ಕರ್ನಾಟಕದಲ್ಲಿ 1 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ನೋಂದಣಿ:

ಬೆಂಗಳೂರು ಜೂ. 28: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಸರ ಸ್ನೇಹಿಯಾದ ವಿದ್ಯುತ್ ಚಾಲಿತ ವಾಹನಗಳಿಗೆ (ಎಲೆಕ್ಟ್ರಿಕ್ ವೆಹಿಕಲ್/ಇವಿ) ಉತ್ತೇಜನ ನೀಡುತ್ತಿರುವ ಬೆನ್ನಲ್ಲೇ ಕರ್ನಾಟಕ ರಾಜ್ಯವೊಂದರಲ್ಲೇ ಒಂದು ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳು ಸಾರ್ಥಕವಾಗಿವೆ ಎಂಬಂತಹ ಭಾವನೆ ಕರ್ನಾಕಟದಲ್ಲಿ ನಿರ್ಮಾಣವಾಗಿದೆ. ಪೆಟ್ರೋಲ್, ಡೀಸೆಲ್ ಇಂಧನಗಳ ದರ ಗಗನಕ್ಕೇರಿದ ಹಿನ್ನೆಲೆ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ ದಿನೇ ದಿನೆ ಇವಿ ಬಳಕೆ ಹೆಚ್ಚುತ್ತಿದೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ ಎನ್ನಬಹುದು.

ಈ ವಿಚಾರ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು, ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಈ ಮೂಲಕ ಕರ್ನಾಟಕ ಇವಿ ನೀತಿಯನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯವಾಗಿದೆ. ಎಲೆಕ್ಟ್ರಿಕ್ ವಾಹನಗಳು ಭವಿಷ್ಯದಲ್ಲಿಕರ್ನಾಟಕದ ಭಾಗವಾಗಿ ಮುಂದುವರಿಯಲಿವೆ ಎಂದು ಅವರು ಕೂ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ 45ಕ್ಕೂ ಹೆಚ್ಚು ಇವಿ ಸ್ಟಾರ್ಟ್ ಅಪ್:

ಕೈಗಾರಿಕಾ ಸ್ನೇಹಿ ವಾತಾವರಣ ಹಾಗೂ ಉದ್ಯಮ ಸ್ನೇಹಿ ನೀತಿಗಳಿಂದ ಭಾರತದಲ್ಲೇ ಕರ್ನಾಟಕ ಎಲೆಕ್ಟ್ರಾನಿಕ್ ವಾಹನಗಳ ಹಬ್ ಆಗಿ ಹೊರ ಹೊಮ್ಮಲಿದೆ. ಈಗಾಗಲೇ ರಾಜ್ಯದಲ್ಲಿ45ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಆಧಾರಿತ ಸ್ಟಾರ್ಟ್ ಅಪ್‌ಗಳಿವೆ ಎಂದು ಸಚಿವರು ಬರೆದುಕೊಂಡಿದ್ದಾರೆ.

ದೇಶದಲ್ಲಿ ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರಕ್ಕೆ ಪೂರಕವಾದ ಮಾಲಿನ್ಯಕಾರಕವಲ್ಲದ ಕಡಿಮೆ ಖರ್ಚಿನ ಎಲೆಕ್ಟ್ರಿಕ್ ವಾಹನಗಳತ್ತ ಜನರನ್ನು ಸೆಳೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫೇಮ್ 2ಸಹಾಯಧನ ಯೋಜನೆ ಸಾಕಷ್ಟು ಸಹಕಾರಿಯಾಗಿದೆ. ಇಂತಹ ಉತ್ತೇಜನಗಳಿಂದ ರಾಜ್ಯದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅಧಿಕ ಎಲೆಕ್ಟ್ರಿಕ್ ವಾನಗಳು ನೋಂದಣಿ ಆಗಿವೆ.

ಇವಿ ನೋಂದಣಿಯಲ್ಲಿ ಏರಿಕೆ;

ರಾಜ್ಯದಲ್ಲಿ ಕೆಲವು ತಿಂಗಳುಗಳ ಹಿಂದೆ ಎಲೆಕ್ಟ್ರಿಕ್ ವಾಹನಗಳ ನೊಂದಣಿ ಪ್ರಮಾಣ ಶೇ.2ರಿಂದ 3ರಷ್ಟು ಇತ್ತು ಎನ್ನಲಾಗಿದೆ. ಈ ನೋಂದಣಿ ಪ್ರಮಾಣ ದಿನೇ ದಿನೆ ಏರಿಕೆಯಾಗುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ರಸ್ತೆಗಿಳಿಯಲಿರುವ ಪ್ರತಿ ವಾಹನಗಳು ಎಲೆಕ್ಟ್ರಿಕ್ ವಾಹನಗಳೆ ಆಗಿರಲಿವೆ. ಇದಕ್ಕೆ ಪೆಟ್ರೋಲ್, ಡೀಸೆಲ್ ದರದಲ್ಲಿನ ಬದಲಾವಣೆಗಳು ಕಾರಣ ಎನ್ನಲಾಗಿದೆ.

ಮೂಲಗಳ ಪ್ರಕಾರ, ದೇಶಾದ್ಯಂತ ಒಟ್ಟು ಈವರೆಗೆ ಸುಮಾರು 12ಲಕ್ಷಕ್ಕೂ ಅಧಿಕ ಎಲೆಕ್ಟ್ರಕ್ ವಾಹನಗಳು ನೋಂದಣಿಯಾಗಿವೆ. ದೇಶದಲ್ಲಿ ನಿರಂತರವಾಗಿ ಇವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬಳಕೆದಾರರು ಹೆಚ್ಚುತ್ತಿರುವುದರಿಂದ ಇವಿ ಚಾರ್ಜಿಂಗ್ ಪಾಯಿಂಟ್ ಗಳನ್ನು ಹೆಚ್ಚಿಸುವತ್ತ ಸರ್ಕಾರ ಗಮನ ಹರಿಸಿದೆ.

ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ (ನಿಲ್ದಾಣ)ಗಳನ್ನು ನಿರ್ವಹಿಸುವ ಯೋಜನೆ ಹಾಕಿಕೊಂಡಿದೆ. ಅಲ್ಲದೇ ಕರ್ನಾಟಕವನ್ನು ದೇಶದಲ್ಲೇ ಎಲೆಕ್ರಿಕ್ ವಾಹನಗಳನ್ನು ಹೆಚ್ಚು ಉತ್ಪಾದಿಸುವ ರಾಜ್ಯವನ್ನಾಗಿ ಮಾಡಲು ಹೂಡಿಕೆದಾರರನ್ನು ಸೆಳೆಯುತ್ತಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೊಸಬಾಂಬ್

Tue Jun 28 , 2022
ಬಾಗಲಕೋಟೆ: ಕೋಟಿ ಕೋಟಿ ಕೊಟ್ಟು ಮಂಚ ಹತ್ತಿದವರಿಗೆ ವಿಧಾನಸಭೆ ಚುನಾವಣೆ ವೇಳೆಗೆ ಶಾಕ್ ಸಿಗೋದು ಗ್ಯಾರಂಟಿ. ಮುಂಬರುವ ವಿಧಾನಸಭೆ ಚುನಾವಣೆಯ ವೇಳೆಗೆ ರಾಜ್ಯದ 12 ಸಚಿವರ ಸಿಡಿಗಳು ಹೊರಬರಲಿದ್ದಾವೆ ಎಂಬುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, 30 ಕೋಟಿ ಕೊಟ್ಟು ಮಂಚ ಏರಿದವರ ಸಿಡಿಗಳಿದ್ದಾವೆ. ಆದ್ರೇ.. ಅವರೆಲ್ಲಾ ಈಗ ಸ್ಟೇ ತಗೊಂಡಿದ್ದಾರೆ. ನಾನೇ ಸಭಾಪತಿಗಳಿಗೆ ಸಿಡಿಯಲ್ಲಿ […]

Advertisement

Wordpress Social Share Plugin powered by Ultimatelysocial