ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ

ಕೆ.ಎಲ್.ರಾಹುಲ್ ಸೆಂಚೂರಿ. ಹಲವು ದಾಖಲೆಗಳು ಚಿಂದಿ kl-rahul saaksha tv

ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಪ್ರೋಟೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರಾಹುಲ್ ಸೆಂಚೂರಿ ದಾಖಲಿಸಿದ್ದಾರೆ.

219 ಎಸೆತಗಳಲ್ಲಿ ಶತಕ ಸಿಡಿಸಿದ ರಾಹುಲ್ ಇನ್ನಿಂಗ್ಸ್ ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಇದೆ.

ಬಾಕ್ಸಿಂಗ್ ದಿನದಂದು ಶತಕ ಸಿಡಿಸಿದ ಕೆಎಲ್ ರಾಹುಲ್ ಗೆ ಇದು ಏಳನೇ ಟೆಸ್ಟ್ ಶತಕವಾಗಿದೆ.

ವಿದೇಶಿ ನೆಲದಲ್ಲಿ ಇದು ಐದನೇ ಶತಕ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಟೆಸ್ಟ್ ಓಪನರ್ ಆಗಿ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಟೀಂ ಇಂಡಿಯಾದ ಟೆಸ್ಟ್ ಓಪನರ್ ಆಗಿ ವಿದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳ ಪಟ್ಟಿಯಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ 12 ಶತಕಗಳೊಂದಿಗೆ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅಗ್ರಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಮೂರನೇ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್,ನಾಲ್ಕನೇ ಸ್ಥಾನದಲ್ಲಿ ವಿನೂ ಮಂಕಡ್, ರವಿಶಾಸ್ತ್ರಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಎರಡನೇ ಆರಂಭಿಕ ಆಟಗಾರ ಕೆಎಲ್ ರಾಹುಲ್.

ಈ ಹಿಂದೆ 2006-07ರಲ್ಲಿ ಕೇಪ್ ಟೌನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ವಾಸಿಂ ಜಾಫರ್ 116 ರನ್ ಗಳಿಸಿದ್ದರು.

ಕೆಎಲ್ ರಾಹುಲ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ನೆಲದಲ್ಲಿ ಪ್ರವಾಸಿ ತಂಡದ ಆರಂಭಿಕರಾಗಿ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಉಫ್‌. ನಾನಂತೂ ಮುಸ್ಲಿಂ ಹುಡುಗನನ್ನ ಮದ್ವೆಯಾಗಲ್ಲ' ಎಂದ ನಟಿ ಉರ್ಫಿ ಜಾವೇದ್‌ ಕೊಟ್ಟಳು ಈ ಕಾರಣ.

Mon Dec 27 , 2021
ಮುಂಬೈ: ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್‌ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು. ಇದಾಗಲೇ ಈಕೆ ತೊಟ್ಟಿರುವ ಡ್ರೆಸ್‌ಗಳಿಂದ ಟ್ರೋಲ್‌ ಆಗುತ್ತಿದ್ದಾಳೆ ಈ ಬೆಡಗಿ. ಆದರೆ ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಈಕೆಯದ್ದು ಎತ್ತಿದ ಕೈ. ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಾಕೆ ಈ ಉರ್ಫಿ […]

Advertisement

Wordpress Social Share Plugin powered by Ultimatelysocial