ಸಿಲಿಕಾನ್ ಸಿಟಿಯ ನಾಲ್ಕು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ!

ಬೆಂಗಳೂರು: ಸಿಲಿಕಾನ್ ಸಿಟಿಯ ನಾಲ್ಕು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ. ಇಂದು ಬೆಳಿಗ್ಗೆ ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಶಾಲೆಗಳಲ್ಲಿ ಈಗ ಆತಂಕ, ಭಯದ ವಾತಾವರಣ ನಿರ್ಮಾಣವಾಗಿದ

ಈ ಮಾಹಿತಿ ನೀಡಿರುವಂತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಇಂದು ಬೆಳಿಗ್ಗೆ ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಹುಸ್ಕೂರಿನ ಎಬಿನೈಜರ್ ಇಂಟರ್ ನ್ಯಾಷನರ್ ಸ್ಕೂಲ್, ವಿನ್ಸೆಂಟ್ ಪಲ್ಲೋಟಿ ಶಾಲೆ ಸೇರಿದಂತೆ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರೋದಾಗಿ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತ ಶಾಲೆಗಳಿಗೆ ಬಾಂಬ್ ಸ್ಕ್ವಾಡ್, ಶ್ವಾನದಳದ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪೋಷಕರು ಆತಂಕ ಪಡದಂತೆ ಮನವಿ ಮಾಡಿದ್ದಾರೆ.

ಅನಾಮಕ ಕಳುಹಿಸಿರುವಂತ ಬಾಂಬ್ ಬೆದರಿಕೆ ಇ-ಮೇಲ್ ನಲ್ಲಿ ನಿಮ್ಮ ಶಾಲೆಗಳಲ್ಲಿ ಶಕ್ತಿಶಾಲಿ ಇಟ್ಟಿದ್ದೀವಿ. ಇದು ತಮಾಷೆಯಲ್ಲ, ನೂರಾರು ಜನರ ಹಾನಿಯಾಗಲಿದೆ. ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ. ಎಚ್ಚರಿಕೆ ವಹಿಸೋದು ನಿಮ್ಮ ಕೈಯಲ್ಲಿ ಇದೆ ಎಂಬುದಾಗಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಹಣಕಾಸು ನೀತಿ ಸಮಿತಿ

Fri Apr 8 , 2022
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಸತತ ಹನ್ನೊಂದನೇ ಬಾರಿಗೆ ಶೇಕಡಾ 4 ಕ್ಕೆ ಬದಲಾಯಿಸದೆ ಉಳಿಸಿಕೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಘೋಷಿಸಿದ್ದಾರೆ. ಎಂಪಿಸಿ ಒಮ್ಮತದ ನಿಲುವನ್ನು ಉಳಿಸಿಕೊಳ್ಳಲು ಸರ್ವಾನುಮತದಿಂದ ಮತ ಚಲಾಯಿಸಿದೆ ಮತ್ತು ರಿವರ್ಸ್ ರೆಪೊ ದರವನ್ನು ಸಹ ಶೇಕಡಾ 3.35 ಕ್ಕೆ ಬದಲಾಯಿಸದೆ ಇರಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೇಳಿದರು. ಹಣಕಾಸು […]

Advertisement

Wordpress Social Share Plugin powered by Ultimatelysocial