ಜೂ.ಎನ್‌ಟಿಆರ್ ಮದುವೆ ಖರ್ಚು ₹100 ಕೋಟಿ: ಅಥಿತಿಗಳ ಲೆಕ್ಕ ಕೇಳಿದ್ರೆ ತಲೆ ತಿರುಗುತ್ತೆ!

ಸೌತ್ ಸಿನಿಮಾರಂಗದ ಸೂಪರ್ ಸ್ಟಾರ್ ನಟರಲ್ಲಿ ನಟ ಜೂ.ಎನ್‌ಟಿಆರ್ ಕೂಡ ಒಬ್ಬರು. ಜೂ.ಎನ್‌ಟಿಆರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟು ಸೂಪರ್ ಸ್ಟಾರ್ ಪಟ್ಟದಲ್ಲಿ ಕೂತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಜೂ.ಎನ್‌ಟಿಆರ್ ಕೂಡ ಒಬ್ಬರು.ಜೂ.ಎನ್‌ಟಿಆರ್ ಸಿನಿಮಾಗಳಿಗೆ ಕೋಟಿ ಕೋಟಿ ಬಂಡವಾಳ ಹಾಕಲಾಗುತ್ತದೆ. ಅದ್ಧೂರಿಯಾಗಿ ಜೂ.ಎನ್‌ಟಿಆರ್ ಸಿನಿಮಾಗಳು ನಿರ್ಮಾಣವಾಗುತ್ತವೆ. ಇನ್ನು ಜೂ.ಎನ್‌ಟಿಆರ್ ಸಿನಿಮಾವೊಂದು ಬರ್ತಿದೆ ಅಂತ ಹೇಳಿದರೆ ಅವರ ಅಭಿಮಾನಿ ಬಳಗ ಅದಕ್ಕಾಗಿ ಮುಗಿಬಿದ್ದು ಕಾಯುತ್ತಿರುತ್ತದೆ. ಈ ನಟನೆಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇದೆ.ಸದ್ಯ ಜೂ.ಎನ್‌ಟಿಆರ್ ಅಭಿಮಾನಿಗಳ ಬಗ್ಗೆ ಮಾತನಾಡುವುದಕ್ಕೆ ಕಾರಣ ಅವರ ಮದುವೆ ಸಮಾರಂಭ. ಹೌದು ಜೂ.ಎನ್‌ಟಿಆರ್ ಮದುವೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದು ಬಂದಿದ್ದರು. ಅದಕ್ಕಾಗಿ ಅವರು ಖರ್ಚು ಮಾಡಿದ ಹಣ ನೂರು ಕೋಟಿ. ಈ ಬಗ್ಗೆ ಸ್ವಾರಸ್ಯಕರ ಸಂಗತಿ ಇಲ್ಲಿದೆ ಮುಂದೆ ಓದಿ…ಜೂ.ಎನ್‌ಟಿಆರ್ ಅವ್ರದ್ದು ₹100 ಕೋಟಿ ಮದುವೆ!

ನಟ ಜೂ.ಎನ್‌ಟಿಆರ್ ಎನ್‌ಟಿಆರ್ ಮದುವೆ ಆಗಿ ಹಲವು ವರ್ಷಗಳು ಕಳೆದು ಹೋಗಿವೆ. ಅದರೆ ಈಗ ಮದುವೆ ಬಗ್ಗೆ ಸ್ವಾರಸ್ಯಕರವಾದ ಸಂಗತಿ ಒಂದು ಹರಿದಾಡುತ್ತಿದೆ. ಮದುವೆ ಆದರೆ, ಅದರಲ್ಲೂ ಸ್ಟಾರ್ ನಟರ ಮದುವೆ ಅಂದರೆ ಅದು ಅದ್ಧೂರಿಯಾಗೇ ಇರುತ್ತೆ. ಹಾಗಾಗಿ ಅದ್ಧೂರಿ ಮದುವೆಗಳ ಖರ್ಚಿನ ಲೆಕ್ಕವೂ ಸರಿಯಾಗಿ ಸಿಗುವುದಿಲ್ಲ. ಆದರೆ ನಟ ಜೂ.ಎನ್‌ಟಿಆರ್ ಮದುವೆಗೆ ₹100 ಕೋಟಿ ಖರ್ಚು ಮಾಡಲಾಗಿದೆ ಎನ್ನವ ಸುದ್ದಿ ಈಗ ಹರಿದಾಡುತ್ತಿದೆ.

JrNTR ಮದುವೆಯಲ್ಲಿ 15 ಸಾವಿರ ಅತಿಥಿಗಳು!

ಜೂ.ಎನ್‌ಟಿಆರ್ ಮದುವೆಯಲ್ಲಿ ಸಾವಿರಾರು ಮಂದಿ ಭಾಗಿ ಆಗಿದ್ದರು. ವರದಿಯ ಪ್ರಕಾರ, ಒಟ್ಟು 15 ಸಾವಿರ ಮಂದಿ ಭಾಗಿ ಆಗಿದ್ದರು. ಈ ಪೈಕಿ 12 ಸಾವಿರ ಜನ ಜೂ.ಎನ್‌ಟಿಆರ್ ಅಭಿಮಾನಿಗಳು ಎಂದರೆ ನಂಬಲೇ ಬೇಕು. ಜೂ.ಎನ್‌ಟಿಆರ್‌ಗೆ ಅಷ್ಟೊಂದು ದೊಡ್ಡ ಮಟ್ಟದ ಕ್ರೇಜ್ ಇದೆ. ಈ ಕಾರಣಕ್ಕೆ ಮದುವೆಯಲ್ಲಿ 12 ಸಾವಿರ ಅಭಿಮಾನಿಗಳು ಭಾಗಿಯಾಗಿದ್ದರು ಎನ್ನುವುದು ಕೂಡ ದಾಖಲೆ ಎನ್ನುತ್ತಿದೆ ಟಾಲಿವುಡ್.

2011ರಲ್ಲಿ JrNTR ಮದುವೆ!

2011ರಲ್ಲಿ ನಟ ಜೂ.ಎನ್‌ಟಿಆರ್ ಮದುವೆ ನೆರವೇರಿದೆ. ಲಕ್ಷ್ಮಿ ಪ್ರಣತಿ ಜೊತೆಗೆ ಜೂ.ಎನ್‌ಟಿಆರ್ ಮದುವೆ ಆಗಿದ್ದಾರೆ. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಲಾಯಿತು. ಈಗ ಈ ದಂಪತಿಗಳಿಗೆ ಇಬ್ಬರು ಮದ್ದಾದ ಮಕ್ಕಳು ಇದ್ದಾರೆ. 10 ವರ್ಷದ ಹಿಂದೆಯೇ ಮದುವೆಗಾಗಿ ₹100 ಕೋಟಿ ಖರ್ಚು ಮಾಡಲಾಗಿದೆ ಎಂದರೆ ಸಾಮಾನ್ಯ ವಿಚಾರ ಅಲ್ಲ.

ಪತ್ನಿ ವಿಚಾರದಲ್ಲಿ JrNTR ಮೇಲೆ ದೂರು!ಟ ಜೂ.ಎನ್‌ಟಿಆರ್ ಮದುವೆ ವಿಚಾರದಲ್ಲಿ ಕೂಡ ಸಾಕಷ್ಟು ಸುದ್ದಿಯಾಗಿದ್ದರು. ಒಮ್ಮೆ ಮದುವೆಗೆ ತಯಾರಿ ಮಾಡಿಕೊಂಡು, ಮದುವೆ ರದ್ದು ಮಾಡಿದ್ದರು. ಜೂ.ಎನ್‌ಟಿಆರ್ ಪತ್ನಿ ಲಕ್ಷ್ಮಿಗೆ 17 ವರ್ಷದವರಿದ್ದಾಗಲೇ ಮದುವೆ ತಯಾರಿ ನಡೆದಿತ್ತು. ಹಾಗಾಗಿ ವಕೀಲರೊಬ್ಬರು ಈ ಬಗ್ಗೆ ದೂರು ದಾಖಲಿಸಿದರು. ಬಳಿಕ ಒಂದು ವರ್ಷ ಬಿಟ್ಟು ಮದುವೆ ಆಯ್ತು ಈ ಜೋಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದೂ ಸಂಘಟನೆ ಕಾರ್ಯಕರ್ತನ ಕೊಲೆಗೆ ಪ್ರತೀಕಾರ; ಸೇಡಿಗಾಗಿ ಹಾಡಹಗಲೇ ಕೊಚ್ಚಿ ಕೊಂದರು..

Sun Jun 5 , 2022
ಮಂಗಳೂರು: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಕೊಲೆಗೆ ಪ್ರತೀಕಾರವಾಗಿ ಇಂದು ಪ್ರಮುಖ ಆರೋಪಿಯೊಬ್ಬನನ್ನು ಹಾಡಹಗಲೇ ಕೊಚ್ಚಿ ಕೊಲೆ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ಈ ಕೊಲೆ ನಡೆದಿದೆ.ಪುತ್ತೂರು ತಾಲೂಕು ಅರ್ಯಾಪು ನಿವಾಸಿ ಚರಣ್ (28) ಎಂಬಾತ ಕೊಲೆಗೀಡಾದವ. ಈತ ಹಿಂದೂ ಜಾಗರಣ ವೇದಿಕೆಯ ಕಾರ್ತಿಕ್​ ಮೇರ್ಲ ಎಂಬಾತನನ್ನು ಕೊಲೆಗೈದ ಪ್ರಮುಖ ಆರೋಪಿಯಾಗಿದ್ದ. 2019ರ ಸೆ. 4ರಂದು ಗಣೇಶೋತ್ಸವದ ಪೆಂಡಾಲ್​ನಲ್ಲಿ ಕಾರ್ತಿಕ್​ನನ್ನು ಕೊಲೆ ಮಾಡಲಾಗಿತ್ತು.ಕಾರ್ತಿಕ್ […]

Advertisement

Wordpress Social Share Plugin powered by Ultimatelysocial