ಜೆಎಸ್ಎಸ್ ಮಹಾವಿದ್ಯಾಪೀಠ ಸಹಯೋಗದಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರ

ಮದ್ಯಪಾನ ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದನ್ನ ಮನಗಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶ್ರೀ. ಸುತ್ತೂರು ಮಠ ಮತ್ತು ಜೆ.ಎಸ್.ಎಸ್.ಮಹಾವಿದ್ಯಾಪೀಠ ,ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಿಬಿರವನ್ನ ಏರ್ಪಡಿಸಲಾಗಿತ್ತು…ಗುಂಡ್ಲುಪೇಟೆ ಪಟ್ಟಣದ ಜೆ ಎಸ್ ಎಸ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಡಿತ ಚಟ ಬಿಡಿಸುವ ಕುರಿತು ಮಾಹಿತಿ ನೀಡಲಾಯಿತು..2014 ನೇ ಸಾಲಿನಿಂದ ಉಚಿತ ಕುಡಿತ ಬಿಡಿಸುವ ಶಿಬಿರಗಳನ್ನ ಪ್ರಾರಂಭಿಸಲಾಗಿದ್ದು, ಒಟ್ಟಾರೆ ನಡೆದ ಹತ್ತು ಶಿಬಿರಗಳಲ್ಲಿ 664 ಮಂದಿ ವ್ಯಸನ ಮುಕ್ತರಾಗಿದ್ದಾರೆ..ಶಿಬಿರದ ಅವಧಿಯಲ್ಲಿ ಪ್ರತಿನಿತ್ಯ ವ್ಯಾಯಾಮ, ಧ್ಯಾನ, ಆರೋಗ್ಯ ತಪಾಸಣೆ, ಉಪನ್ಯಾಸಗಳೊಂದಿಗೆ ವಿಚಾರ ವಿನಿಮಯ ಆಪ್ತ ಸಮಾಲೋಚನೆ ನಡೆಯುತ್ತದೆ. ಮದ್ಯ ವ್ಯಸನಿಗಳನ್ನ ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಶಿಬಿರದ ಮುಖ್ಯ ಉದ್ದೇಶವಾಗಿದ್ದು ಮದ್ಯವ್ಯಸನಿಗಳಿಗೆ ಶಿಬಿರದ ನಂತರ ಹೊಸ ಜೀವನಕ್ಕೆ ಬೇಕಾಗುವ ಸಾಮಾಜಿಕ ನೆರವನ್ನ ಸಂಸ್ಥೆಯು ಒದಗಿಸುತ್ತದೆ……

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ದಾಖಲೆ ಬರೆದ ನಟ ದರ್ಶನ್ ಸಿನಿಮಾ 'ರಾಬರ್ಟ್'

Thu Dec 23 , 2021
  ಕನ್ನಡ ಚಿತ್ರ ರಂಗದಲ್ಲಿ ನಟ ದರ್ಶನ್ ಚಿತ್ರಗಳಿಗೆ ವಿಭಿನ್ನ ಬೇಡಿಕೆ ಇರುತ್ತದೆ. ನಟ ದರ್ಶನ್ ಚಿತ್ರಗಳಿಗೆ ಮಾಸ್ ಪ್ರೇಕ್ಷಕರು ಹೆಚ್ಚು. ದರ್ಶನ್ ಚಿತ್ರಗಳು ರಿಲೀಸ್‌ ಆಗೋದೊಂದೇ ತಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ ಬಿಡುತ್ತವೆ. ಹಾಗಾಗಿ ದರ್ಶನ್‌ ಅವರಿಗಾಗಿ ಸಿನಿಮಾ ಮಾಡಲು ನಿರ್ಮಾಪಕರು ಕಾಯುತ್ತಿರುತ್ತಾರೆ. ಅದರಲ್ಲೂ ಇತ್ತೀಚೆಗೆ ದರ್ಶನ್‌ ಸಿನಿಮಾ ಕಥೆಗಳ ಆಯ್ಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ದರ್ಶನ್‌ ಸಿನಿಮಾಗಳು ಯಾವ ದಾಖಲೆ ಮಾಡುತ್ತವೆಯೋ […]

Advertisement

Wordpress Social Share Plugin powered by Ultimatelysocial