ಹೋಟೆಲ್ ರೂಮಿನಲ್ಲಿ ಗೆಳತಿ ಜೊತೆಗೆ ಉದ್ಯಮಿ ಸಿಕ್ಕಿಕೊಳ್ಳುವುದಕ್ಕೆ ಕಾರಣವಾಗಿದ್ದೇ ಪತ್ನಿಯ ಆಧಾರ್ ಕಾರ್ಡ್!

 

ಪುಣೆ, ಫೆಬ್ರವರಿ 4: ಕ್ರೈಂ ಲೋಕದಲ್ಲಿ ನಡೆಯುವ ಅಪರಾಧ ಕೃತ್ಯಗಳು ಒಂದಕ್ಕಿಂತ ಒಂದು ಡಿಫರೆಂಟ್. ಮಹಾನಗರಗಳ ಕ್ರೈಂ ಸ್ಟೋರಿಯ ಹಿಂದಿನ ಕಥೆಗಳು ಕೆಲವೊಮ್ಮೆ ಭಯ ಹುಟ್ಟಿಸುವಂತಿದ್ದರೆ, ಇನ್ನೂ ಕೆಲವೊಮ್ಮೆ ನಗು ತರಿಸುವಂತೆ ಇರುತ್ತವೆ. ಹೀಗೆ ನಗು ಹುಟ್ಟಿಸುವಂತಾ ಅಂಥದ್ದೇ ಒಂದು ಕ್ರೈಂ ಸ್ಟೋರಿ ಇದು.ಪುಣೆಯ ಹೋಟೆಲ್ ರೂಮಿನಲ್ಲಿ ಗೆಳತಿ ಜೊತೆಗೆ ಉದ್ಯಮಿ ಸಿಕ್ಕಿಕೊಳ್ಳುವುದಕ್ಕೆ ಕಾರಣವಾಗಿದ್ದೇ ಪತ್ನಿಯ ಆಧಾರ್ ಕಾರ್ಡ್. ಅಸಲಿಗೆ ಈ ಸ್ಟೋರಿ ಪುಣೆಯಲ್ಲಿ ನಡೆದಿದ್ದರೂ ಇದರ ಹಿಂದೆ ಬೆಂಗಳೂರಿನ ಕಥೆಯಿದೆ. ಗುಜರಾತ್ ಮೂಲದ ಉದ್ಯಮಿಯೊಬ್ಬರು ತಾವು ಮಾಡಿದ ತಪ್ಪಿನಿಂದ ತನ್ನ ಗರ್ಲ್ ಫ್ರೆಂಡ್ ಜೊತೆಯಲ್ಲಿ ಇರುವಾಗಲೇ ಪತ್ನಿ ಕೈಗೆ ಸರಿಯಾಗಿ ಲಾಕ್ ಆಗಿದ್ದಾರೆ.ಗುಜರಾತ್ ಮೂಲದ ಉದ್ಯಮಿ. ದೊಡ್ಡ ಕಂಪನಿ ಡೈರೆಕ್ಟರ್ ಆಗಿರುವ ಪತ್ನಿ. ಪತ್ನಿಯ ಕಾರಿನಲ್ಲಿದ್ದ ಜಿಪಿಎಸ್ ಮತ್ತು ಹೋಟೆಲ್‌ನಲ್ಲಿ ಬಳಸಿದ ಪತ್ನಿಯ ಆಧಾರ್ ಕಾರ್ಡ್.. ಈ ಅಂಶಗಳ ಸುತ್ತಲೂ ಸುತ್ತುವರೆಯುವ ರೋಚಕ ಕಥೆಯನ್ನು ಮುಂದೆ ಓದಿ.ಗಂಡ ಹೆಂಡತಿ ಎಂದ ಮೇಲೆ ಅನುಮಾನಗಳು ಇರುವುದು ಕಾಮನ್. ಆದರೆ ಬೇರೊಂದು ಹೆಣ್ಣಿನ ಜೊತೆ ಸೇರಿಕೊಂಡು ತನ್ನ ಗಂಡ ತನಗೇ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನ ಇಲ್ಲಿ ಪತ್ನಿಗೆ ಬಲವಾಗಿತ್ತು. ಆದ್ದರಿಂದ 41 ವರ್ಷದ ತನ್ನ ಪತಿಯ ಎಸ್ ಯುವಿಗೆ(ಕಾರು) ಕಳೆದ ನವೆಂಬರ್ ತಿಂಗಳಿನಲ್ಲಿ ಗೌಪ್ಯವಾಗಿ ಜಿಪಿಎಸ್ ಅಳವಡಿಸಿದ್ದರು. ತನ್ನ ಪತಿಯ ಕಾರು ಎಲ್ಲಿದೆ ಎಂಬುದನ್ನು ಪತ್ನಿ ಅದೇ ಜಿಪಿಎಸ್ ಸಹಾಯದಿಂದ ಪತ್ತೆ ಮಾಡುತ್ತಿದ್ದರು.ಬೆಂಗಳೂರಿನಲ್ಲಿ ಕೆಲಸವಿದೆ ಎಂದು ಪತ್ನಿಗೆ ಹೇಳಿದ್ದ ಗುಜರಾತ್ ಮೂಲದ 41 ವರ್ಷದ ಉದ್ಯಮಿ ಕಾರಿನ ಲೋಕೇಷನ್ ಮಹಾರಾಷ್ಟ್ರದ ಪುಣೆ ಎಂದು ತೋರಿಸುತ್ತಿತ್ತು. ಜಿಪಿಎಸ್ ಮೂಲಕ ಗಂಡನ ಕಾರು ಎಲ್ಲಿದೆ ಎಂಬುದನ್ನು ಪತ್ತೆ ಮಾಡಿದ ಪತ್ನಿ, ಪುಣೆಯಲ್ಲಿ ತನ್ನ ಪತಿ ಉಳಿದುಕೊಂಡಿದ್ದ ಹೋಟೆಲ್‌ಗೆ ಕರೆ ಮಾಡಿ ವಿಚಾರಿಸಿಕೊಂಡರು.ಮಹಾರಾಷ್ಟ್ರದ ಪುಣೆಗೆ ತನ್ನ ಗೆಳತಿ ಜೊತೆಗೆ ಹೋಗಿದ್ದ ಉದ್ಯಮಿ ಹೋಟೆಲ್‌ನಲ್ಲಿ ರೂಮ್ ಮಾಡುವುದಕ್ಕಾಗಿ ಪತ್ನಿಯ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡಿದ್ದರು. ತನ್ನ ಗೆಳತಿಯನ್ನೇ ಪತ್ನಿ ಎಂದು ಹೋಟೆಲ್ ಸಿಬ್ಬಂದಿ ಎದುರು ಹೇಳಿಕೊಂಡಿದ್ದರು. ವ್ಯಕ್ತಿಯು ತಮ್ಮ ಪತ್ನಿಯ ಜೊತೆಗೆ ಹೋಟೆಲ್ ರೂಮಿನಲ್ಲಿ ತಂಗಿರುವುದಾಗಿ ಹೋಟೆಲ್ ಸಿಬ್ಬಂದಿಯು ಉದ್ಯಮಿಯ ಪತ್ನಿಗೆ ತಿಳಿಸಿದ್ದರು. ತದನಂತರ ಸಿಸಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಅವರು ನಿಜವಾಗಿ ಪತ್ನಿಯಲ್ಲ ಗೆಳತಿ ಎಂಬುದು ಪತ್ತೆಯಾಗಿದೆ.ತನ್ನ ಪತಿ ತಮಗೆ ವಂಚಿಸುತ್ತಿದ್ದಾರೆ ಎಂಬ ಬಗ್ಗೆ ಮೊದಲೇ ಅನುಮಾನಗೊಂಡಿದ್ದ ಪತ್ನಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಮಹಾರಾಷ್ಟ್ರದ ಹಿಂಜೇವಾಡಿ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಗೆಳತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಲು ಪತ್ನಿಯ ಆಧಾರ್ ಕಾರ್ಡ್ ಬಳಸುವುದರ ಜೊತೆಗೆ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಯನ್ನು ಬಂಧಿಸಿದ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 419 ಅಡಿ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರೆನಾಲ್ಟ್ ಕಾರುಗಳು ಫೆಬ್ರವರಿ 2022: ರೂ 1.3 ಲಕ್ಷದವರೆಗಿನ ಎಲ್ಲಾ ಮಾದರಿಗಳ ಮೇಲೆ ರಿಯಾಯಿತಿಗಳು ಮತ್ತು ಪ್ರಯೋಜನಗಳು;

Sat Feb 5 , 2022
  ಕ್ವಿಡ್, ಟ್ರೈಬರ್, ಡಸ್ಟರ್ ಮತ್ತು ಕಿಗರ್‌ನ ಎಲ್ಲಾ ರೂಪಾಂತರಗಳು ಫೆಬ್ರವರಿ 2022 ರಲ್ಲಿ ಆಫರ್‌ಗಳಿಗೆ ಅರ್ಹವಾಗಿವೆ. ಗ್ರಾಹಕರು 2021 ಅಥವಾ 2022 ರಲ್ಲಿ ತಯಾರಿಸಿದ ಕಾರುಗಳ ನಡುವೆ ಆಯ್ಕೆ ಮಾಡಿಕೊಳ್ಳಬಹುದು. ಮಾದರಿ, ರೂಪಾಂತರ ಮತ್ತು ರಾಜ್ಯವನ್ನು ಅವಲಂಬಿಸಿ ಖರೀದಿದಾರರು ಈ ತಿಂಗಳು 1.3 ಲಕ್ಷ ರೂ.ವರೆಗಿನ ಗರಿಷ್ಠ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಫೆಬ್ರವರಿ 1 ಮತ್ತು ಫೆಬ್ರವರಿ 28 ರ ನಡುವೆ ಮಾಡಿದ ಖರೀದಿಗಳಿಗೆ ಕೊಡುಗೆಗಳು ಲಭ್ಯವಿವೆ. ರೆನಾಲ್ಟ್ ಕ್ವಿಡ್ […]

Advertisement

Wordpress Social Share Plugin powered by Ultimatelysocial