ಪ್ರೇಯಸಿಗಾಗಿ ಚಿನ್ನಾಭರಣ ಕಳ್ಳತನ:

ಚಾಮರಾಜನಗರ, ಫೆಬ್ರವರಿ 4: ಅಡುಗೆ ಮನೆಯ ಕಿಟಕಿ ಸರಳು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರೇಮಿಗಳು ಸೇರಿ ಮೂವರನ್ನು ಚಾಮರಾಜನಗರ ಜಿಲ್ಲೆ ಪೊಲೀಸರು ಜೈಲಿಗಟ್ಟಿದ್ದಾರೆ.

ಭರತ್ ಹಾಗೂ ಕಾವ್ಯ, ಲೋಹಿತ್ ಕುಮಾರ್ ಬಂಧಿತ ಆರೋಪಿಗಳು.

ಭರತ್ ಹಾಗೂ ಕಾವ್ಯ ಪ್ರೇಮಿಗಳಾದ್ದು, ಹಣದ‌ ಮೋಹಕ್ಕೆ ಬಿದ್ದು ಭರತ್ ಚಿನ್ನವನ್ನು ಕದ್ದು ಕಾವ್ಯಳಿಗೆ ತಂದು ಕೊಟ್ಟಿದ್ದ. ಈ ಪ್ರೇಮಿಗಳಿಗೆ ಲೋಹಿತ್ ಎನ್ನುವಾತ ಸಹಾಯ ಮಾಡಿದ್ದು, ಸದ್ಯ ಆತನೂ ಜೈಲುಪಾಲಾಗಿದ್ದಾನೆ.

ಕೊಳ್ಳೇಗಾಲದ ಶ್ರೀಬಸವೇಶ್ವರ ನಗರದ ನಿವಾಸಿ ಹಾಗೂ ದತ್ತ ಮೆಡಿಕಲ್ ಮಾಲೀಕ ವಿನಯ್ ಅವರ ಮನೆಯಲ್ಲಿ ಜನವರಿ 18ರಂದು ಕಿಟಕಿ ಸರಳನ್ನು ಕತ್ತರಿಸಿ ಒಳ ನುಗ್ಗಿದ ಖದೀಮರು 513 ಗ್ರಾಂ ಚಿನ್ನಾಭರಣ ಹಾಗೂ 49 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದರು.

ದತ್ತ ಮೆಡಿಕಲ್ ಮಾಲೀಕ ವಿನಯ್ ಅವರು ಭಾವನ ಮನೆ ಶಿವಮೊಗ್ಗಕ್ಕೆ ಹೋಗಿದ್ದರು. ಇವರ ಪತ್ನಿ ರಶ್ಮಿ ಮನೆಗೆ ಬೀಗ ಹಾಕಿಕೊಂಡು ಅಂಗಡಿಗೆ ಬಂದಿದ್ದ ವೇಳೆ, ವಿನಯ್ ಅವರ ಹಿರಿಯ ಸಹೋದರ ನಾಗರಾಜು ಬಾಬು ಅವರ ಮೆಡಿಕಲ್ ಅಂಗಡಿಯಲ್ಲಿ 10 ವರ್ಷದಿಂದ ನಂಬಿಕಸ್ಥ ನೌಕರನಾಗಿ ಕೆಲಸ ಮಾಡುತ್ತಿದ್ದ ಭರತ್ ಈ ಕೃತ್ಯ ಎಸಗಿದ್ದಾನೆ.

ವಿನಯ್ ಅವರ ಮನೆಯಲ್ಲಿ ಯಾರೂ ಇಲ್ಲ ಎನ್ನುವುದನ್ನು ಅರಿ ಭರತ್ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ. ಕೊಳ್ಳೇಗಾಲದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ, ಮೈಸೂರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಪ್ರೇಯಸಿಗೆ ಕೊಟ್ಟು ಅದನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ. ಇವರ ಜೊತೆ ಭರತ್ ಸ್ನೇಹಿತ ಲೋಹಿತ್ ಕುಮಾರ್ ಸಹ ಕೈ ಜೋಡಿಸಿದ್ದಾನೆ.

ಇತ್ತ ಚಿನ್ನಾಭರಣ ಕಳ್ಳತನ ಪ್ರಕರಣ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 513 ಗ್ರಾಂ ಚಿನ್ನಾಭರಣ, 20 ಸಾವಿರ ರೂಪಾಯಿ ನಗದು, ಒಂದು ಬೈಕ್, ಒಂದು ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರ್ಚ್‌ನಲ್ಲಿ ಮಗುವನ್ನು ಸ್ವಾಗತಿಸಲಿರುವ ಕೇರಳದ ಟ್ರಾನ್ಸ್‌ಜೆಂಡರ್ ದಂಪತಿ.

Sat Feb 4 , 2023
ಕೋಯಿಕ್ಕೋಡ್ ಫೆಬ್ರವರಿ 4: ಕೇರಳದ ಕೋಯಿಕ್ಕೋಡ್‌ನಲ್ಲಿ ಲಿಂಗ ಬದಲಿಸಿಕೊಂಡ ದಂಪತಿ ದೇಶದ ಮೊದಲ ಟ್ರಾನ್ಸ್‌ಜೆಂಡರ್ ಪೋಷಕರಾಗಲಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಗರ್ಭಧಾರಣೆಯ ಮೂಲಕ ಗರ್ಭಿಣಿಯಾದ 23 ವರ್ಷದ ಟ್ರಾನ್ಸ್ ಮ್ಯಾನ್ ಜಹಾದ್ ಪಾವಲ್ ಮಾರ್ಚ್‌ನಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ. ಪಾವಲ್ ಅವರ ಪಾಲುದಾರರಾಗಿರುವ 21 ವರ್ಷದ ಟ್ರಾನ್ಸ್‌ವುಮನ್ ಜಿಯಾ ಗರ್ಭಧಾರಣೆಯ ಬಗ್ಗೆ ತನ್ನ ಇತ್ತೀಚಿನ ಇನ್ಸಾಗ್ರಾಮ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಜಹಾದ್ ಗರ್ಭಧರಿಸಲು ಸಾಧ್ಯವಾಗುತ್ತದೆ ಎಂದು ದಂಪತಿಗಳು ಅರಿತುಕೊಂಡರು. […]

Advertisement

Wordpress Social Share Plugin powered by Ultimatelysocial