ಕರುನಾಡಿಗೆ ನಮೋ..’ ಪ್ರವಾಸದ ವೇಳೆ ಪ್ರಧಾನಿ ಮೋದಿ ಪ್ರಸ್ತಾಪಿಸುವ 4 ವಿಷಯಗಳು ಯಾವುದು ಗೊತ್ತಾ..?

ಉತ್ತರದಲ್ಲಿ ಗೆದ್ದು ಉತ್ಸಾಹದಲ್ಲಿರೋ ಕಮಲಪಡೆ. 2023ರ ರಾಜ್ಯ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಕರುನಾಡಿನಲ್ಲಿ ರಣಕಹಳೆ ಮೊಳಗಿಸೋದಕ್ಕೆ ಮೋದಿಯೂ ಸಜ್ಜಾಗಿದ್ದಾರೆ. ಇದೀಗ ಪ್ರಧಾನಿ ಕರ್ನಾಟಕ ದಂಡಯಾತ್ರೆಗೆ ಮುಹೂರ್ತ ಫಿಕ್ಸ್​ ಆಗಿದೆ. ಒಂದಷ್ಟು ಚರ್ಚಾ ವಿಷಯಗಳು ಫೈನಲ್ ಆಗಿವೆ.

ಬೃಹತ್ ಱಲಿಗೂ ಸಿದ್ಧತೆ ನಡೀತಿದೆ.

ಮೋದಿ..ರಾಜ್ಯಕ್ಕೆ ಮೋದಿ ಬರ್ತಾರೆ ಅನ್ನೋ ಸುದ್ದಿಯೇ ಕಮಲಪಾಳಯದ ಹುರುಪನ್ನ ಹೆಚ್ಚಿಸಿತ್ತು. ಇದೀಗ ನಮೋ ಆಗಮನಕ್ಕೆ ಡೇಟ್​ ಫಿಕ್ಸ್ ಆಗಿದೆ. ಚುನಾವಣಾ ಕಹಳೆ ಮೊಳಗಿಸೋದಕ್ಕೂ ಅಖಾಡ ಸಿದ್ಧವಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಸಂದೇಶ ಬಂದಿದೆ. ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿರೋ ಪ್ರಧಾನಿ ಯಾತ್ರೆಗೆ ಸಿದ್ಧತೆ ಶುರುವಾಗಿದೆ.

ಕರುನಾಡಿಗೆ ‘ನಮೋ’
ಮೋದಿ ಕರ್ನಾಟಕ ದಂಡಯಾತ್ರೆಗೆ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್​ 6ಕ್ಕೆ ಪ್ರಧಾನಿಗಳ ರಾಜ್ಯ ಪ್ರವಾಸ ಆರಂಭವಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜನೆಗೆ ಪ್ಲಾನ್ ರೂಪಿಸಲಾಗಿದೆ. ಪ್ರಧಾನಿ ಮೋದಿ ಪ್ರವಾಸದ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ರವಾನೆಯಾಗಿದ್ದು, ಸಿದ್ಧತೆ ಶುರು ಮಾಡಿಕೊಂಡಿದ್ದಾರೆ. ಏಪ್ರಿಲ್ 1ಕ್ಕೆ ರಾಜ್ಯಕ್ಕೆ ಅಮಿತ್​ ಶಾ, ಎಂಟ್ರಿ ಕೊಡಲಿದ್ದಾರೆ. ಇದಾದ ಬಳಿಕ ಅಂದ್ರೆ ಏಪ್ರಿಲ್ 6ರಂದು ಮೋದಿ ಕರುನಾಡಿನ ಅಖಾಡಕ್ಕೆ ಧುಮುಕಲಿದ್ದಾರೆ. ಅಂದು ಮಿಷನ್​ 2023ರ ಮೊದಲ ಱಲಿ ಉದ್ಘಾಟನೆಗೆ ಮೋದಿ ಕಾತುರರಾಗಿದ್ದಾರೆ. ಹೀಗೆ ಅಮಿತ್​ ಶಾ ಆಗಮನದ ಬೆನ್ನಲ್ಲೇ ಪ್ರಧಾನಿ ರಾಜ್ಯ ಪ್ರವಾಸ ನಡೆಸ್ತಿರೋದು, ಕುತೂಹಲದ ಕಣಜವನ್ನ ತುಂಬಿಸಿದೆ.

ರಾಜ್ಯದ ಮಣ್ಣನ್ನ ಮೆಟ್ಟಲಿರೋ ಮೋದಿ ಒಂದಷ್ಟು ಪ್ರವಾಸ ಪ್ಲಾನ್​ಗಳನ್ನ ಸಿದ್ಧಪಡಿಸಿಕೊಂಡಿದ್ದಾರೆ. ಪ್ರಸ್ತಾಪಿಸಬೇಕಾದ ಪ್ರಮುಖ ವಿಷಯಗಳ ಪಟ್ಟಿಯೂ ಸಿದ್ಧವಾಗ್ತಿದ್ಯಂತೆ

ಮೋದಿ ಪ್ರಸ್ತಾಪಿಸಲಿರುವ ವಿಷಯಗಳು

  • ಅವಧಿ ಪೂರ್ವ ಇಲ್ಲವೇ ಅವಧಿಯಂತೆ ಚುನಾವಣೆಗೆ ಸಿದ್ದರಾಗಲು ಕರೆ
  • ಸಾರ್ವತ್ರಿಕ ಚುನಾವಣೆಗೆ BJP ಪರವಾದ ಟ್ರೆಂಡ್ ಸೃಷ್ಟಿಸಲಿರುವ ಮೋದಿ
  • ಮೋದಿ ಪ್ರವಾಸದ ಬಗ್ಗೆ ಸಚಿವರ ಜೊತೆ ಚರ್ಚಿಸಿರುವ ಸಿಎಂ ಬೊಮ್ಮಾಯಿ
  • ಉತ್ತರ ಭಾರತದ ನಂತರ ದಕ್ಷಿಣದ ರಾಜ್ಯಗಳತ್ತ ಪ್ರಧಾನಿ ಮೋದಿ ಕಣ್ಣು

ಒಟ್ನಲ್ಲಿ, ಪ್ರಧಾನಿ ರಾಜ್ಯ ಪ್ರವಾಸ ಕೇಸರಿ ಬ್ರಿಗೇಡ್​ನಲ್ಲಿ ಹೊಸ ಉತ್ಸಾಹವನ್ನ ತಂದಿದೆ. ಸಚಿವರನ್ನೂ ಌಕ್ಟೀವ್ ಆಗಿಸಿದೆ. ಕಮಲಪಾಳಯದ ಚುನಾವಣಾ ತಯಾರಿಗೆ ಮತ್ತಷ್ಟು ವೇಗ ಕೊಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಪುಟಿನ್ ಅವರೊಂದಿಗೆ ಮಾತನಾಡಿದ ನಂತರ ರಷ್ಯಾದ ರಕ್ಷಣಾ ಸಚಿವರಿಗೆ ಹೃದಯಾಘಾತವಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ

Sat Mar 26 , 2022
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ತೀವ್ರ ಘರ್ಷಣೆಯ ನಂತರ ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ಉಕ್ರೇನ್ ಸಚಿವ ಆಂಟನ್ ಗೆರಾಶ್ಚೆಂಕೊ ಹೇಳಿದ್ದಾರೆ, ಅಲ್ಲಿ ಪುಟಿನ್ ಅವರು ಉಕ್ರೇನ್‌ನಲ್ಲಿನ ವಿಶೇಷ ಮಿಲಿಟರಿ ಕಾರ್ಯಾಚರಣೆಯ ‘ವೈಫಲ್ಯ’ಕ್ಕೆ ಅವರನ್ನು ದೂಷಿಸಿದರು. ಯುದ್ಧದ ಎರಡನೇ ಮಾಸ್ಟರ್‌ಮೈಂಡ್ ಎಂದು ನಂಬಲಾದ ರಕ್ಷಣಾ ಸಚಿವರು ಮಾರ್ಚ್ 11 ರಿಂದ ಸಾರ್ವಜನಿಕವಾಗಿ ಕಾಣದಿರಲು ಇದೇ ಕಾರಣ ಎಂದು ಉಕ್ರೇನ್ ಸಚಿವರು ಹೇಳಿದ್ದಾರೆ. ಮಾರ್ಚ್ […]

Related posts

Advertisement

Wordpress Social Share Plugin powered by Ultimatelysocial