ಜಾಲಹಳ್ಳಿ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ನಿಂದ ರಕ್ತದಾನ ನೇತ್ರದಾನ ಶಿಬಿರ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಮಾತ್ರೋ ಶ್ರೀ ಶಾಲಾ ಆವರಣದಲ್ಲಿ ನಮ್ಮ ಜಾಲಹಳ್ಳಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನ ಪ್ರಥಮ ವರ್ಷದ ವಾರ್ಷಿಕೋತ್ಸವ ಅಂಗವಾಗಿ ರಕ್ತದಾನ / ನೇತ್ರದಾನ ಶಿಬಿರ ಕಾರ್ಯಕ್ರಮ ಜರಗಿತು,

ಕಾರ್ಯಕ್ರಮದ ಕುರಿತು ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ// ಆರ್ ಎಸ್ ಹುಲಮನಿಗೌಡ ಮಾತನಾಡಿ ಎಲ್ಲಾ ದಾನಕ್ಕಿಂತ ರಕ್ತದಾನ ಶ್ರೇಷ್ಠವಾದದ್ದು, ಸದ್ಯದ ಪರಿಸ್ಥಿತಿಯಲ್ಲಿ ಇಂತಹ ಶಿಬಿರ ಬಹಳ ಅವಶ್ಯವಿದೆ.
ಗರ್ಭಿಣಿ ಸ್ತ್ರೀಯರಿಗೆ ಮತ್ತು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರಕ್ತ ಬಹಳ ಅವಶ್ಯಕತೆ ಇರುತ್ತದೆ

18 ರಿಂದ 60 ವರ್ಷದ ಆರೋಗ್ಯವಂತ ಜನರು ರಕ್ತದಾನ ಮಾಡಬೇಕು,ನಿರಂತರ ರಕ್ತದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಂಶ ಕರಗುತ್ತದೆ,
ಹೃದಯ ಘಾತವಾಗುವುದಿಲ್ಲ,
ಜೊತೆಗೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಲ್ಲಾ ದಾನಕ್ಕಿಂತ ರಕ್ತದಾನ ಶ್ರೇಷ್ಠ ಎಂದು ಅವರು ಹೇಳಿದರು,

ಇದೆ ಸಂದರ್ಭದಲ್ಲಿ ರಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ// ಗುರುರಾಜ ಕುಲಕರ್ಣಿ, ಮಾಜಿ ಜಿಲ್ಲಾ ಪಂ ಸದಸ್ಯರಾದ ಎಚ್ ಪಿ ಬಸವರಾಜ.ವೀರಣ್ಣ ಬಳೆ.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಯ್ಯಪ್ಪ ಗಣಜಿಲಿ ಮಠ .ಮಾತನಾಡಿದರು

ಶಿಬಿರದಲ್ಲಿ ಒಟ್ಟು 60 ಜನ ರಕ್ತದಾನ ಮಾಡಿದರೆ 50 ಜನ ನೇತ್ರದಾನ ಮಾಡಿದ್ದಾರೆ ಅಂತ ಸಂಸ್ಥೆಯ ಅಧ್ಯಕ್ಷ ಶಂಕರ್ ಬಳೆ ಹೇಳಿದರು,

ಇದೆ ಸಂದರ್ಭದಲ್ಲಿ ನಮ್ಮ ಜಾಲಹಳ್ಳಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಶಂಕರ್ ಬಳೆ, ಮಾಜಿ ಜಿ ಪಂ ಸದಸ್ಯರಾದ ವೀರಣ್ಣ ಪಾಣಿ. ಗ್ರಾ ಪಂಚಾಯತಿ ಸದಸ್ಯರಾದ ತಿಮ್ಮಣ್ಣ ನಾಯಕ ದಿವಾನ.ರಂಗಪ್ಪ ಬಂಡಿ, ಶರಣು ಹುಣಸಿಗಿ, ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ... ಮಾಜಿ ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ದೂರು,

Wed Jul 27 , 2022
ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ವೈ ಸಂಪಂಗಿ ಅವರಿಗೆ ಕೊಲೆ ಬೆದರಿಕೆ, ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ಎಸ್.ರಾಜೇಂದ್ರನ್ ಅವರ ಬೆಂಬಲಿಗರಿಂದ ಕೊಲೆ ಬೆದರಿಕೆ, ಇತ್ತೀಚಿಗೆ ಅಂಬೇಡ್ಕರ್ ಭವನ ನಿರ್ಮಾಣ ವಿಚಾರವಾಗಿ ಪರ ವಿರೋಧ ಹೇಳಿಕೆಗಳನ್ನು ಕೊಟ್ಟಿದ್ದ ಉಭಯ ಮುಖಂಡರು, ಕೆಜಿಎಫ್ ಎಸ್ಪಿ ಧರಣಿದೇವಿ ಅವರಿಗೆ ದೂರು ನೀಡಿದ ಮಾಜಿ ಶಾಸಕ ವೈ ಸಂಪಂಗಿ, ಬಿಜೆಪಿ ಸಂಘಟನೆ, RSS, ವಿಶ್ವಹಿಂದುಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ […]

Advertisement

Wordpress Social Share Plugin powered by Ultimatelysocial