ಹೊಸ ದಾಖಲೆ ಬರೆದ ನಟ ದರ್ಶನ್ ಸಿನಿಮಾ ‘ರಾಬರ್ಟ್’

 

ಕನ್ನಡ ಚಿತ್ರ ರಂಗದಲ್ಲಿ ನಟ ದರ್ಶನ್ ಚಿತ್ರಗಳಿಗೆ ವಿಭಿನ್ನ ಬೇಡಿಕೆ ಇರುತ್ತದೆ. ನಟ ದರ್ಶನ್ ಚಿತ್ರಗಳಿಗೆ ಮಾಸ್ ಪ್ರೇಕ್ಷಕರು ಹೆಚ್ಚು. ದರ್ಶನ್ ಚಿತ್ರಗಳು ರಿಲೀಸ್‌ ಆಗೋದೊಂದೇ ತಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ ಬಿಡುತ್ತವೆ. ಹಾಗಾಗಿ ದರ್ಶನ್‌ ಅವರಿಗಾಗಿ ಸಿನಿಮಾ ಮಾಡಲು ನಿರ್ಮಾಪಕರು ಕಾಯುತ್ತಿರುತ್ತಾರೆ.

ಅದರಲ್ಲೂ ಇತ್ತೀಚೆಗೆ ದರ್ಶನ್‌ ಸಿನಿಮಾ ಕಥೆಗಳ ಆಯ್ಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ದರ್ಶನ್‌ ಸಿನಿಮಾಗಳು ಯಾವ ದಾಖಲೆ ಮಾಡುತ್ತವೆಯೋ ಇಲ್ಲವೋ, ಚಿತ್ರಕ್ಕೆ ದುಡ್ಡು ಹಾಕಿದ ನಿರ್ಮಾಪಕನಿಗೆ ಮಾತ್ರ ಲಾಭ ತಂದು ಕೊಡುತ್ತವೆ. ಕರ್ನಾಟಕದಲ್ಲಿ ಮಾತ್ರವೇ ರಿಲೀಸ್ ಆದರೂ ಕೂಡ ದರ್ಶನ್‌ ಅವರ ಸಿನಿಮಾಗಳು ಗಳಿಕೆಯಲ್ಲಿ ಸದಾ ಮುಂದು.

ಈಗ ದರ್ಶನ್‌ ಅಭಿನಯದ ‘ರಾಬರ್ಟ್‌’ ಸಿನಿಮಾ ಹೊಸ ದಾಖಲೆ ಮಾಡಿದೆ. ಬುಕ್‌ ಮೈ ಶೋ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ‘ರಾಬರ್ಟ್‌’ ದಾಖಲೆ ಬರೆದಿದೆ.

2021ರಲ್ಲಿ ಹೆಚ್ಚಿನ ಬೇಡಿಕೆ ಇದ್ದ ಚಿತ್ರ ‘ರಾಬರ್ಟ್‌’!

ಮೊದಲ ಲಾಕ್‌ಡೌನ್‌ ಬಳಿಕ ಬಂದ ಎರಡನೇ ಚಿತ್ರ ‘ರಾಬರ್ಟ್’. ಆದರೆ ಸಿನಿಮಾ ರಿಲೀಸ್‌ ಆಗಿದ್ದು ಈ ವರ್ಷದ ಆರಂಭದಲ್ಲಿ ಆದರೆ ಈ ಹೇಗೆ ದಾಖಲೆ ಸೇರಲು ಸಾಧ್ಯ ಎನ್ನುವು ಪ್ರಶ್ನೆ ಮೂಡ ಬಹುದು. ಆದರೆ ಇಡೀ ವರ್ಷವನ್ನು ತೆಗೆದುಕೊಂಡಾಗ ‘ರಾಬರ್ಟ್‌’ ದಾಖಲೆ ಪುಟ ಸೇರಿದ್ದಾನೆ.

ಬೆಂಗಳೂರಿನಲ್ಲಿ ಈ ವರ್ಷ ಅತಿ ಹೆಚ್ಚು ಬೇಡಿಕೆ ಇದ್ದ ಚಿತ್ರ ‘ರಾಬರ್ಟ್’ ಎನ್ನುವುದು ಸರ್ವೆ ಇಂದ ಗೊತ್ತಾಗಿದೆ. ಈ ವಿಚಾರವನ್ನು ಬುಕ್‌ ಮೈ ಶೋ ಪೇಜ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಷ್ಟಕ್ಕೂ ಈ ಸಾಲಿನಲ್ಲಿ ಇರುವ ಏಕೈಕ ಕನ್ನಡ ಚಿತ್ರ ಇದು.

ಸಿನಿಮಾ ಕ್ರೇಜಿ ಸಿಟಿಗಳ ಸಮೀಕ್ಷೆ!

ಯಾವ ಯಾವ ಸಿಟಿಗಳಲ್ಲಿ ಸಿನಿಮಾ ಕ್ರೇಜ್‌ ಹೆಚ್ಚಾಗಿ ಇದೆ ಎನ್ನುವ ಬಗ್ಗೆ ಒಂದು ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ಮುಂಬೈ ಸಿಟಿಗಳು ಇವೆ. ಆಯಾ ಸಿಟಿಗಳಲ್ಲಿ ಈ ವರ್ಷ (2021) ಯಾವ ಯಾವ ಚಿತ್ರಗಳಿಗೆ ಹೆಚ್ಚಿನ ಕ್ರೇಜ್‌ ಇತ್ತು ಎನ್ನುವ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ ಮುಂಬೈನಲ್ಲಿ ‘ಸೂರ್ಯವಂಶಿ’, ಚೆನ್ನೈನಲ್ಲಿ ‘ಮಾಸ್ಟರ್’, ಹೈದ್ರಾಬಾದ್‌ನಲ್ಲಿ ‘ಜಾತಿ ರತ್ನಾಲು’, ಮತ್ತು ಬೆಂಗಳೂರಿನಲ್ಲಿ ‘ರಾಬರ್ಟ್‌’ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇತ್ತು ಎನ್ನುವುದು ತಿಳಿದು ಬಂದಿದೆ.

ಮೊದಲ ಲಾಕ್‌ ಡೌನ್‌ ಬಳಿಕ ತೆರೆಗೆ ಬಂದ 2ನೇ ಚಿತ್ರ ರಾಬರ್ಟ್!

ರಾಬರ್ಟ್‌ ಚಿತ್ರವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಬಂಡವಾಳ ಹೂಡಿದ್ದಾರೆ. ನಟ ದರ್ಶನ್‌ ಎರಡು ಶೇಡ್‌ಗಳಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ ರೂಪದಲ್ಲಿ ಶಾಂತ ಮೂರ್ತಿ ಆಗಿ, ರಾಬರ್ಟ್‌ ಅವತಾರದಲ್ಲಿ ಉಗ್ರ ರೂಪ ತಾಳಿದ್ದಾರೆ. ಈ ಚಿತ್ರ ಹೆಚ್ಚಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದಿದೆ. ಅನ್‌ಲಾಕ್ ಬಳಿಕ ರಿಲೀಸ್‌ ಆಗಿ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ಸಿನಿಮಾ ಎನ್ನುವ ಹೆಗ್ಗಳಿಕೆ ರಾಬರ್ಟ್‌ ಚಿತ್ರಕ್ಕಿದೆ. ಅಧಿಕೃತವಾಗಿ ಈ ಚಿತ್ರ 78ಕೋಟಿ ಗೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಜಾತ್ರಾ ಮಹೋತ್ಸವ

Thu Dec 23 , 2021
ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರು ತಾಲೂಕಿನ ಸುಕ್ಷೇತ್ರ ತುರಮರಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಆರನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದಿವ್ಯಸಾನ್ನಿಧ್ಯವನ್ನು ಧರ್ಮಶ್ರೀ ತಪೋರತ್ನ ಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮುಕ್ತಿ ಮಠ ಹಾಗೂ ಪರಮಪೂಜ್ಯ ಶ್ರೀ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಕೌಲಗುಡ್ಡ ಅಥಣಿ, ಶ್ರೀ ಪರಮಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ಹುಲಿಕಟ್ಟಿ ಅಧ್ಯಕ್ಷತೆ ಸಿದ್ದಪ್ಪ   ಮಡೊಳ್ಳಿನ ಹಾಗೂ ಮುಖ್ಯ ಅತಿಥಿಗಳಾದ ಶ್ರೀಮತಿ ಅನ್ನಪೂರ್ಣ ಪಾಟೀಲ ಗ್ರಾಮ […]

Advertisement

Wordpress Social Share Plugin powered by Ultimatelysocial