ಕವಿತಾ ಗಿರೀಶ್ ಉತ್ಸಾಹಿ ಬರಹಗಾರ್ತಿ.

 

ಮಾರ್ಚ್ 5 ಕವಿತಾ ಅವರ ಜನ್ಮದಿನ. ಮೂಲತಃ ಇವರು ಉತ್ತರ ಕನ್ನಡದ ಯಲ್ಲಾಪುರದವರು. ತಂದೆ ಮಹಾನ್ ವಿದ್ವಾಂಸರಾದ ಅನಂತ ವೈದ್ಯ ಅವರು. ಕವಿತಾ ತಮ್ಮ ಕುಟುಂಬದೊಂದಿಗೆ ಯುನೈಟೆಡ್ ಎಮಿರೇಟ್ಸ್ ದೇಶದ ಶಾರ್ಜಾ ನಗರದಲ್ಲಿ ನೆಲೆಸಿದ್ದಾರೆ.”ಓದುವುದು ನನ್ನ ಹವ್ಯಾಸ. ಓದಿನಿಂದ ಬರವಣಿಗೆ” ಎಂಬುದು ಕವಿತಾ ಅವರ ಸರಳ ಸುಸ್ಪಷ್ಟ ಮಾತು. ಅವರ ಓದೇ ಅವರಲ್ಲಿನ ಅನುಭೂತಿಗಳಿಗೆ ಅಭಿವ್ಯಕ್ತಿ ತಂದು, ಅವರನ್ನು ಬರಹಗಾರ್ತಿಯಾಗಿಸಿದೆ.
ಕವಿತಾ ಅವರು ಹಲವು ನೀಳ್ಗತೆಗಳು, ಕವನಗಳು, ಸಣ್ಣ ಕತೆಗಳು, ಲಲಿತ ಪ್ರಬಂಧಗಳನ್ನು ಮೂಡಿಸಿದ್ದು ಅವು ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ. ಕೆಲವು ಸಂಕಲನಗಳಲ್ಲೂ ಕಂಗೊಳಿಸಿವೆ.
ಸಮಧುರ ಬರಹ ಶೈಲಿಯ, ಆಳ ಚಿಂತನಾಭಿವ್ಯಕ್ತಿಗಳುಳ್ಳ ಕವಿತಾ ಅವರ ಬರಹಗಳು ಕೃತಿಗಳಾಗಿಯೂ ಹೊರಹೊಮ್ಮುವ ದಿನಗಳು ದೂರವಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಾಕೇಸರಿ ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರು.

Mon Mar 6 , 2023
  ಕಲಾಕೇಸರಿ ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರು.ಉದಯ್ ಕುಮಾರ್ 1935ರ ಮಾರ್ಚ್ 16ರಂದು ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.‘ರತ್ನಗಿರಿ ರಹಸ್ಯ’ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಉದಯ್ ಕುಮಾರ್ […]

Advertisement

Wordpress Social Share Plugin powered by Ultimatelysocial