James: ಒಂದೇ ಸಿನಿಮಾದಲ್ಲಿ ಅಣ್ಣಾವ್ರ ಮೂರು ಮುತ್ತುಗಳು.

ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ನಟಿಸಿದ್ದ ಕೊನೇ ಸಿನಿಮಾ ‘ಜೇಮ್ಸ್‌’  ನ ಶೂಟಿಂಗ್ ಮುಕ್ತಾಯಗೊಂಡಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಇಷ್ಟು ವರ್ಷಗಳಿಂದ ಒಂದೇ ಸಿನಿಮಾದಲ್ಲಿ ಶಿವಣ್ಣ  ರಾಘಣ್ಣ  ಅಪ್ಪು  ಅವರನ್ನು ನೋಡುವ ಆಸೆ ಕೂಡ ಈಡೇರಿದೆ. ಹೌದು, ‘ಜೇಮ್ಸ್‌’ನ ಬಹುಪಾಲು ಶೂಟಿಂಗ್ ಮುಗಿದಿತ್ತು. ಆದರೆ, ಸಿನಿಮಾ ತೆರೆಗೆ ಬರುವ ಮುನ್ನವೇ ಪುನೀತ್ ಎಲ್ಲರನ್ನು ಬಿಟ್ಟು ಹೋಗಿದ್ದು ದುರದೃಷ್ಟಕರ. ಇದೀಗ ನಿರ್ದೇಶಕ ಚೇತನ್‌ಕುಮಾರ್ ಅವರು ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದಾರೆ. ಜನವರಿ 21 ಚಿತ್ರದ ಕೊನೇ ಶೂಟಿಂಗ್ ಮುಗಿಸಿ,ಕುಂಬಳಕಾಯಿ ಒಡೆದಿತ್ತು ಚಿತ್ರತಂಡ. ಇದೀಗ ಜೇಮ್ಸ್  ಸಿನಿಮಾದಲ್ಲಿ ನಟಿಸುರುವುದರ ಬಗ್ಗೆ ರಾಘವೇಂದ್ರ ರಾಜ್​ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ನಮ್ಮನೆಲ್ಲ ಬಿಟ್ಟು ಹೋಗಿರುವುದು ಇಂದಿಗೂ ಯಾರಿಗೂ ನಂಬಲು ಆಗುತ್ತಿಲ್ಲ. ಅಪ್ಪು ಅವರನ್ನು ನೆನದು ಪ್ರತಿದಿನ ಕರುನಾಡು ಕಣ್ಣೀರಿಡುತ್ತಿದೆ. ಇನ್ನೂ ಕಣ್ಣ ಮುಂದೆಯೇ ಸೋದರ ಹೀಗೆ ಬಿಟ್ಟು ಹೋಗಿರುವುದು ಶಿವರಾಜ್​ ಕುಮಾರ್​ ಹಾಗೂ ರಾಘವೇಂದ್ರ ರಾಜ್​ಕುಮಾರ್ ಅವರ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಪ್ಪು ಬದುಕಿದ್ದಾಗ, ಸೋದರರನ್ನು ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಇದೀಗ ಅಪ್ಪು, ರಾಘಣ್ಣ, ಶಿವಣ್ಣ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಇದನ್ನು ನೋಡಲು ಅಪ್ಪುನೇ ಇಲ್ಲ..

ಒಟ್ಟಿಗೆ ನಟಿಸಬೇಕು ಅನ್ನೋದು ಅಮ್ಮನ ಆಸೆಯಾಗಿತ್ತು ಎಂದ ರಾಘಣ್ಣ

ಜೇಮ್ಸ್ ಚಿತ್ರದಲ್ಲಿ ನಟನೆ ಬಗ್ಗೆ ರಾಘವೇಂದ್ರ ರಾಜ್ ಕುಮಾರ್  ಪ್ರತಿಕ್ರಿಯೆ ನೀಡಿದ್ದಾರೆ. ‘ಅಪ್ಪಾಜಿ, ನಾನು ಅಪ್ಪು ,ಶಿವಣ್ಣ ಒಟ್ಟಿಗೆ ನಟಿಸಬೇಕು ಅನ್ನೋದು ಅಮ್ಮನ ಆಸೆ ಆಗಿತ್ತು. ಒಂದು ದಿನ ಅಮ್ಮ, ಅಪ್ಪಾಜಿ ಜೊತೆ ಇದರ ಬಗ್ಗೆ ಚರ್ಚೆ ಕೂಡ ಮಾಡಿದ್ದರು. ಅಗ ಅಪ್ಪಾಜಿ ದೇವರು ಎಲ್ಲಾ ಕೊಡ್ತಾನೆ ಅಂತ ಹೇಳೊಕೆ ಆಗಲ್ಲ ಅಂದಿದ್ದರು. ಕೊನೆಗೂ ಅದೇ ರೀತಿ ಅಯ್ತು ಅಪ್ಪಾಜಿ ಜೊತೆ ನಾವೇಲ್ಲ ನಟಿಸೋಕೆ ಆಗಲಿಲ್ಲ. ಅಮ್ಮ ನೀವು ಮೂರು ಜನ ಒಟ್ಟಿಗೆ ನಟಿಸಿ ಅಂತ ಸಾಕಷ್ಟು ಸಲ ಹೇಳಿದ್ದರು. ಅದರಂತೆ ಜೇಮ್ಸ್​ ಚಿತ್ರದಲ್ಲಿ ನಾವು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

CRICKET:"MS ಧೋನಿ ಹೋಗಿಲ್ಲ" ಹಿಂದಿನ ಕಾರಣವನ್ನು ದಿನೇಶ್ ಕಾರ್ತಿಕ್ ವಿವರಿಸಿದರು;

Mon Jan 24 , 2022
ಕೆಲವು ವರ್ಷಗಳ ಹಿಂದೆ, ಭಾರತೀಯ ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ತಮ್ಮ ಆಟದ ಮೇಲಿದ್ದರು, ಟೀಮ್ ಇಂಡಿಯಾಕ್ಕೆ ಪ್ರಮುಖ ಪಂದ್ಯಗಳನ್ನು ಗೆದ್ದರು, ವಿಶೇಷವಾಗಿ ಆಟದ ಕಡಿಮೆ ಸ್ವರೂಪದಲ್ಲಿ. ಆದಾಗ್ಯೂ, ಕಳೆದೆರಡು ವರ್ಷಗಳಿಂದ, ಇಬ್ಬರೂ ಆಟಗಾರರು ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ, ಇದು ಅವರ ಆಟದ ಸಮಯದ ಕೊರತೆಯಿಂದ ಕೂಡಿದೆ. ಭಾರತ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್‌ನಲ್ಲಿ 2019 ರ ವಿಶ್ವಕಪ್ ನಂತರ ತಮ್ಮ ಹೋರಾಟದ ಹಿಂದಿನ ಕಾರಣಗಳನ್ನು […]

Advertisement

Wordpress Social Share Plugin powered by Ultimatelysocial