ಕಡೂರಿನಲ್ಲಿ “ಕವಡೆ” ಆಟ ಶುರು .

“ಕವಡೆ” ಇದೊಂದು ದೇಸಿ ಕ್ರೀಡೆ‌. ಗ್ರಾಮೀಣ ಭಾಗದಲ್ಲಂತೂ ಈ ಆಟ ಹೆಚ್ಚು ಜನಪ್ರಿಯ. ಈಗ “ಕವಡೆ” ಹೆಸರಿನ ಚಿತ್ರವೊಂದು ಆರಂಭವಾಗಿದೆ.ಈ ಹಿಂದೆ “ಜಾಡಘಟ್ಟ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ, ಜೊತೆಗೆ ನಾಯಕನಾಗೂ ಅಭಿನಯಿಸಿದ್ದ ರಘು ಎಸ್ ಈ “ಕವಡೆ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದಾರೆ. ಶಶಿಮಣಿ ನಿರ್ಮಿಸುತ್ತಿದ್ದಾರೆ.ಶ್ರೀ ಕ್ಷೇತ್ರ ದುರ್ಗಾಸ್ಥಳ ರಾಮದುರ್ಗ ಗುರುಗಳ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ದುರ್ಗಾಸ್ಥಳದಲ್ಲಿ ಇತ್ತೀಚೆಗೆ ಚಿತ್ರೀಕರಣ ಆರಂಭವಾಯಿತು. ರಘು ಅವರ ಸಹೋದರ ಭೀರೇಶ್ ಎಂ ಎಸ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಕಡೂರು ಸುತ್ತಮುತ್ತ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.ಚಿತ್ರೀಕರಣ ಸುಲಲಿತವಾಗಿ ನಡೆಯಲು ಸಂತು ಮತ್ತು ಶ್ರೀ ಕ್ಷೇತ್ರ ದುರ್ಗಾಸ್ಥಳದ ಸೇವಕರು ನೀಡುತ್ತಿರುವ ಪ್ರೋತ್ಸಾಹ ಅಪಾರ ಎನ್ನುತ್ತಾರೆ ನಿರ್ದೇಶಕರು.ಆಕ್ಷನ್ ಥ್ರಿಲ್ಲರ್ ನ ಜೊತೆ, ತಾಯಿ-ಮಗನ ಬಾಂಧವ್ಯದ ಸನ್ನಿವೇಶಗಳ ಕಥಾಹಂದರ ಹೊಂದಿರುವ “ಕವಡೆ” ಗೆ ರಘು ಆವರೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಅಭಿಷೇಕ್ ಜಿ ರಾಯ್ ಸಂಗೀತ ನಿರ್ದೇಶನ ಹಾಗೂ ಪ್ರದೀಪ್ ಜೈನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ರಘು ಅವರಿಗೆ ನಾಯಕಿಯರಾಗಿ ಜೀವಿತಾ ಹಾಗೂ ನಿಖಿತಾ ಅಭಿನಯಿಸುತ್ತಿದ್ದಾರೆ. ಕೃಷ್ಣಮೂರ್ತಿ (ಚಿನ್ನು), ಶಿವರಾಜ್ (ಮೇಷ್ಟ್ರು) “ಕವಡೆ” ಚಿತ್ರದಲ್ಲಿ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ "ನಾರಿ'

Fri Jan 27 , 2023
ರಾಜಪಥದ ಹೆಸರು ಬದಲಾದ ಬಳಿಕ ಮೊದಲ ಬಾರಿಗೆ 74ನೇ ಗಣ ರಾಜ್ಯೋತ್ಸವದ ಪಥಸಂಚಲನಕ್ಕೆ “ಕರ್ತವ್ಯ ಪಥ’ ಗುರುವಾರ ಸಾಕ್ಷಿ ಯಾಯಿತು. ಮಹಿಳಾ ಪಡೆಗಳು, ಅಗ್ನಿವೀ ರರು, ಆತ್ಮನಿರ್ಭರತೆ, ನಾರೀಶಕ್ತಿ ಯೇ ಪರೇಡ್‌ನ‌ ಆಕರ್ಷಣೆ. ಮಿಲಿಟರಿಯಲ್ಲಿ ನಾರೀಶಕ್ತಿ ಮಂಗಳೂರು ಮೂಲದ ಕನ್ನಡತಿ, ಲೆಫ್ಟಿನೆಂಟ್‌ ಕಮಾಂಡರ್‌ ದಿಶಾ ಅಮೃತ್‌(29) 144 ನಾವಿಕರನ್ನು ಒಳಗೊಂಡ ನೌಕಾಪಡೆಯ ತಂಡವನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಾಕಿಸ್ಥಾನದೊಂದಿಗಿನ ಮರುಭೂಮಿ ಗಡಿ ಪ್ರದೇಶದಲ್ಲೇ ಹೆಚ್ಚಾಗಿ ನಿಯೋಜಿಸಲ್ಪಡುತ್ತಿದ್ದ ಅಸಾಲ್ಟ್ […]

Advertisement

Wordpress Social Share Plugin powered by Ultimatelysocial