ಕೊರೊನಾ ಮಧ್ಯೆ ಮತ್ತೆ ಓಪನ್ ಆಗುತ್ತಾ ಸಿನಿಮಾ ಥೀಯೇಟರ್ …! ಏನೆಲ್ಲಾ ಇರತ್ತೆ ನೋಡಿ..!

ದೇಶದೆಲ್ಲೆಡೆ ಲಾಕ್ ಡೌನ್ ಹಿನ್ನೆಲೆ ರಾಜ್ಯದಲ್ಲಿ ಕ್ಲೋಸ್ ಆಗಿದ್ದ ಸಿನಿಮಾ ಥೀಯೇಟರ್ ಓಪನ್ ಮಾಡಲು ಚರ್ಚೆ ನಡೆಸಲಾಗ್ತಿದೆ. ಸಿನಿಮಾ ಥೀಯೇಟರ್ ರೀ ಓಪನ್ ಮಾಡಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಚರ್ಚೆ ಮಾಡಲಾಗಿದೆ. ಸದ್ಯ ಈ ಬಗ್ಗೆ ಚಲನಚಿತ್ರ ಮಂಡಳಿ ಸಿಎಂ ಬಿಎಸ್.ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದೆ. ತದನಂತರ  ಬಗ್ಗೆ ಚರ್ಚೆ ಮಾಡಲಾಗಿದ್ದು ಎಲ್ಲ ಕಡೆ ಸ್ಯಾನಿಟೈಜ್ ಮಾಡಲೇಬೇಕು ಎನ್ನಲಾಗಿದೆ.

ಚಿತ್ರ ಮಂದಿರದಲ್ಲಿ ಇರುವ ಆಸನಗಳ ಅರ್ಧದಷ್ಟು ಮಾತ್ರ ಜನರಿಗೆ ಸಿನಿಮಾ ನೋಡಲು ಅವಕಾಶ ಮಾಡಬೇಕು. ಟಿಕೆಟ್ ಕೌಂಟರಗಳಿಗೆ ಗ್ಲಾಸ್ ಆಳವಡಿಸಬೇಕು. ಪ್ರತಿಯೊಬ್ಬ ಪ್ರೇಕ್ಷಕರಿಗೂ ಸ್ಯಾನಿಟೈಜ್, ಮಾಸ್ಕ ಕಡ್ಡಾಯ. ಮೆಡಿಕಲ್ ಚೆಕಪ್ ಬಳಿಕ ಮಾತ್ರ ಥೀಯೇಟರ್ ಒಳಗೆ ಪ್ರವೇಶ ನೀಡಬೇಕು. ಟಿಕೆಟ್ ಆನ್ ಲೈನ್ ಬುಕ್ಕಿಂಗ್ ಗೆ ಮೊದಲ ಆದ್ಯತೆ, ಅಲ್ಲದೇ ಟಿಕೆಟ್ ದರ ಹೆಚ್ಚು ಮಾಡುವಂತಿಲ್ಲ. ಸಿನಿಮಾ ಪ್ರದರ್ಶನಗಳ ಸಂಖ್ಯೆನೂ ಕಡಿಮೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಸರ್ಕಾರದ ಬಳಿ ಚಲನಚಿತ್ರ ಮಂಡಳಿ ಕೂಡ ಕಾರ್ಮಿಕರಿಗೆ ಅನುದಾನ ನೀಡಬೇಕು. ಈ ಸಾಲಿನ ಆಸ್ತಿ ತೆರಿಗೆ ಮನ್ನಾ ಮಾಡಬೇಕು ಎಂದು ಸೇರಿ ಇನ್ನಿತರ ಬೇಡಿಕೆಗಳಿಗೆ ಮನವಿ ಮಾಡಿಕೊಂಡಿತು.

 

Please follow and like us:

Leave a Reply

Your email address will not be published. Required fields are marked *

Next Post

ಪಾದರಾಯನಪುರದಿಂದ ಇಡೀ ಬೆಂಗಳೂರಿಗೆ ವ್ಯಾಪಿಸುತ್ತಾ ಕೊರೊನಾ

Sat May 9 , 2020
ಬೆಂಗಳೂರು: ಪಾದರಾಯನಪುರದಲ್ಲಿ ಬಿಟ್ಟೂ ಬಿಡದೆ ಕಾಡುತ್ತಿದೆ ಕೊರೊನಾ. ನಿನ್ನೆ ನಾಲ್ಕು ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇಂದು ಮತ್ತೆ ಮೂರು ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ ಇಂದರಿAದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಬ್ಬ ಗರ್ಭಿಣಿಗೂ ಕೊರೊನಾ ಸೋಂಕು ತಗುಲಿದೆ. ಇದರಿಂದ ಗರ್ಭೀಣಿಯರು ಕೊರೊನಾದಿಂದ ನರಳಾಡುತ್ತಿದ್ದಾರೆ. ಪಾದರಾಯನಪುರಕ್ಕೆ ಸಂಪೂರ್ಣ ನಿರ್ಬಂಧಿಸಲಾಗಿದೆ. ಇಲ್ಲಿ ಬಿಬಿಎಂಪಿ, ವೈದ್ಯೆ ಸಿಬ್ಬಂದಿಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಸಾರ್ವಜನಿಕರಿಗೆ, ಮಾದ್ಯಮ ಪ್ರತಿನಿಧಿಗಳಿಗೆ ನಿರ್ಬಂಧಿಸಲಾಗಿದೆ. ಬಿಬಿಎಂಪಿ, ವ್ಯೆದ್ಯ ಸಿಬ್ಬಂದಿಗಳು, ಪೋಲಿಸರು ಕಡ್ಡಾಯವಾಗಿ […]

Advertisement

Wordpress Social Share Plugin powered by Ultimatelysocial