12 ದಿನದಲ್ಲಿ 5.4 ಸೆ.ಮೀ ಮುಳುಗಿದ ಜೋಶಿಮಠ.

ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂ.ಮೀಟರ್‌ನಷ್ಟು ಮುಳುಗಿದೆ, ಭವಿಷ್ಯದಲ್ಲಿ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಈ ಬಗ್ಗೆ ಇಸ್ರೋ ಅಧ್ಯಯನ ಕೈಗೊಂಡಿದ್ದು, ಸಂಸ್ಥೆಯ ದೂರಸಂವೇದಿ ಕೇಂದ್ರವು ಜೋಶಿಮಠ ನಗರದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ನಿಧಾನವಾಗಿ ಭೂಮಿ ಹೇಗೆ ಮುಳುಗುತ್ತಿದೆ ಎಂಬುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.

ಡಿ.27ರಿಂದ ಜ.8ರವೆಗಿನ ಚಿತ್ರಗಳು ಇದಾಗಿದ್ದು, ಈ ಸಂದರ್ಭದಲ್ಲಿ ಭೂಮಿ 5.4 ಸೆಂ.ಮೀಟರ್‌ನಷ್ಟು ಕುಸಿದಿರುವುದು ಕಂಡು ಬಂದಿದೆ. ಆರ್ಮಿ ಹೆಲಿಪ್ಯಾಡ್ ಮತ್ತು ನರಸಿಂಗ್ ದೇಗುಲ ಸೇರಿದಂತೆ ಮಧ್ಯ ಜೋಶಿಮಠದಲ್ಲಿ ಸಬ್ಸಿಡೆನ್ಸ್ ಝೋನ್ ಇದೆ ಎಂದು ಚಿತ್ರಗಳು ತೋರಿಸುತ್ತಿದೆ.

ಜೋಶಿಮಠದಲ್ಲಿ ಈಗಾಗಲೇ ಚಮೋಲಿ ಜಿಲ್ಲಾಡಳಿತ ಭೂಕುಸಿತ ಪ್ರದೇಶ ಎಂದು ಘೋಷಿಸಿದೆ. ಇನ್ನು ಎರಡು ಹೊಟೇಲ್‌ಗಳನ್ನು ನೆಲಸಮಗೊಳಿಸಲು ಆರಂಭಿಸಿದ್ದು, ಹವಾಮಾನ ವೈಪರೀತ್ಯದಿಂದ ಹೊಟೇಲ್ ನೆಲಸಮ ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳಾ ಕ್ರಿಕೆಟರ್​ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆ.

Fri Jan 13 , 2023
ಕಟಕ್​: ನಿಗೂಢವಾಗಿ ನಾಪತ್ತೆಯಾಗಿದ್ದ ಒಡಿಶಾದ ಮಹಿಳಾ ಕ್ರಿಕೆಟರ್​ ರಾಜಶ್ರೀ ಸ್ವೈನ್,​ ದಟ್ಟ ಅರಣ್ಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಟಕ್​ ನಗರದಿಂದ ರಾಜಶ್ರೀ ನಾಪತ್ತೆಯಾಗಿದ್ದರು. ಆಕೆಯ ಸ್ಕೂಟರ್ ಅಥಾಗಢ ಏರಿಯಾದ ಅರಣ್ಯ ಪ್ರದೇಶದಲ್ಲಿ​ ಪತ್ತೆಯಾಗಿತ್ತು. ಇದೀಗ ಆಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ರಾಜಶ್ರೀ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯದ ಬಳಿ ರಾಜಶ್ರೀ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆಕೆಯ ಕೊನೆಯ ಮೊಬೈಲ್ ನೆಟ್‌ವರ್ಕ್ ಸ್ಥಳವನ್ನು […]

Advertisement

Wordpress Social Share Plugin powered by Ultimatelysocial