ಹಬ್ಬದ ದಿನ 7 ಗಂಟೆ ಧ್ಯಾನ ಮಾಡಿದ ಕೇಜ್ರಿವಾಲ್‌, ಕಾರಣವೇನು?

ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ತಮ್ಮ ಬಿಡುವಿಲ್ಲದ ಕಾರ್ಯದ ಒತ್ತಡದ ಮಧ್ಯೆಯೂ ಆಗಾಗ ಧ್ಯಾನ  ಮಾಡುತ್ತಾರೆ. ಕಳೆದ ಡಿಸೆಂಬರ್‌ನಲ್ಲಿ ಕೇಜ್ರಿವಾಲ್‌ ಅವರು ಒಂದು ವಾರ ವಿಪಶ್ಯನ ಧ್ಯಾನ ಮಾಡಿದ್ದರು. ಆ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿದ್ದರು. ಈಗ ಮತ್ತೊಮ್ಮೆ ಅರವಿಂದ್‌ ಕೇಜ್ರಿವಾಲ್‌ ಅವರು ಬುಧವಾರ 7 ಗಂಟೆ ಧ್ಯಾನ ಮಾಡಿದ್ದಾರೆ.

ಹೋಳಿ ಹಬ್ಬದ ದಿನವಾದ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸತತವಾಗಿ ಏಳು ಗಂಟೆ ಅವರು ಧ್ಯಾನ ಮಾಡಿದ್ದಾರೆ. ‘ದೇಶಕ್ಕಾಗಿ ಪ್ರಾರ್ಥನೆʼ ಎಂಬ ಧ್ಯೇಯೋದ್ದೇಶದಿಂದ ಕೇಜ್ರಿವಾಲ್‌ ಅವರು ಧ್ಯಾನ ಮಾಡಿದ್ದಾರೆ. ಅಬಕಾರಿ ನೀತಿ ಜಾರಿ ವೇಳೆ ಅಕ್ರಮದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹಾಗೂ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಸತ್ಯೇಂದರ್‌ ಜೈನ್‌ ಅವರನ್ನು ಬಂಧಿಸಿದ ಕಾರಣ, ಹೋಳಿ ಹಬ್ಬದ ಆಚರಣೆ ತೊರೆದು, ಕೇಜ್ರಿವಾಲ್‌ ಧ್ಯಾನ ಮಾಡಿದ್ದಾರೆ.

ಧ್ಯಾನ ಆರಂಭಿಸುವ ಮೊದಲು ಅರವಿಂದ್‌ ಕೇಜ್ರಿವಾಲ್‌ ಅವರು ರಾಜ್‌ ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ನಮನ ಸಲ್ಲಿಸಿದರು. ಇದಾದ ಬಳಿಕ ಅವರು ಏಳು ಗಂಟೆ ವಿಪಶ್ಯನ ಧ್ಯಾನ ಮಾಡಿದ್ದಾರೆ. “ಕೇಜ್ರಿವಾಲ್‌ ಅವರು ದೇಶಕ್ಕಾಗಿ ಪ್ರಾರ್ಥಿಸಿ ಧ್ಯಾನ ಆರಂಭಿಸಿದ್ದಾರೆ” ಎಂದು ಆಪ್‌ ಟ್ವೀಟ್‌ ಮಾಡಿದೆ. ಧ್ಯಾನದ ಮೂಲಕವೇ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಆಪ್‌ ನಾಯಕರ ಬಂಧನವನ್ನು ಖಂಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭವಿಷ್ಯದಲ್ಲಿ ಪುರುಷರನ್ನು ಒಳಗೊಂಡ ಮಹಿಳಾ ದಿನಾಚರಣೆ ಆಗಬೇಕು!

Wed Mar 8 , 2023
ಬೆಂಗಳೂರು, ಮಾರ್ಚ್ 08: ಜನ್ಮಪೂರ್ವದಿಂದಲೂ ತಾಯಿಯೊಂದಿಗೆ ಪವಿತ್ರ ಸಂಬಂಧ ಹೊಂದಿರುವ ಪುರಷರನ್ನು ಒಳಗೊಂಡು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನದಲ್ಲಿ ಆಯೋಜಿಸಿರುವ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮತ್ತು ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ’ ಮಾಡಿ ಅವರು ಮಾತನಾಡಿದರು. ಪುರಷನು ತಾನು ಹುಟ್ಟು ಮೊದಲಿಂದಲೂ […]

Advertisement

Wordpress Social Share Plugin powered by Ultimatelysocial