ಎಫ್‌ಟಿಎಕ್ಸ್‌ನಲ್ಲಿ ವಂಚನೆ, ತಪ್ಪೊಪ್ಪಿಕೊಂಡ ಭಾರತ ಮೂಲದ ನಿಶಾದ್

ವಿಶ್ವದಲ್ಲೇ ಎಫ್‌ಟಿಎಕ್ಸ್‌, ಕ್ರಿಪ್ಟೋಕರೆನ್ಸಿಯಲ್ಲಿನ ವಂಚನೆ ಪ್ರಕರಣವು ಭಾರೀ ಸಂಚಲನವನ್ನು ಉಂಟು ಮಾಡಿದೆ. ಈಗ 27 ವರ್ಷ ಪ್ರಾಯದ ಭಾರತ ಮೂಲದ ಇಂಜಿನಿಯರ್ ನಿಶಾದ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾನೆ. ಎಫ್‌ಟಿಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ವಂಚನೆ ನಡೆಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.ಈ ಸಂಸ್ಥೆಯ ವಿರುದ್ಧ ಬಿಲಿಯನ್ ಡಾಲರ್‌ ವಂಚನೆಯ ಆರೋಪವಿದೆ. ಹಾಗೆಯೇ ಈ ಪ್ಲಾಟ್‌ಫಾರ್ಮ್ ಸದ್ಯ ಸಂಪೂರ್ಣವಾಗಿ ಕುಟಿತ ಕಂಡಿದೆ.

ಭಾರತ ಮೂಲದ ನಿಶಾದ್ ಸಿಂಗ್ ಎಫ್‌ಟಿಎಕ್ಸ್ ಟ್ರೇಡಿಂಗ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದರು. ಆರು ಆರೋಪಗಳಲ್ಲಿ ನಿಶಾದ್ ಸಿಂಗ್ ತಪ್ಪೊಪ್ಪಿಕೊಂಡಿದ್ದಾನೆ. ವಂಚನೆ, ಮನಿ ಲಾಂಡರಿಂಗ್, ಹಣಕಾಸು ಕಾನೂನು ಉಲ್ಲಂಘನೆಯ ಆರೋಪವನ್ನು ಒಪ್ಪಿಕೊಂಡಿದ್ದಾನೆ. ನಿಶಾದ್ ಸಿಂಗ್ ಸಂಸ್ಥೆಯ ಟಾಪ್ 3 ಮುಖ್ಯಸ್ಥರಲ್ಲಿ ಒಬ್ಬನಾಗಿದ್ದು, ಎಫ್‌ಟಿಎಕ್ಸ್‌ನ ಸಂಸ್ಥಾಪಕ ಸ್ಯಾಮ್ ಬ್ಯಾಂಕ್‌ಮಾನ್-ಫ್ರೈಡ್‌ಗೆ ಅತೀ ಸಮೀಪದ ವ್ಯಕ್ತಿಯಾಗಿದ್ದಾನೆ.ಎಫ್‌ಟಿಎಕ್ಸ್‌ನ ಸಹ ಸಂಸ್ಥಾಪಕ ಗ್ಯಾರಿ ವ್ಯಾಂಗ್ ಮತ್ತು ಎಫ್‌ಟಿಎಕ್ಸ್‌ನ ಸಹ ಸಂಸ್ಥೆ ಫಂಡ್ ಅಲಾಮೆಡಾ ರಿಸರ್ಚ್‌ನ ಮಾಜಿ ಮುಖ್ಯಸ್ಥ ಕಳೆದ ವರ್ಷದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಬ್ಯಾಂಕ್‌ಮ್ಯಾನ್- ಫ್ರೈಡ್‌ ವಿರುದ್ಧವಾಗಿ ಸಾಕ್ಷಿಯನ್ನು ಕೂಡಾ ನೀಡಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸ್ಯಾಮ್ ಬ್ಯಾಂಕ್‌ಮಾನ್-ಫ್ರೈಡ್‌ ವಿರುದ್ಧ ದೂರು ದಾಖಲಾಗಿದೆ. ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್ ಮಂಗಳವಾರ (ಫೆಬ್ರವರಿ 28) ನಿಶಾದ್ ಸಿಂಗ್ ವಿರುದ್ಧ ದೂರು ದಾಖಲಿಸಿಕೊಂಡಿದೆ.

ನಿಶಾದ್ ಸಿಂಗ್ ನ್ಯೂಯಾರ್ಕ್‌ನ ಸದರ್ನ್ ಜಿಲ್ಲೆಯಲ್ಲಿ ತನ್ನ ವಿರುದ್ಧದ ಪ್ರತ್ಯೇಕ ಕ್ರಮದಲ್ಲಿ ಸರಕುಗಳ ವಂಚನೆ ಮತ್ತು ಇತರ ಆರೋಪಗಳಿಗೆ ತಪ್ಪಿತಸ್ಥ ಅರ್ಜಿಯನ್ನು ನಮೂದಿಸಿದ್ದಾರೆ. ಇನ್ನು ದೂರಿನ ಪ್ರಕಾರ ಎಫ್‌ಟಿಎಕ್ಸ್‌ನಲ್ಲಿ ಗ್ರಾಹಕರು ಹೂಡಿಕೆ ಮಾಡುವ ಮೊತ್ತವು ಅಲಾಮೆಡಾ ರಿಸರ್ಚ್‌ಗೆ ರಿಡೈರೆಕ್ಟ್ ಆಗುವಂತಹ ಸಾಫ್ಟ್‌ವೇರ್‌ ಅನ್ನು ಸಿಂಗ್ ಕ್ರಿಯೇಟ್ ಮಾಡಿದ್ದಾರೆ. ಆದರೆ ಎಫ್‌ಟಿಎಕ್ಸ್ ಸುರಕ್ಷಿತ ಎಂದು ಗ್ರಾಹಕರನ್ನು ನಂಬಿಸಲಾಗಿದೆ.

ಇಂತಹ ಹೇಳಿಕೆಗಳು ಸುಳ್ಳು ಮತ್ತು ದಾರಿತಪ್ಪಿಸುವಂತಹದ್ದು ಎಂದು ನಿಶಾದ್ ಸಿಂಗ್‌ಗೆ ತಿಳಿದಿತ್ತು ಅಥವಾ ತಿಳಿದಿರಬೇಕಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಬಂದ ಬಳಿಕ ಕ್ರಿಪ್ಟೋ ಇಂಡಸ್ಟ್ರೀಯಲ್ಲಿ ಭಾರೀ ಸಂಚಲನ ಉಂಟಾಗಿದೆ.

ನಡೆದದ್ದು ಏನು ನೋಡಿ?2022ರಲ್ಲಿ ಕ್ರಿಪ್ಟೋ ಹೂಡಿಕೆ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ವಯಸ್ಸು ಕೇವಲ 30 ವರ್ಷ. ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಸ್ಥಾಪಿಸಿ ವಂಡರ್ ಕಿಡ್ ಎನಿಸಿದ್ದ. ಬೈನಾನ್ಸ್ ಬಿಟ್ಟರೆ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಅದಾಗಿತ್ತು. ಆದರೆ, ಯಾವಾಗ ಬೈನಾನ್ಸ್ ಕಂಪನಿ ತನ್ನ ಸಮೀಪ ಸ್ಪರ್ಧಿ ಎಫ್‌ಟಿಎಕ್ಸ್ ಅನ್ನು ಖರೀದಿಸಲು ಮುಂದಾಯಿತೋ ಆಗ ಎಲ್ಲವೂ ಕುಸಿಯಲು ಆರಂಭವಾಯಿತು.

ಎಫ್‌ಟಿಎಕ್ಸ್‌ನ ಕರ್ಮಕಾಂಡಗಳ ಬಗ್ಗೆ ವದಂತಿ ರೂಪದಲ್ಲಿ ಸುದ್ದಿಗಳು ಹರಡಲು ಆರಂಭವಾಗಿವೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಬಂದವು. ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಸಿಇಒ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಜಾನ್ ಜೆ ರೇ ಅಧಿಕಾರ ಪಡೆದುಕೊಂಡರು. ಸೋಮವಾರ ಸ್ಯಾಮ್ ಬ್ಯಾಂಕ್‌ಮಾನ್-ಫ್ರೈಡ್ ಅನ್ನು ಬಹಮಾಸ್‌ನಲ್ಲಿ ಬಂಧನ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೆಂಪು ಗುಲಾಬಿಯಿಂದ ಮುಡಿ ಸಿಂಗರಿಸಿಕೊಂಡ ಅಪ್ಪು ಹೀರೋಯಿನ್!.

Fri Mar 3 , 2023
  ಮಾಲಿವುಡ್​ನಿಂದ ಬಂದ ನಾಯಕಿಯರೆಲ್ಲ ಸುಂದರವಾಗಿ ಇರ್ತಾರೆ ಅನ್ನುವ ನಂಬಿಕೆ ಇದೆ.ಅಲ್ಲಿಂದ ಬಂದ ನಾಯಕಿಯರನ್ನ ನೀವು ಗಮನಿಸಿದ್ರೆ ಅದು ನಿಜ ಕೂಡ ಅನಿಸುತ್ತದೆ.ನಟಸಾರ್ವಭೌಮ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್ ಈ ವಿಷಯದಲ್ಲಿ ಕೊಂಚ ಜಾಸ್ತಿನೇ ಸೌಂದರ್ಯದ ಗಣಿ ಅನಿಸುತ್ತಾರೆ ನೋಡಿ.ಅನುಪಮಾ ಪರಮೇಶ್ವರನ್ ಕಣ್ಣುಗಳು ಈಕೆಯ ಸೌಂದರ್ಯಕ್ಕೆ ಪೂರಕ ಅನಿಸುತ್ತವೆ. ಕರ್ಲಿ ಹೇರ್ ಈ ಬೆಡಗಿಯ ಬ್ಯುಟಿಯ ಮೌಲ್ಯ ಹೆಚ್ಚಿಸುತ್ತವೆ.ಅನುಪಮಾ ಪರಮೇಶ್ವರನ್ ಹೊಸ ಹೊಸ ರೀತಿಯ ಫೋಟೋಗಳನ್ನ ಫೋಟೊ ಶೂಟ್ ಮಾಡಿಸ್ತಾರೆ.ಸೋಷಿಯಲ್ […]

Advertisement

Wordpress Social Share Plugin powered by Ultimatelysocial