ಬಂದೇ ಬಿಡ್ತು “ಬಡ್ಡೀಸ್” ಟೀಸರ್,ಕಿರಣ್ ರಾಜ್ ನಟನೆಗೆ ಸಿನಿರಸಿಕರು ಫಿದಾ!

ಅದ್ಭುತ ನಟನೆ, ಸಾಮಾಜಿಕ ಕಳಕಳಿಯಿಂದ ಖ್ಯಾತರಾಗಿರುವ ಸುರದ್ರೂಪಿ ನಟ ಕಿರಣ್ ರಾಜ್ ಅಭಿನಯದ “ಬಡ್ಡೀಸ್” ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಕಿರಣ್ ರಾಜ್ ನಟನೆ ಟೀಸರ್ ನಲ್ಲಿ ಕಂಡು ಮನಸೊತ್ತಿರುವ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಚಿತ್ರದ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಭಾರತಿ ಶೆಟ್ಟಿ ಅವರು ಭಾರತಿ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ತಮ್ಮ ಮೊದಲ ಚಿತ್ರವಾಗಿ “ಬಡ್ಡೀಸ್” ನಿರ್ಮಾಣ ಮಾಡಿದ್ದಾರೆ.

ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡುತ್ತಿದ್ದಾರೆ.

ಯು.ಎಸ್.ಎ ನಿವಾಸಿ‌ ನಿಭಾ ಶೆಟ್ಟಿ‌ ಈ ಚಿತ್ರದ ಛಾಯಾಗ್ರಹಕರು. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕಿರಣ್ ರಾಜ್ ಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ ಹೆಗಡೆ, ಗಿರೀಶ್ ಜತ್ತಿ, ಲಂಕೇಶ್, ಹೇಮಂತ್, ವಿವೇಕ್ ಮುಂತಾದವರು “ಬಡ್ಡೀಸ್” ನಲ್ಲಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸೆಟ್ಟೇರಿತು ನಿರ್ದೇಶಕ ಪ್ರಶಾಂತ್ ರಾಜ್ ಹೊಸ ಸಿನಿಮಾ..ತಮಿಳು ಹೀರೋ ಸಂತಾನಂಗೆ ಆಕ್ಷನ್ ಕಟ್..ಸರಳವಾಗಿ ನೆರವೇರಿತು ಸಿನಿಮಾದ ಮುಹೂರ್ತ!

Mon Apr 25 , 2022
ಆರೆಂಜ್, ದಳಪತಿ, ಜೂಮ್, ಲವ್ ಗುರು ಸಿನಿಮಾಗಳ ಖ್ಯಾತಿಯ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರಿದೆ. ಈ ಬಾರಿ ಪ್ರಶಾಂತ್ ಕನ್ನಡದ ಜೊತೆಗೆ ತಮಿಳಿನಲ್ಲೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದರ ಮೊದಲ ಭಾಗವಾಗಿ ಇವತ್ತು ಬೆಂಗಳೂರಿನ ಕೊಂದಂಡ ರಾಮ ದೇಗುಲದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಇಂದಿನಿಂದ ಶೂಟಿಂಗ್ ಶುರು ಫಾರ್ಚುನ್ ಫಿಲ್ಮಂ ಬ್ಯಾನರ್ ನಡಿ ಪ್ರೊಡಕ್ಷನ್ ನಂಬರ್ 10 ಟೈಟಲ್ ನಡಿ ಸೆಟ್ಟೇರಿರುವ ಈ ಸಿನಿಮಾದಲ್ಲಿ […]

Advertisement

Wordpress Social Share Plugin powered by Ultimatelysocial