ಜಾನಪದ ವಾಹಿನಿ ಸೊಬಗಿನೊಂದಿಗೆ ಹಂಪಿ ಉತ್ಸವದ ಸಮಾರೋಪ.

ಮೂರು ದಿನಗಳ‌ ಹಂಪಿ ಉತ್ಸವದ ಅಂತಿಮ ದಿನವಾದ ಇಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಾಲಯದವರೆಗೆ ಸಾಗಿ ಬಂದ 60 ಕ್ಕೂ ಹೆಚ್ಚು ಜನೊದ ಕಲಾ ತಂಡಗಳ ಜನಪದ ವಾಹಿನಿ ಆಕರ್ಷಕ ಮೆರವಣಿಗೆಯೊಂದಿಗೆ ಹಂಪಿ ಉತ್ಸವದ ಸಮಾರೋಪಕ್ಕೆ ನಾಂದಿಯಾಯ್ತು.ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಾಯಿ ಭುವನೇಶ್ವರ ದೇವಿಗೆ ಪೂಜೆ ನೆರವೇರಿಸುವುದರ ಮೂಲಕ ಜಾನಪದ ವಾಹಿನಿ ಮೆರವಣಿಗೆಗೆ ಚಾಲನೆ ನೀಡಿದರು. ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆ ನಾಡಿನ ಗ್ರಾಮೀಣ ಭಾಗದ ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು.ವಿದೇಶಿ ಪ್ರವಾಸಿಗರು ಸಹ ಜಾನಪದ ಕಲೆಗಳಿಗೆ ಮನಸೋತು ವಿಡಿಯೋ, ಪೋಟೋ ತೆಗೆದುಕೊಂಡು ಸಂಭ್ರಮಿಸಿದರು. ವಿದೇಶಿ ಮಹಿಳೆ ಜನಪದ ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ದೇವಾಲಯದ ಆನೆ, ಹಂಪಿ ಸ್ಮಾರಕಗಳ ಸ್ಥಬ್ದ ಚಿತ್ರ ಮೆರವಣಿಗೆಯ ಸೊಬಗನ್ನು ಮತ್ತಷ್ಟು ಹೆಚ್ಚಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇದು ಚಲನಚಿತ್ರದಲ್ಲಿ ನಟಿಸಲು ಬಯಸುವವರಿಗೆ ಫಿಸಿಕಲ್ ಫಿಟ್ನೆಸ್ ಮತ್ತು ಸೆಲ್ಫ್ ಡಿಫೆನ್ಸ್‌ ಕುರಿತು ಶಿಕ್ಷಣ ನೀಡುವ ಸಂಸ್ಥೆ .

Mon Jan 30 , 2023
ಪ್ರತಿಯೊಬ್ಬ ಮನುಷ್ಯನು ತಾನು ದೈಹಿಕವಾಗಿ ಆರೋಗ್ಯವಾಗಿರಬೇಕೆಂದು ಬಯಸುತ್ತಾನೆ. ಅದರಲ್ಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸಕ್ತಿ ಇರುವವರಿಗಂತೂ ಫಿಸಿಕಲ್ ಫಿಟ್ನೆಸ್ ಬಹು ಮುಖ್ಯ. ಇದರ ಬಗ್ಗೆ ಸರಿಯಾದ ಶಿಕ್ಷಣ ನೀಡಲು ಬೆಂಗಳೂರಿನ ಹೃದಯ ಭಾಗವಾದ ಗಾಂಧಿ ಬಜಾರ್ ನಲ್ಲಿ “Combat warriors”* ಎಂಬ ಸಂಸ್ಥೆ ಆರಂಭವಾಗಿದೆ. ಇತ್ತೀಚೆಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಗ್ರ್ಯಾಂಡ್ ಮಾಸ್ಟರ್ ಎಂ ಹೆಚ್ ಅಬೀದ್, ನಾನು ಈ ತನಕ ದೇಶ ಹಾಗೂ ವಿದೇಶಗಳಲ್ಲಿ ಚಿತ್ರನಟರ […]

Advertisement

Wordpress Social Share Plugin powered by Ultimatelysocial