ಮುಂಬೈ: ತೆಲುಗು ಸಿನಿಮಾ ಕಥೆಗಳಿಗೆ ಬಾಲಿವುಡ್​ ಮಂದಿ ಫಿದಾ ಆಗುತ್ತಿದ್ದಾರೆ.

ಮುಂಬೈ:ತೆಲುಗು ಸಿನಿಮಾ ಕಥೆಗಳಿಗೆ ಬಾಲಿವುಡ್​ ಮಂದಿ ಫಿದಾ ಆಗುತ್ತಿದ್ದಾರೆ. ಅಲ್ಲಿನ ಜನ ತೆಲುಗು ಸಿನಿಮಾಗಳನ್ನ ಇಷ್ಟ ಪಟ್ಟು ನೋಡ್ತಿದ್ದಾರೆ. ಅದರಿಂದಾಗಿ ಬಾಲಿವುಡ್​ ನಟರು ಸಹ ಈಗಟಾಲಿವುಡ್ ಸಿನಿಮಾಗಳ ಮೇಲೆ ಕಣ್ಣು ಇಟ್ಟಿದ್ದಾರೆ.​ಈಗಾಗಲೇ ಹಲವು ಸಿನಿಮಾಗಳನ್ನು ಬಾಲಿವುಡ್​ಗೆ ರಿಮೇಕ್​ ಮಾಡಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಗೆಲ್ಲೋಕೆ ಇದು ಸುಲಭ ತಂತ್ರ ಎಂಬುದನ್ನು ಬಾಲಿವುಡ್​ ನಿರ್ಮಾಪಕರು ಕಂಡುಕೊಂಡಿದ್ದಾರೆ. ಹೀಗಾಗಿ, ದಕ್ಷಿಣ ಭಾರತದ ಸೂಪರ್​ ಹಿಟ್​ ಚಿತ್ರಗಳನ್ನು ರಿಮೇಕ್​ ಮಾಡೋಕೆ ಅವರು ಕೊಂಚವೂ ಹಿಂದೇಟು ಹಾಕುವುದಿಲ್ಲ. ನಟ ಶಾಹಿದ್​ ಕಪೂರ್​ ಕೂಡ ರಿಮೇಕ್​ ಚಿತ್ರಗಳಲ್ಲಿ ನಟಿಸೋಕೆ ಸಾಕಷ್ಟು ಉತ್ಸುಕತೆ ತೋರುತ್ತಿದ್ದಾರೆ. ತೆಲುಗಿನ ‘ಅರ್ಜುನ್​ ರೆಡ್ಡಿ’ ಚಿತ್ರವನ್ನು​ ‘ಕಬೀರ್​ ಸಿಂಗ್’ ಆಗಿ ಹಿಂದಿಗೆ ರಿಮೇಕ್​ ಮಾಡಲಾಗಿತ್ತು. ಇದು ಶಾಹಿದ್​ ಕಪೂರ್​ ವೃತ್ತಿ ಜೀವನಕ್ಕೆ ದೊಡ್ಡ ಹಿಟ್​ ನೀಡಿತ್ತು. ಆ ಬಳಿಕ ನಾನಿ ನಟನೆಯ​ ‘ಜೆರ್ಸಿ’ ಚಿತ್ರದ ರಿಮೇಕ್​ನಲ್ಲಿ ಶಾಹಿದ್​ ಕಪೂರ್ ಬಣ್ಣ ಹಚ್ಚಿದ್ದಾರೆ. ಇದಕ್ಕೆ ಹಿಂದಿಯಲ್ಲೂ ‘ಜೆರ್ಸಿ’ ಎಂದು ಹೆಸರು ಇಡಲಾಗಿದೆ. ಈ ಮಧ್ಯೆ ಮತ್ತೊಂದು ಟಾಲಿವುಡ್​​ ಚಿತ್ರದ ಮೇಲೆ ಶಾಹಿದ್​ ಕಪೂರ್​ ಕಣ್ಣಿಟ್ಟಿದ್ದಾರೆ.ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ‘ಶ್ಯಾಮ್​ ಸಿಂಗ ರಾಯ್​’ ಚಿತ್ರಕ್ಕೆ ನಾನಿ ಹೀರೋ. ಅವರ ಜತೆ ಸಾಯಿ ಪಲ್ಲವಿ, ಕೃತಿ ಶೆಟ್ಟಿ, ಮಡೋನ್ನಾ ಸೆಬಾಸ್ಟಿಯನ್​ ಕೂಡ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಒಟಿಟಿಯಲ್ಲಿ ರಿಲೀಸ್​ ಆಗಿ ಚಿತ್ರ ಹೆಚ್ಚು ಸದ್ದು ಮಾಡಿದೆ. ಪುನರ್ಜನ್ಮದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರ ಯಶಸ್ಸು ಕಂಡಿರುವುದರಿಂದ ಅನೇಕ ಬಾಲಿವುಡ್​ ನಿರ್ಮಾಪಕರು ಇದರ ರಿಮೇಕ್ ಹಕ್ಕನ್ನು ಪಡೆಯಲು ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಶಾಹಿದ್ ಕಪೂರ್​ ಅವರು ‘ಶ್ಯಾಮ್​ ಸಿಂಗ ರಾಯ್​’ ಚಿತ್ರವನ್ನು ವೀಕ್ಷಣೆ ಮಾಡಿದ್ದು. ಅವರಿಗೆ ಚಿತ್ರದ ಕಥೆ ತುಂಬಾನೇ ಇಷ್ಟವಾಗಿದೆ. ಹೀಗಾಗಿ, ಚಿತ್ರದ ರಿಮೇಕ್​ ಮಾಡೋಕೆ ಅವರು ಉತ್ಸಾಹ ತೋರಿಸಿದ್ದಾರೆ ಎನ್ನಲಾಗಿದೆ. ಯಾವ ನಿರ್ಮಾಪಕರು ಈ ಚಿತ್ರದ ರಿಮೇಕ್​ ಹಕ್ಕು ಪಡೆದುಕೊಳ್ಳುತ್ತಾರೆ, ಇದರ ನಿರ್ದೇಶನವನ್ನು ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿ20 ವಿಶ್ವಕಪ್‌ 2022: ಕೇವಲ 2 ನಿಮಿಷದಲೇ ಇಂಡೋ-ಪಾಕ್‌ ಪಂದ್ಯದ ಟಿಕೆಟ್‌ ಸೋಲ್ಡ್‌ ಔಟ್!

Tue Feb 8 , 2022
ನವದೆಹಲಿ: ಈ ವರ್ಷದ ಅಕ್ಟೋಬರ್​ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡವು ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹೈವೋಲ್ಟೇಜ್​ ಪಂದ್ಯ ವೀಕ್ಷಿಸಲು ಕೋಟ್ಯಂತರ ಕ್ರೀಡಾಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.   ತಾಜಾ ಬೆಳವಣಿಗೆ ಏನೆಂದರೆ ಕ್ರೀಡಾಂಗಣದಲ್ಲಿ ನೇರವಾಗಿ ಇಂಡೋ-ಪಾಕ್​ ಕ್ರಿಕೆಟ್​ ಕದನ ವೀಕ್ಷಿಸಲು ಎಂದಿನಂತೆ ಟಿಕೆಟ್​ಗೆ ಭಾರೀ ಬೇಡಿಕೆ ಇದ್ದೇ ಇರುತ್ತದೆ. ಅದರಂತೆಯೇ ಈ ಬಾರಿಯು ಟಿಕೆಟ್ ಮಾರಾಟ ಆರಂಭವಾದ​ ಕೇವಲ 5 ನಿಮಿಷದಲ್ಲಿ […]

Advertisement

Wordpress Social Share Plugin powered by Ultimatelysocial