TOLLYWOOD:ಮಹೇಶ್ ಬಾಬು 28ನೇ ಸಿನಿಮಾಗೆ ಶ್ರೀಲೀಲಾ ನಾಯಕಿ;

 ನಟಿ ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಕನ್ನಡದಲ್ಲಿ ಅವರು ‘ಕಿಸ್‌’, ‘ಭರಾಟೆ’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಆ ಸಿನಿಮಾಗಳ ನಂತರ ಅವರಿಗೆ ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾ ಸಿಕ್ಕಿತ್ತು.

ಬಾಕ್ಸ್ ಆಫೀಸ್‌ನಲ್ಲಿ ‘ಪೆಳ್ಳಿ ಸಂದಡಿ’ ಅಷ್ಟೇನೂ ದೊಡ್ಡ ಮ್ಯಾಜಿಕ್ ಮಾಡದೇ ಇದ್ದರೂ, ಶ್ರೀಲೀಲಾ ಮಾತ್ರ ತೆಲುಗಿನಲ್ಲಿ ಹೆಸರು ಮಾಡಿದರು. ಅವರಿಗೀಗ ಸಾಲು ಸಾಲು ಸಿನಿಮಾಗಳ ಆಫರ್‌ ಸಿಕ್ಕಿದೆ.

ಈ ಮಧ್ಯೆ ಮಹೇಶ್ ಬಾಬು ಸಿನಿಮಾದಿಂದಲೂ ಅವರಿಗೆ ಆಫರ್ ಸಿಕ್ಕಿದೆ. ಮಹೇಶ್ ಬಾಬು ಅಭಿನಯದ 28ನೇ ಸಿನಿಮಾಕ್ಕೆ ಈಚೆಗಷ್ಟೇ ಮುಹೂರ್ತ ನೆರವೇರಿದೆ. ಈ ಸಿನಿಮಾವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭಗೊಳ್ಳಲಿದೆ.

ಮೂಲಗಳ ಪ್ರಕಾರ ಮಹೇಶ್ ಬಾಬು ಮಾಡಲಿರುವ ಹೊಸ ಸಿನಿಮಾಗೆ ಶ್ರೀಲೀಲಾ ಇಬ್ಬರು ನಾಯಕಿಯರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಹುಲ್ ಗಾಂಧಿ ದಾರಿ ತಪ್ಪಿದ್ದಾರೆ, ಪಂಜಾಬ್ ಸಿಎಂ ಚನ್ನಿ ಬಡವರಲ್ಲ, ನಮಗಿಂತ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ: ನವಜೋತ್ ಸಿಂಗ್ ಸಿಧು ಪತ್ನಿ

Tue Feb 8 , 2022
  ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಬಡವ ಎಂದು ಪರಿಗಣಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಾರಿತಪ್ಪಿಸಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಮಂಗಳವಾರ ಹೇಳಿದ್ದಾರೆ. ಚನ್ನಿ ಮೇಲೆ ಬಿರುಸಿನ ದಾಳಿಯನ್ನು ಆರಂಭಿಸಿದ ಕೌರ್, ತನ್ನ ಪತಿ ಉನ್ನತ ಹುದ್ದೆಗೆ ಉತ್ತಮ ಆಯ್ಕೆಯಾಗಿದ್ದರು ಮತ್ತು ಆರು ತಿಂಗಳೊಳಗೆ ರಾಜ್ಯವನ್ನು ಪರಿವರ್ತಿಸಬಹುದಿತ್ತು ಎಂದು ಒತ್ತಿ ಹೇಳಿದರು. ಪಂಜಾಬ್‌ನ ಹಾಲಿ […]

Advertisement

Wordpress Social Share Plugin powered by Ultimatelysocial