INSTAGRAM:ಇನ್‌ಸ್ಟಾಗ್ರಾಮ್‌ನ ‘ಟೇಕ್‌ ಎ ಬ್ರೇಕ್‌’ ಫೀಚರ್ಸ್‌;

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಬಳಕೆದಾರರ ನೆಚ್ಚಿನ ಫೊಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿರುವ ಇನ್‌ಸ್ಟಾಗ್ರಾಮ್‌ ತನ್ನ ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ “ಟೇಕ್ ಎ ಬ್ರೇಕ್” ಫಿಚರ್ಸ್‌ ಅನ್ನು ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿಯೂ ಹೊರತಂದಿದೆ.

ಈ ಫೀಚರ್ಸ್‌ ಮೂಲಕ ಬಳಕೆದಾರರು ಸೊಶೀಯಲ್‌ ಮೀಡಿಯಾದಿಂದ ಬ್ರೇಕ್‌ ತೆಗೆದುಕೊಳ್ಳುವಂತೆ ಕೇಳುತ್ತದೆ. ಜೊತೆಗೆ ಹೆಚ್ಚಿನ ಬ್ರೇಕ್‌ ಪಡೆದುಕೊಳ್ಳಲು ರಿಮೈಂಡರ್ಸ್‌ ಅನ್ನು ಸೆಟ್‌ ಮಾಡುವಂತೆ ಅವಕಾಶ ಕೂಡ ಸಿಗಲಿದೆ.

ಇನ್‌ಸ್ಟಾಗ್ರಾಮ್‌ಹೌದು, ಇನ್‌ಸ್ಟಾಗ್ರಾಮ್‌ ತನ್ನ ಬಹುನಿರೀಕ್ಷಿತ ಟೆಕ್‌ ಎ ಬ್ರೇಕ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ನೀವು ಸೊಶೀಯಲ್‌ ಮೀಡಿಯಾದಲ್ಲಿ ಮಧ್ಯಂತರ ವಿರಾಮವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಅಂದರೆ ಬಳಕೆದಾರರು ಹೆಚ್ಚು ಸಮಯ ಕಳೆಯುವ ಪ್ರತಿ ಬಾರಿ ಟೇಕ್ ಎ ಬ್ರೇಕ್ ಫೀಚರ್ಸ್‌ ಪಾಪ್ ಅಪ್ ಆಗುತ್ತದೆ. ನಿಮಗೆ ವಿರಾಮ ಬೇಕು ಎನಿಸಿದಾಗ ವಿರಾಮ ತೆಗೆದುಕೊಳ್ಳಬಹುದು. ಅಲ್ಲದೆ ಹೆಚ್ಚಿನ ಸಮಯ ಸೊಶೀಯಲ್‌ ಮೀಡಿಯಾದಲ್ಲಿ ಕಾಲ ಕಳೆದಂತೆ ನಿಮಗೆ ವಿರಾಮ ತೆಗೆದುಕೊಳ್ಳಲು ಆಲರ್ಟ್‌ ಅನ್ನು ಕೂಡ ನೀಡಲಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಸೇರಿರುವ ಹೊಸ ಟೆಕ್‌ ಎ ಬ್ರೇಕ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ನಲ್ಲಿ ಟೇಕ್‌ ಎ ಬ್ರೇಕ್‌ ಫೀಚರ್ಸ್‌ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ. ಇದರಿಂದ ನೀವು ಸೊಶೀಯಲ್‌ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆದಂತೆ ಬ್ರೇಕ್‌ ತೆಗೆದುಕೊಳ್ಳಲು ಅವಕಾಶ ನೀಡಲಿದೆ. ಅಲ್ಲದೆ ಮುಂದಿನ ಸಲ ಹೆಚ್ಚಿನ ಸಮಯ ಸೊಶೀಯಲ್‌ ಮೀಡಿಯಾ ಬಳಕೆಮಾಡಿದಾಗ ವಿರಾಮ ತೆಗೆದುಕೊಳ್ಳಲು ರಿಮೈಂಡರ್‌ ನೀಡುವಂತೆ ಸೆಟ್‌ ಮಾಡಲು ಅವಕಾಶ ನೀಡಲಾಗಿದೆ. ಇದಲ್ಲದೆ ಬ್ರೇಕ್‌ ಅನ್ನು ಪ್ರತಿಬಿಂಬಿಸಲು ಮತ್ತು ರಿಸೆಟ್‌ ಮಾಡಲು ಸಹಾಯ ಮಾಡಲು ತಜ್ಞರ ಬೆಂಬಲಿತ ಸಲಹೆಗಳನ್ನು ಸಹ ತೋರಿಸಲಾಗುತ್ತದೆ. ಸದ್ಯ ಈ ಫೀಚರ್ಸ್‌ ಬಗ್ಗೆ ಬಳಕೆದಾರರಿಗೆ ಅರಿವು ಮೂಡಿಸಲು, ಇನ್‌ಸ್ಟಾಗ್ರಾಮ್‌ ನೋಟಿಫಿಕೇಶನ್ ಕಳುಹಿಸಲಿದೆ.

ಟೇಕ್ ಎ ಬ್ರೇಕ್ ಫೀಚರ್ಸ್‌

ಇನ್ನು ಇನ್‌ಸ್ಟಾಗ್ರಾಮ್‌ ಭಾರತದಲ್ಲಿ ಟೇಕ್ ಎ ಬ್ರೇಕ್ ಫೀಚರ್ಸ್‌ ಅನ್ನು ಉತ್ತೇಜಿಸಲು ವಿ ದಿ ಯಂಗ್‌ನೊಂದಿಗೆ ಹೊಸ ‘ಬ್ರೇಕ್ ಜರೂರಿ ಹೈ’ ಅಭಿಯಾನವನ್ನು ನಡೆಸುವುದಾಗಿ ಘೋಷಿಸಿದೆ. ಈ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದ್ದು, ಯುವಕರು ಈ ಫೀಚರ್ಸ್‌ ಅನ್ನು ಬಳಸಬಹುದಾದ ಸಂದರ್ಭಗಳನ್ನು ಹೈಲೈಟ್ ಮಾಡಲಿದೆ. ಅಲ್ಲದೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಕಳೆದ ಸಮಯದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿಹೇಳುವ ಕೆಲಸವನ್ನು ಮಾಡಲಿದೆ. ಬಹುಭಾಷಾ ವಿಷಯವನ್ನು ತಯಾರಿಸಲು ಈ ಅಭಿಯಾನದ ಅಡಿಯಲ್ಲಿ ನಾವು ಯಂಗ್ ರಚನೆಕಾರರು, ಮಾನಸಿಕ ಆರೋಗ್ಯ ತಜ್ಞರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡಿದೆ.

ಫೀಚರ್ಸ್‌

ಇನ್‌ಸ್ಟಾಗ್ರಾಮ್‌ನ ಈ ಫೀಚರ್ಸ್‌ ಯುವಜನರ ಆತೋಗ್ಯದ ದೃಷ್ಟಿಯಿಂದ ಮಹತ್ವದಾಗಿದೆ. ಹೆಚ್ಚಿನ ಸಮಯ ಸೊಶೀಯಲ್‌ ಮೀಡಿಯಾದಲ್ಲಿ ಕಾಲ ಕಳೆಯುವವರಿಗೆ ವಿರಾಮ ನೀಡುವ ಮೂಲಕ ಅವರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದ ಸಮಯ ಉತ್ತಮವಾಗಿರಲಿದೆ ಎಂದು ಇನ್‌ಸ್ಟಾಗ್ರಾಮ್‌ ಹೇಳಿದೆ. ಇದಲ್ಲದೆ ಯುವಕರು, ಪೋಷಕರು ಮತ್ತು ಪೋಷಕರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅರ್ಥಪೂರ್ಣ ಅನುಭವ ನೀಡಲು ‘ಟೇಕ್ ಎ ಬ್ರೇಕ್’ ಪ್ರಾರಂಭಿಸಿದ್ದೇವೆ ಎಂದು ಹೇಳಿದೆ. ಜೊತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುರಕ್ಷಿತ ಮತ್ತು ಬೆಂಬಲದ ವಾತಾವರಣವನ್ನು ಸೃಷ್ಟಿಸಲು ನಮ್ಮ ಕೆಲಸವನ್ನು ಮುಂದುವರಿಸುವ ಗುರಿಯನ್ನು ಹೊಂದಿರುವುದಾಗಿ ಘೋಷಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಚರ್ಮದ ಅಗತ್ಯಗಳಿಗಾಗಿ ಮನೆಯಲ್ಲಿ ತಯಾರಿಸಿದ ಸೌಂದರ್ಯ ಬ್ರ್ಯಾಂಡ್ ಸ್ಕಿನ್‌ವರ್ಕ್ಸ್

Fri Feb 4 , 2022
  ಸ್ಕಿನ್‌ವರ್ಕ್ಸ್’ ಎಂಬುದು ಮನೆಯಲ್ಲಿ ತಯಾರಿಸಿದ ಸೌಂದರ್ಯ ಬ್ರಾಂಡ್ ಆಗಿದ್ದು ಅದು ಹೊಸದಾಗಿ ಕೈಯಿಂದ ಮಾಡಿದ ತ್ವಚೆ ಉತ್ಪನ್ನಗಳನ್ನು ನೀಡುತ್ತದೆ. ನೈಸರ್ಗಿಕ ಉತ್ಪನ್ನಗಳು ಚರ್ಮಕ್ಕೆ ಮೃದುವಾಗಿರುತ್ತವೆ ಏಕೆಂದರೆ ಅವುಗಳು ಯಾವುದೇ ಕಠಿಣವಾದ, ಸಂಕೋಚಕ ಪದಾರ್ಥಗಳನ್ನು ಹೊಂದಿರುವುದಿಲ್ಲ. ಉತ್ಪನ್ನವು 100% ನೈಸರ್ಗಿಕ, ಸಂರಕ್ಷಕ ಮತ್ತು ರಾಸಾಯನಿಕ-ಮುಕ್ತ, ಕ್ರೌರ್ಯ-ಮುಕ್ತ, ಕೈಯಿಂದ ತಯಾರಿಸಲ್ಪಟ್ಟಿದೆ ಮತ್ತು ಸಣ್ಣ ಬ್ಯಾಚ್‌ಗಳಲ್ಲಿ ತಯಾರಿಸಲಾಗುತ್ತದೆ. ಉತ್ಪನ್ನಗಳು ಸಸ್ಯಗಳು ಮತ್ತು ಹೂವುಗಳ ನಂಬಲಾಗದ ವಾಸನೆಯೊಂದಿಗೆ ಮೈಬಣ್ಣ ಮತ್ತು ಪೋಷಣೆಯನ್ನು ನೀಡುತ್ತವೆ ಮತ್ತು […]

Advertisement

Wordpress Social Share Plugin powered by Ultimatelysocial