ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಗುರುವಾರ ರಾತ್ರಿ ಭಾಷಣ ಮಾಡಲಿದ್ದಾರೆ.!

ದೇಶವನ್ನು ಉದ್ದೇಶಿಸಿ ಗುರುವಾರ ರಾತ್ರಿ ಭಾಷಣ ಮಾಡಲಿದ್ದಾರೆ.

ಕೆಂಪುಕೋಟೆಯ ಮೇಲಿನಿಂದ ಈ ಭಾಷಣ ಮಾಡಲಿದ್ದಾರೆ.

ಗುರುವಾರ ರಾತ್ರಿ 9.15ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಸಿಖ್ ಗುರು ತೇಜ್ ಬಹದ್ದೂರ್ ಅವರ 400ನೇ ಪ್ರಕಾಶ್ ಪುರಬ್ ಅಂಗವಾಗಿ ಮೋದಿ ಭಾಷಣ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮೋದಿ ತೇಜ್ ಬಹದ್ದೂರ್ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ನವದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಸಹಯೋಗದೊಂದಿಗೆ ಕೆಂಪುಕೋಟೆಯಲ್ಲಿ ಎರಡು ದಿನಗಳ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಕಾರ್ಯಕ್ರಮದ ಕೇಂದ್ರಬಿಂದುವಾಗಿದೆ ಎಂದು ಹೇಳಿದ್ದಾರೆ. 400 ಸಿಖ್ ಸಂಗೀತಗಾರರು ಶಾಬಾದ್ ಕೀರ್ತನೆಗಳನ್ನು ಹಾಡಿದ ಬಳಿಕ ಮೋದಿ ಭಾಷಣ ಮಾಡಲಿದ್ದಾರ

ದೇಶದ ವಿವಿಧ ಭಾಗಗಳಿಂದ ಕೀರ್ತನಕಾರರು ಮತ್ತು ಮಕ್ಕಳು ಶಾಬಾದ್ ಕೀರ್ತನೆಯಲ್ಲಿ ಭಾಗವಹಿಸಲಿದ್ದಾರೆ. ಗುರು ತೇಜ್ ಬಹದ್ದೂರ್ ಜಿ ಅವರ ಜೀವನವನ್ನು ಬಿಂಬಿಸುವ ಭವ್ಯವಾದ ಧ್ವನಿ ಮತ್ತು ಬೆಳಕಿನ ಪ್ರದರ್ಶನವೂ ನಡೆಯಲಿದೆ.

ಜಾಗತಿಕ ಇತಿಹಾಸದಲ್ಲಿ ಧರ್ಮ ಮತ್ತು ಮಾನವೀಯ ಮೌಲ್ಯಗಳು, ಆದರ್ಶಗಳು ಮತ್ತು ತತ್ವಗಳನ್ನು ರಕ್ಷಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ 9ನೇ ಸಿಖ್ ಗುರು ಗುರು ತೇಜ್ ಬಹಾದ್ದೂರ್ ಜಿ ಬೋಧನೆಗಳನ್ನು ಪ್ರಚಾರ ಮಾಡಲು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಕಾಶ್ಮೀರಿ ಪಂಡಿತರ ಧಾರ್ಮಿಕ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದಕ್ಕಾಗಿ ಗುರು ತೇಜ್ ಬಹಾದ್ದೂರ್ ಜಿ ಗಲ್ಲಿಗೇರಿಸಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯ ಗುಂಪು ಗಲಭೆಯ ಹಿಂದೆ ಬಿಜೆಪಿ ಕೈವಾಡ!

Thu Apr 21 , 2022
ಬೆಂಗಳೂರು, ಏ.21- ಹುಬ್ಬಳ್ಳಿಯ ಗುಂಪು ಗಲಭೆಯ ಹಿಂದೆ ಬಿಜೆಪಿ ಕೈವಾಡವಿದ್ದು, ಮೊದಲು ಆ ಕುರಿತು ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ಲಂಚದ ಹಗರಣದಿಂದ ಉಂಟಾಗುತ್ತಿದ್ದ ಮಾನ ಹಾನಿಯನ್ನು ತಪ್ಪಿಸಿಕೊಳ್ಳಲು ವಿಷಾಂತರಿಸುವ ಸಲುವಾಗಿ ಬಿಜೆಪಿಯವರೇ ವಿವಾದಿತ ಸಾಮಾಜಿಕ ಫೋಸ್ಟ್ ಹಾಕಿದ್ದಾರೆ. ಅದರ ಬೆನ್ನಲ್ಲೆ ಗಲಭೆಯಾಗಿದೆ ಎಂದಿದ್ದಾರೆ. ಗಲಭೆಯ ವೇಳೆ ಶಾಂತಿ ಕಾಪಾಡಲು ಕಾಂಗ್ರೆಸ್‍ನ ಎಲ್ಲಾ ನಾಯಕರು ಪ್ರಯತ್ನ ಪಟ್ಟಿದ್ದಾರೆ. […]

Advertisement

Wordpress Social Share Plugin powered by Ultimatelysocial