದರಿ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಅದಿತಿ- ಸಿದ್ಧಾರ್ಥ್ ಜೋಡಿಯಾಗಿ `ಮಹಾ ಸಮುದ್ರಂ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ. 2021ರಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ. ಸದ್ಯ ಟಿಟೌನ್ ಅಂಗಳದಲ್ಲಿ ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ.

ಅದಿತಿ ನಟನೆಯ `ತಾಜ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ಬಗ್ಗೆ ಕೇಳಲಾಗಿದೆ. ಅದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ ಎಂದು ನಟಿ ಹೊರಟಿದ್ದಾರೆ. ಈ ಪ್ರಶ್ನೆಗೆ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣ ಮತ್ತು ಮಿಲನಾ ಲವ್ ಬರ್ಡ್ಸ್ ಆಗಿ ಹಾರಾಟ ಶುರು ಮಾಡಿದ್ದಾರೆ.

Sun Feb 19 , 2023
ಸ್ಯಾಂಡಲ್‌ವುಡ್‌ನ ರಿಯಲ್ ಲವ್ ಬರ್ಡ್ಸ್, ರೀಲ್‌ನಲ್ಲಿ ಮತ್ತೆ ಲವ್ ಬರ್ಡ್ಸ್ ಆಗಿ ಹಾರಾಟ ಶುರು ಮಾಡಿದ್ದಾರೆ. ಈ ಪ್ರೇಮಪಕ್ಷಿಗಳನ್ನು ಹಾರಾಟಕ್ಕೆ ಬಿಟ್ಟು ಸೂತ್ರ ಕೈಯಲ್ಲಿ ಹಿಡಿದು, ಪಕ್ಷಿಗಳಿಗೆ ಮಾರ್ಗದರ್ಶನ ಮಾಡಿರುವುದು ಪಿ.ಸಿ.ಶೇಖರ್. ಅಂದಹಾಗೆ ಇದು ‘ಲವ್ ಬರ್ಡ್ಸ್’ ಎಂಬ ಕನ್ನಡ ಸಿನೆಮಾ ವಿಚಾರ. ಈ ವಾರ ರಿಲೀಸ್ ಆಗಿರುವ ಕನ್ನಡ ಸಿನೆಮಾಗಳಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಸಿನೆಮಾ ‘ಲವ್ ಬರ್ಡ್ಸ್’. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಯಕ, […]

Advertisement

Wordpress Social Share Plugin powered by Ultimatelysocial