ದಕ್ಷಿಣ ಕನ್ನಡ, ಮಂಗಳೂರು ಕೊಡಗು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.

 

ಮುಂಗಾರು ಪ್ರವೇಶದ ನಂತರ ನಿರಂತರ ಮಳೆಯಾಗುತ್ತಿದ್ದು, ಎಡೆಬಿಡದೆ ಭಾರೀ ಮಳೆ ಸುರಿಯುತ್ತಲೇ ಇದೆ.ಭಾರೀ ಮಳೆಗೆ ಕೇರಳ-ಕರ್ನಾಟಕ ಗಡಿ ಭಾಗ ಸಾರಡ್ಕ್​ದಲ್ಲಿ ಮಣ್ಣು ಕುಸಿತವಾಗಿ ರಸ್ತೆ ಬ್ಲಾಕ್ ಆಗಿರುವುದು.ಕೊಡಗು, ಸುಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪವೂ ಅನುಭವವಾಗಿದ್ದು ಆತಂಕಕ್ಕೆ ಕಾರಣವಾಗಿದೆಕರಾವಳಿಯಲ್ಲಿ ಅಲೆಗಳ ರಭಸ ಹೆಚ್ಚಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ಸಹ ನೀಡಲಾಗಿದೆ. ಕಡಲತೀರದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮಲ್ಪೆಯಲ್ಲಿ ಬಲೆ ಹಾಕಲಾಗಿದೆ.ಈ ಬಾರಿ ನೈಋತ್ಯ ಮಾನ್ಸೂನ್ ಮೇ 29 ರಂದು ಕೇರಳಕ್ಕೆ ಪ್ರವೇಶ ಪಡೆದರೂ, ಅದರ ಪ್ರಗತಿ ಮಂದಗತಿಯಲ್ಲಿದೆ ಈ ಬಾರಿ ದಕ್ಷಿಣ ಪರ್ಯಾಯ ದ್ವೀಪ , ಪೂರ್ವ , ಈಶಾನ್ಯ ಮತ್ತು ಕೇಂದ್ರ ಭಾರತಗಳಲ್ಲಿ ಮಳೆಯ ತೀವ್ರ ಕೊರತೆಯುಂಟಾಗಿದೆ.ಕೊಡಗಿನಲ್ಲಿ ಕಳೆದ ಎರಡು ದಿನಗಳು ಭಾರಿ ಮಳೆ ಸುರಿದಿದ್ದ ಹಿನ್ನೆಲೆ ತಲಕಾವೇರಿ ರಸ್ತೆಯಲ್ಲಿ ಬಂಡೆಗಳು ಉರುಳಿವೆ. ಭಾಗಮಂಡಲದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿ ಬೆಟ್ಟದಿಂದ ಬಂಡೆ ಉರುಳಿದ್ದು, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ !

Tue Jul 5 , 2022
ಬೆಂಗಳೂರು,ಜು.1- ನಾಳೆಯಿಂದ ಎರಡು ದಿನಗಳ ಕಾಲ ಮುತ್ತಿನನಗರ ಹೈದರಾಬಾದ್‍ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಲಂಡನ್ ಪ್ರವಾಸದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆಗೆ ಗೈರಾಗಲಿದ್ದಾರೆ. ನೆರೆ ರಾಜ್ಯ ತೆಲಂಗಾಣ ರಾಜಧಾನಿಯಲ್ಲಿ ಈ ಬಾರಿಯ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜುಲೈ 2ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ. ಅರುಣಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. […]

Advertisement

Wordpress Social Share Plugin powered by Ultimatelysocial