ದೇಶದಲ್ಲಿ ಜನವರಿ ತಿಂಗಳಲ್ಲಿ ಐದು ವರ್ಷಗಳಲ್ಲೇ ಕನಿಷ್ಠ ಮಳೆ ಬಿದ್ದಿದೆ.

ಪುಣೆ: ದೇಶದಲ್ಲಿ ಜನವರಿ ತಿಂಗಳಲ್ಲಿ ಐದು ವರ್ಷಗಳಲ್ಲೇ ಕನಿಷ್ಠ ಮಳೆ ಬಿದ್ದಿದೆ. ಜನವರಿಯ ಮೊದಲ 30 ದಿನಗಳಲ್ಲಿ ದೇಶಾದ್ಯಂತ ಕೇವಲ 12.4 ಮಿಲಿಮೀಟರ್ ಮಳೆಯಾಗಿದ್ದು, ಇದು ವಾಡಿಕೆಯ ಮಳೆಗಿಂತ ಶೇಕಡ 25ರಷ್ಟು ಕಡಿಮೆ. ಈ ಕೊರತೆ ಜನವರಿ 31ರಂದು ಸರಿದೂಗುವ ಸಾಧ್ಯತೆ ಇಲ್ಲ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಹೇಳಿಕೆ ನೀಡಿದೆ.

ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಕೊರತೆ ಇದೆ ಎಂದು ಐಎಂಡಿ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

“ಪಶ್ಚಿಮಮುಖ ಪ್ರಕ್ಷುಬ್ಧತೆ ಚಟುವಟಿಕೆಯಿಂದಾಗಿ ಪಶ್ಚಿಮ ಹಾಗೂ ವಾಯವ್ಯ ಭಾರತದಲ್ಲಿ ಸಾಮಾನ್ಯ ಅಥವಾ ಅಧಿಕ ಮಳೆ ಬಿದ್ದಿದೆ. ಆದಾಗ್ಯೂ ಚಳಿಗಾಲದ ಮಳೆ ಒಟ್ಟಾರೆಯಾಗಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಇದೆ. ದುರ್ಬಲ ಪಶ್ಚಿಮಮುಖಿ ಪ್ರಕ್ಷುಬ್ಧತೆ ಚಟುವಟಿಕೆಯ ಪರಿಣಾಮ ಕಲೆದ ವರ್ಷದ ಡಿಸೆಂಬರ್‌ನಲ್ಲೂ ಮಳೆ ವಾಡಿಕೆಗಿಂತ ಕಡಿಮೆ” ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.

ಕೊನೆಯ ಪಶ್ಚಿಮಮುಖಿ ಪ್ರಕ್ಷುಬ್ಧತೆಯ ಪರಿಣಾಮ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಪಂಜಾಬ್ ಹಾಗೂ ಹರ್ಯಾಣದ ಉತ್ತರ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ. ಈಗ ಬರುತ್ತಿರುವ ಮಳೆ ಮಂಗಳವಾರದ ವರೆಗೆ ಮುಂದವರಿಯುವ ಸಾಧ್ಯತೆ ಇದ್ದು, ಬಳಿಕ ಕಡಿಮೆಯಾಗಲಿದ್ದು, ಈ ತಿಂಗಳ ಕೊರತೆ ನೀಗುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದಾರೆ.

2022ರ ಡಿಸೆಂಬರ್‌ನಲ್ಲಿ ಕೂಡಾ ಕೇವಲ 13.6 ಮಿಲಿಮೀಟರ್ ಮಳೆಯಾಗಿದ್ದು, 2016ರ ಡಿಸೆಂಬರ್ ಬಳಿಕ ಇದು ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

ಭಾರತದ ಗೋಧಿ ಬೆಳೆಯುವ ಶೇಕಡ 95ಕ್ಕಿಂತ ಹೆಚ್ಚು ಪ್ರದೇಶ ನೀರಾವರಿ ಜಮೀನು. ಆದಾಗ್ಯೂ ಮಂದ ಮಳೆ, ತಂಪಾಗುವಿಕೆಯ ಅವಧಿ ಹೆಚ್ಚಲು ಕಾರಣವಾಗಲಿದ್ದು, ಇದು ಚಳಿಗಾಲದ ಗೋಧಿ ಇಳುವರಿಗೆ ಅನುಕೂಲ. ಸಕಾಲಿಕ ಮತ್ತು ಚಳಿಗಾಲದ ಲಘು ಮಳೆ ಗೋಧಿ ಉತ್ಪಾದನೆಗೆ ಅನುಕೂಲ. ಚಳಿಗಾಲ ಒಣಹವೆಯಿಂದ ಕೂಡಿದ್ದರೆ, ಹಿಮ ಬೆಳೆಗಳ ಮೆಲೆ ಹೆಚ್ಚಾಗಿ ಬೀಳುತ್ತದೆ. ಇದು ಬೆಳೆ ಹಾನಿಗೆ ಕಾರಣವಾಗಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಐಸಿಎಆರ್-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ರಾಜಬೀರ್ ಯಾವದ್ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ.

Tue Jan 31 , 2023
ಅಯೋಧ್ಯಾ:ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ. ಇದಕ್ಕಾಗಿ ಮೂರು ಅಡಿ ಎತ್ತರದ ಶ್ರೀರಾಮ, ಸೀತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಇವನ್ನು ನೇಪಾಳದ ಕಾಳಿಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗುವುದು. ತಲಾ 25 ಮತ್ತು 15 ಟನ್‌ ತೂಕವಿರುವ ಈ ಕಲ್ಲುಗಳನ್ನು ಜ.30ರಂದು ನೇಪಾಳದಿಂದ ಭಾರತಕ್ಕೆ ಕಳುಹಿಸಲಾಗಿದೆ. ನೇಪಾಳ ಸರ್ಕಾರ ಸ್ವತಃ ಆಸಕ್ತಿ ವಹಿಸಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ಶ್ರೀರಾಮ ವಿಷ್ಣುವಿನ ಅವತಾರ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮವನ್ನು […]

Advertisement

Wordpress Social Share Plugin powered by Ultimatelysocial