ಸಂಜಯ್ ದತ್, ರವಿಚಂದ್ರನ್ ಬಳಿಕ ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಬಾಲಿವುಡ್‌ ‘ಸ್ಟಾರ್’ ನಟಿ ಎಂಟ್ರಿ!.

 

 

‘ಜೋಗಿ’ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಟೀಸರ್‌ ಈಗಾಗಲೇ ವೈರಲ್‌ ಆಗಿದ್ದು, ಈಗಾಗಲೇ ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಸಂಜಯ್ ದತ್‌ ನಟಿಸುತ್ತಿದ್ದಾರೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರು ಕೂಡ ಅಣ್ಣಯ್ಯಪ್ಪ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈಗ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕೂಡ ಈ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಅನ್ನೋ ಟಾಕ್ ಜೋರಾಗಿ ಕೇಳಿಬಂದಿದೆ.1998ರಲ್ಲಿ ತೆರೆಕಂಡ ‘ಪ್ರಿತ್ಸೋದ್‌ ತಪ್ಪಾ’ ಸಿನಿಮಾದ ಮೂಲಕ ರವಿಚಂದ್ರನ್‌ ಅವರೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ಶಿಲ್ಪಾ ಶೆಟ್ಟಿ, 2003ರಲ್ಲಿ ‘ಒಂದಾಗೋಣ ಬಾ’ ಹಾಗೂ 2005ರಲ್ಲಿ ಉಪೇಂದ್ರ ನಟನೆಯ ‘ಆಟೋ ಶಂಕರ್‌’ ಚಿತ್ರದಲ್ಲಿ ನಟಿಸಿದ್ದರು. ಈಗ 17 ವರ್ಷಗಳ ನಂತರ ಅವರು ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಸದ್ಯದಲ್ಲೇ ಅನೌನ್ಸ್‌ ಮಾಡಲಿದೆ.ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತರುವ ಈ ಬಹುಭಾಷಾ ಪ್ರಾಜೆಕ್ಟ್‌ಗೆ ನಿರ್ದೇಶಕ ಪ್ರೇಮ್‌ ಅವರು ‘ಕೆಡಿ’ ಎಂಬ ಕ್ಯಾಚಿ ಟೈಟಲ್‌ ಇಟ್ಟಿದ್ದಾರೆ. ಸದ್ಯಕ್ಕೆ ಬೆಂಗಳೂರು ಸುತ್ತಮುತ್ತ ಇದರ ಶೂಟಿಂಗ್‌ ನಡೆಯುತ್ತಿದ್ದು, ರವಿಚಂದ್ರನ್‌ ಇದರಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಎಂಬುದನ್ನು ಚಿತ್ರತಂಡವೇ ಅನೌನ್ಸ್‌ ಮಾಡಿದೆ. ಬಾಲಿವುಡ್‌ ನಟ ಸಂಜಯ್‌ ದತ್‌ ವಿಲನ್‌ ಪಾತ್ರದಲ್ಲಿ ನಟಿಸಲಿದ್ದು, ಅವರು ಸಹ ಶೂಟಿಂಗ್‌ನಲ್ಲಿ ಪಾಲೊಂಡಿದ್ದಾರೆ. ಈಗ ಮುಂದಿನ ಸರದಿ ನಟಿ ಶಿಲ್ಪಾ ಶೆಟ್ಟಿ ಅವರದ್ದು ಎನ್ನಲಾಗಿದೆ.ಧ್ರುವ ಸರ್ಜಾ ಅವರ ಈ ‘ಕೆಡಿ’ ಸಿಇಮಾ ರೆಟ್ರೋ ಸ್ಟೈಲ್‌ನಲ್ಲಿ ನಿರ್ಮಾಣವಾಗುತ್ತಿದೆ. ಇಲ್ಲಿ ಧ್ರುವ ಸರ್ಜಾ ಅವರು ರೌಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಟೈಟಲ್‌ ಟೀಸರ್‌ನಲ್ಲಿ ಗೊತ್ತಾಗಿತ್ತು. ಈ ಸಿನಿಮಾದ ಕಲಾವಿದರ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ‘ಜೋಗಿ’ ಪ್ರೇಮ್, ‘ಈ ಸಿನಿಮಾದ ಪಾತ್ರಗಳನ್ನು ಮಾತ್ರ ಪರಿಚಯವನ್ನಷ್ಟೇ ಮಾಡುತ್ತಿದ್ದು, ಆ ಪಾತ್ರಗಳ ಹಿನ್ನೆಲೆ, ವಿವರ ಎಲ್ಲವೂ ತೆರೆಮೇಲೆ ನೋಡಿದಾಗಷ್ಟೇ ತಿಳಿಯುತ್ತದೆ. ಈ ಸಿನಿಮಾದಲ್ಲಿ ಭಾರತದ ವಿವಿಧ ಭಾಷೆಗಳ ಪ್ರಮುಖ ಕಲಾವಿದರು ನಟಿಸಲಿದ್ದಾರೆ. ಸಿನಿಮಾದ ಬಗ್ಗೆ ಸದ್ಯಕ್ಕೆ ಬೇರೆ ಯಾವುದೇ ಮಾಹಿತಿ ನೀಡುವುದಿಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವಂತೂ ಇರುತ್ತದೆ. ಮುಂದಿನ ದಿನಗಳಲ್ಲಿಇನ್ನೂ ಅದ್ಭುತವಾದ ಪಾತ್ರಗಳನ್ನು ಪರಿಚಯಿಸುವೆ..’ ಎಂದು ಪ್ರೇಮ್ ಹೇಳುತ್ತಾರೆ.’ಕೆಡಿ’ ಸಿನಿಮಾದ ಪಾತ್ರಕ್ಕಾಗಿ ನಟ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಕೆಡಿ ಸಿನಿಮಾದಲ್ಲಿ ಹೇಳಲಾಗುತ್ತಿದ್ದು, 70ರ ದಶಕದ ಗ್ಯಾಂಗ್‌ವಾರ್, ರೌಡಿಸಂ ಈ ಚಿತ್ರದಲ್ಲಿದೆಯಂತೆ. 1970ರಲ್ಲಿ ಅಂಡರ್‌ವರ್ಲ್ಡ್‌ ಲೋಕದಲ್ಲಿ ಹಲವರನ್ನು ಫೈಟರ್‌ಗಳು ಎಂದು ಕರೆಯುತ್ತಿದ್ದರು. ಅಂತಹ ಒಬ್ಬ ಫೈಟರ್ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು ಬಾಡಿ ಬಿಲ್ಡ್ ಮಾಡಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯ ಚೆನ್ನಾಗಿದ್ದರೆ ಸಾಧನೆ ಸಾಧ್ಯ:

Tue Feb 28 , 2023
ಮೈಸೂರು: ಮನುಷ್ಯನ ಆರೋಗ್ಯ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರೆ, ಗುರಿಯಿಟ್ಟುಕೊಂಡು ಸಾಧನೆ ಮಾಡಿದರೆ ಯಾವುದೇ ಕೆಲಸವನ್ನು ಯಶಸ್ವಿಯಾಗಿ ಸಾಧಿಸಬಹುದು ಎಂದು ಡಾ. ಲೋಹಿತ್ ತಿಳಿಸಿದರು. ವಿಜಯನಗರ 2ನೇ ಹಂತದಲ್ಲಿರುವ ಸಿದ್ದರಾಮಯ್ಯ ಬಾಲಕಿಯರ ವಸತಿ ನಿಲಯದಲ್ಲಿ ಹುಣಸೂರಿನ ಕಾವೇರಿ ಆಸ್ಪತ್ರೆಯ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಮೈಸೂರಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವುದೇ ಸಂತೋಷದ ವಿಷಯವಾಗಿದೆ. ಸಿದ್ದರಾಮಯ್ಯನವರು ಹಿಂದುಳಿದ ವರ್ಗದ […]

Advertisement

Wordpress Social Share Plugin powered by Ultimatelysocial