ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ.

ಯೋಧ್ಯಾ:ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ. ಇದಕ್ಕಾಗಿ ಮೂರು ಅಡಿ ಎತ್ತರದ ಶ್ರೀರಾಮ, ಸೀತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಇವನ್ನು ನೇಪಾಳದ ಕಾಳಿಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗುವುದು.

ತಲಾ 25 ಮತ್ತು 15 ಟನ್‌ ತೂಕವಿರುವ ಈ ಕಲ್ಲುಗಳನ್ನು ಜ.30ರಂದು ನೇಪಾಳದಿಂದ ಭಾರತಕ್ಕೆ ಕಳುಹಿಸಲಾಗಿದೆ.

ನೇಪಾಳ ಸರ್ಕಾರ ಸ್ವತಃ ಆಸಕ್ತಿ ವಹಿಸಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ಶ್ರೀರಾಮ ವಿಷ್ಣುವಿನ ಅವತಾರ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮವನ್ನು ವಿಷ್ಣುವೆಂದೇ ಭಾವಿಸಿ ಪೂಜಿಸಲಾಗುತ್ತದೆ. ಹೀಗಾಗಿ ಈ ನದಿಯ ಶಿಲೆಯನ್ನು ಬಳಸಲು ನಿರ್ಧರಿಸಲಾಯಿತು. ಅಯೋಧ್ಯಾ ಶ್ರೀರಾಮನ ದೇವಸ್ಥಾನದಲ್ಲಿ ಮೂಲ ರಾಮಲಲ್ಲಾ ವಿಗ್ರಹಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಅದರ ಜೊತೆಗೆ ಮುಖ್ಯಮಂದಿರದಲ್ಲಿ ಸಾಲಿಗ್ರಾಮ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ.

ಜೂನ್‌ಗೆ ಅಯೋಧ್ಯಾ ಅಂ.ರಾ. ವಿಮಾನನಿಲ್ದಾಣ: ಒಂದು ಕಡೆ ರಾಮಮಂದಿರ ನಿರ್ಮಾಣ ಭರದಿಂದ ಸಾಗಿರುವಂತೆಯೇ, ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಈ ವರ್ಷ ಜೂನ್‌ ಹೊತ್ತಿಗೆ ಮುಗಿಸಲು ಯೋಗಿ ಆದಿತ್ಯನಾಥ್‌ ಸರ್ಕಾರ ತೀವ್ರ ಆಸಕ್ತಿವಹಿಸಿಎ. ಕಾಮಗಾರಿಗಳು ಅಷ್ಟೇ ತ್ವರಿತವಾಗಿ ನಡೆಯುತ್ತಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಣ್ಣ ಕ್ಯಾಪ್ಸೂಲ್‌ಗಾಗಿ ಇಡೀ ಆಸೀಸ್‌ನಲ್ಲಿ ಹುಡುಕಾಟ!

Tue Jan 31 , 2023
ನವದೆಹಲಿ: ಒಂದು ಸಣ್ಣ ನಾಣ್ಯದ ಗಾತ್ರದ, ತೆಳುವಾದ ಕ್ಯಾಪ್ಸೂಲ್‌ ಒಂದು ಇಡೀ ಆಸ್ಟ್ರೇಲಿಯ ಸರ್ಕಾರವನ್ನೇ ತುದಿಗಾಲಲ್ಲಿ ನಿಲ್ಲಿಸಿದೆ. ಕಾರಣವೇನು ಗೊತ್ತಾ? ಅದು ಕಳೆದುಹೋಗಿದೆ. ಸರಿ ಅಂತಹದ್ದೇನಿದೆ ಅದರಲ್ಲಿ ಅನ್ನುತ್ತೀರಾ? ಅದು ಪ್ರಬಲ ವಿಕಿರಣಗಳನ್ನು ಹೊರಸೂಸಬಲ್ಲ ಸಾಮರ್ಥ್ಯ ಹೊಂದಿದೆ. ಅದರ ಸಂಪರ್ಕದಲ್ಲಿ ಬಹಳ ಕಾಲ ಇದ್ದರೆ ಚರ್ಮರೋಗ ಬರಬಹುದು, ಕಾಲಾಂತರದಲ್ಲಿ ಕ್ಯಾನ್ಸರ್‌ಗೂ ಕಾರಣವಾಗಬಹುದು. ಪಶ್ಚಿಮ ಆಸ್ಟ್ರೇಲಿಯದ ಒಂದು ಕಬ್ಬಿಣದ ಗಣಿಗಾರಿಕೆ ಪ್ರದೇಶ ಮತ್ತು ಪರ್ಥ್ ನಗರದ ನಡುವೆ ಈ ಕ್ಯಾಪ್ಸೂಲ್‌ ಟ್ರಕ್‌ನಲ್ಲಿ ಸಾಗಿಸುತ್ತಿದ್ದಾಗ […]

Advertisement

Wordpress Social Share Plugin powered by Ultimatelysocial