ಪಂದ್ಯ ಸೋತರೂ ಪರವಾಗಿಲ್ಲ! ಪಂದ್ಯ ಗೆದ್ದ ಬಳಿಕ ಹಾರ್ದಿಕ್ ಪಾಂಡ್ಯ ಅಚ್ಚರಿಯ ಹೇಳಿಕೆ…

ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯವನ್ನು ರೋಚಕವಾಗಿ ಗೆಲ್ಲುವ ಮೂಲಕ ಟೀಂ ಇಂಡಿಯಾ 2023 ಅಭಿಯಾನವನ್ನು ಆರಂಭಿಸಿದೆ.ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 2 ರನ್‌ಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.ದೀಪಕ್ ಹೂಡಾ 23 ಎಸೆತಗಳಲ್ಲಿ 41 ರನ್ ಗಳಿಸಿ ಮಿಂಚಿದರು.ಈ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ 20 ಓವರ್ ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಗುವ 2 ರನ್‌ಗಳ ರೋಚಕ ಸೋಲು ಕಂಡಿತು. ಶಿವಂ ಮಾವಿ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್‌ನಿಂದ ಶ್ರೀಲಂಕಾ ಬ್ಯಾಟರ್ ಗಳನ್ನು ಕಟ್ಟಿಹಾಕಿದರು.23 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 41 ರನ್‌ ಗಳಿಸಿ ಭಾರತ ಸವಾಲಿನ ಮೊತ್ತ ಕಲೆಹಾಕಲು ಸಹಾಯ ಮಾಡಿದ ದೀಪಕ್ ಹೂಡಾ ಪಂದ್ಯದ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಈ ಗೆಲುವಿನ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯವನ್ನು ಸೋತಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.ಸೋತಿದ್ದರೂ ತಲೆಕೆಡಿಸಿಕೊಳ್ಳಲ್ಲಪಂದ್ಯ ಮುಗಿದ ನಂತರ ಮಾತನಾಡಿದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ, “ಒಂದೆರಡು ಪಂದ್ಯಗಳನ್ನು ಸೋತರೂ ಪರವಾಗಿಲ್ಲ, ಒತ್ತಡದಲ್ಲಿ ಗೆಲುವು ಸಾಧಿಸುವಂತೆ ತಂಡವನ್ನು ಸಿದ್ಧಪಡಿಸಲು ಬಯಸುತ್ತೇನೆ. ” ಎಂದು ಹೇಳಿದರು.2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಈಗಿನಿಂದಲೇ ಸಜ್ಜುಗೊಳಿಸುತ್ತಿದೆ. ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಪಾಂಡ್ಯ ನಾಯಕತ್ವದಲ್ಲಿ ಭಾರತ ಯುವ ಪಡೆ ಶ್ರೀಲಂಕಾ ವಿರುದ್ಧದ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಒತ್ತಡದಲ್ಲಿ ಪ್ರದರ್ಶನ ನೀಡಬೇಕು

ಎಲ್ಲಾ ಪಂದ್ಯಗಳಲ್ಲಿ ಸುಲಭವಾಗಿ ಜಯಿಸುವುದು ಸಾಧ್ಯವಿಲ್ಲ. ಆಟಗಾರರು ಈ ರೀತಿಯ ಒತ್ತಡದ ಪಂದ್ಯಗಳಲ್ಲಿ ಕೂಡ ಗೆಲ್ಲುವ ಸಾಮರ್ಥ್ಯ ಹೊಂದಿರಬೇಕು, ಒಂದೆರಡು ಪಂದ್ಯಗಳಲ್ಲಿ ಸೋತರೂ ಪರವಾಗಿಲ್ಲ. ಆದರೆ, ಇಂತಹ ಪಂದ್ಯಗಳನ್ನು ಗೆಲ್ಲಲು ತಂಡ ಸಿದ್ಧವಾಗಬೇಕು ಎಂದು ಪಾಂಡ್ಯ ಹೇಳಿದರು.”ಇಂತಹ ಕಷ್ಟಕರ ಸಂದರ್ಭಗಳಲ್ಲಿ ಆಡುವುದು ನಮಗೆ ದೊಡ್ಡ ಪಂದ್ಯಗಳಲ್ಲಿ ಸಹಾಯ ಮಾಡುತ್ತದೆ, ದ್ವಿಪಕ್ಷೀಯ ಸರಣಿಗಳು ನಮಗೆ ಸಿದ್ಧವಾಗಲು ಉತ್ತಮ ಅವಕಾಶಗಳಾಗಿವೆ.ಇಲ್ಲಿ ಕೆಲವು ಪಂದ್ಯಗಳನ್ನು ಸೋತರೂ ಪರವಾಗಿಲ್ಲ, ದೊಡ್ಡ ಪಂದ್ಯಾವಳಿಗಳಿಗೆ ಸಿದ್ಧವಾಗುವುದು ಮುಖ್ಯವಾಗಿದೆ” ಎಂದು ಹೇಳಿದರು.ಹಾರ್ದಿಕ್ ಪಾಂಡ್ಯ ಅಚ್ಚರಿಯ ನಿರ್ಧಾರ ಶ್ರೀಲಂಕಾ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲುವಿಗಾಗಿ 13 ರನ್ ಅಗತ್ಯವಿತ್ತು, ಹಾರ್ದಿಕ್ ಪಾಂಡ್ಯಗೆ ಇನ್ನೂ ಒಂದು ಓವರ್ ಮಾಡುವುದು ಬಾಕಿ ಇತ್ತು, ಎಲ್ಲರೂ ಪಾಂಡ್ಯ ಬೌಲಿಂಗ್ ಮಾಡುತ್ತಾರೆ ಎಂದು ನಂಬಿದ್ದರು, ಆದರೆ ಪಾಂಡ್ಯ ಅಕ್ಷರ್ ಪಟೇಲ್‌ಗೆ ಕೊನೆಯ ಓವರ್ ಬೌಲಿಂಗ್ ಮಾಡಲು ಕೇಳಿದರು.ನಾಯಕನ ನಂಬಿಕೆಯನ್ನು ಉಳಿಸಿಕೊಂಡ ಅಕ್ಷರ್ ಪಟೇಲ್‌ ಭಾರತಕ್ಕೆ 2 ರನ್‌ಗಳ ರೋಚಕ ಜಯ ತಂದುಕೊಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಉಪ್ಪಿಯ 'ಯುಐ'ನಲ್ಲಿ 'ಅವತಾರ್ 2' ಟೆಕ್ನಾಲಜಿ ಬಳಕೆ: ಇಡೀ ಸಿನಿಮಾದ ಬಜೆಟ್ ಇಷ್ಟು?

Wed Jan 4 , 2023
2022 ಮುಗೀತು. ದೊಡ್ಡ ಚಿತ್ರರಂಗವನ್ನು ಪಕ್ಕಕ್ಕೆ ತಳ್ಳಿದ್ದೂ ಆಯ್ತು. ಈಗ 2023ಕ್ಕೆ ಕಾಲಿಟ್ಟಿದ್ದೇವೆ. ಈ ವರ್ಷನೂ ಸ್ಯಾಂಡಲ್‌ವುಡ್ ಇದೇ ಚಮತ್ಕಾರವನ್ನೇ ಮಾಡುತ್ತಾ? ಇಂತಹದ್ದೊಂದು ಪ್ರಶ್ನೆ ಚಿತ್ರರಂಗದ ಮುಂದಿದೆ. ಆ ಪ್ರಶ್ನೆ ಅವರ ಮುಂದಿರೋ ಉತ್ತರ ‘ಯುಐ’.ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳುತ್ತಿರೋ ಸಿನಿಮಾ ‘ಯುಐ’. ಈ ಸಿನಿಮಾ ಈಗಾಗಲೇ ಅರ್ಧಕ್ಕಿಂತಲೂ ಹೆಚ್ಚು ಶೂಟಿಂಗ್ ಮಾಡಿ ಮುಗಿಸಿದೆ. ಉಪ್ಪಿನೇ ಡೈರೆಕ್ಟರ್ ಕ್ಯಾಪ್ ತೊಟ್ಟಿರೋದ್ರಿಂದ ಸಿನಿಪ್ರಿಯರ ನಿರೀಕ್ಷೆಯೇನು ಕಮ್ಮಿಯಿಲ್ಲ. ಉಪ್ಪಿ ಈ […]

Advertisement

Wordpress Social Share Plugin powered by Ultimatelysocial