ನೈಜ ಘಟನೆಯ ‘ಇನ್‌ಕಾರ್‌’

ಟಿ ರಿತಿಕಾ ಸಿಂಗ್ ನಟಿಸಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಇನ್‌ಕಾರ್’ ಮಾರ್ಚ್‌ 3ರಂದು ತೆರೆಗೆ ಬರಲು ಸಜ್ಜಾಗಿದೆ. ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯ ನೈಜ ಅಂಶಗಳನ್ನು ಆರಿಸಿಕೊಂಡು ಅದನ್ನು ಚಿತ್ರರೂಪಕ್ಕೆ ತಂದಿದ್ದಾರೆ ನಿರ್ದೇಶಕ ಹರ್ಷವರ್ಧನ್‌.ಚಿತ್ರಕಥೆಯೂ ಅವರದ್ದೇ. ಇನ್‌ಬಾಕ್ಸ್ ಪಿಕ್ಚರ್ಸ್‌ನಡಿ ಅಂಜುಮ್‌ ಖುರೇಶಿ ಹಾಗೂ ಸಾಜಿದ್‌ ಖುರೇಶಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.’ಇದು ಒಂದು ದಿನದಲ್ಲಿ ನಡೆಯುವ ಕಥೆಯಾಗಿದೆ. ಹೀಗಾಗಿ ಎರಡು ಗಂಟೆಯ ಸಿನಿಮಾಗಾಗಿ ಒಂದೇ ರೀತಿಯಲ್ಲಿ ಕಾಣುವುದು ಅಗತ್ಯವಾಗಿತ್ತು. ಇದು ಸವಾಲಿನಿಂದ ಕೂಡಿತ್ತು. ಇದಕ್ಕಾಗಿ ಎರಡು ವಾರ ನಾನು ತಲೆಗೆ ಸ್ನಾನ ಮಾಡಿರಲಿಲ್ಲ’ ಎನ್ನುತ್ತಾರೆ ‘ಸಾಕ್ಷಿ ಗುಲಾಟಿ’ ಎಂಬ ಪಾತ್ರದಲ್ಲಿ ನಟಿಸಿರುವ ರಿತಿಕಾ. ಕಾಲೇಜು ವಿದ್ಯಾರ್ಥಿನಿಯೋರ್ವಳ ಅಪಹರಣದ ಬೆನ್ನಲ್ಲೇ ನಡೆಯುವ ಘಟನೆಗಳನ್ನು ಚಿತ್ರಕಥೆಯು ಹೊಂದಿದೆ. ಮಾಥ್ಯೂಸ್‌ ಡುಪ್ಲೆಸ್ಸಿ ಸಂಗೀತ, ಮಿಥುನ್‌ ಗಂಗೋಪಾಧ್ಯಾಯ ಛಾಯಾಗ್ರಹಣ, ಸುನಿಲ್‌ ರೋಡ್ರಿಗಸ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಕ್ರವರ್ತಿ ಮಧುಸೂದನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು.

Tue Feb 28 , 2023
  ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರಾದ ಡಾ. ಚಕ್ರವರ್ತಿ ಮಧುಸೂದನ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಕೊಡುಗೆಗಳಿಗೆ ಹೆಸರಾಗಿರುವುದಲ್ಲದೆ, ಭಾರತೀಯ ಸಂಸ್ಕೃತಿಯ ಕುರಿತಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿಯೂ ಅಪಾರ ಕೆಲಸ ಮಾಡುತ್ತಾ ಬಂದಿದ್ದಾರೆ ಚಕ್ರವರ್ತಿ ವರದಾಚಾರ್ ಮಧುಸೂದನ ಅವರು 1942ರ ವರ್ಷದಲ್ಲಿ ಕೋಲಾರದಲ್ಲಿ ಜನಿಸಿದರು. ಅವರ ಶಾಲಾ ಶಿಕ್ಷಣವೂ ಕೋಲಾರದಲ್ಲಿ ನಡೆಯಿತು. ವಕೀಲರಾಗಿದ್ದ ಅವರ ತಂದೆ 1958 ರಲ್ಲಿ ನಿಧನರಾದರು. ಅವರ ತಾಯಿ ಕಳೆದ ಶತಮಾನದ ಮೊದಲಾರ್ಧದಲ್ಲಿ […]

Advertisement

Wordpress Social Share Plugin powered by Ultimatelysocial