ಬಾಲಿವುಡ್ ಕಿಂಗ್ ಶಾರುಖ್ ಖಾನ್ ಸಿನಿಮಾ ‘ಪಠಾಣ್’ ಜನವರಿ 25ಕ್ಕೆ!

ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ನೋಡುವುದಕ್ಕೆ ಅದೆಷ್ಟೋ ಮಂದಿ ಫ್ಯಾನ್ಸ್ ಕಾದು ಕೂತಿದ್ದಾರೆ. ಇನ್ನೊಂದು ಕಡೆ ಸಿನಿಮಾ ವಿವಾದಕ್ಕೂ ಸಿಕ್ಕಿಕೊಂಡು ವಿಲವಿಲ ಅಂತ ಒದ್ದಾಡುತ್ತಿದೆ.

ಇತ್ತೀಚೆಗೆ ‘ಪಠಾಣ್’ ಸಿನಿಮಾದ “ಬೇಷರಂ ರಂಗ್.. ” ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಹಾಡು ಅಶ್ಲೀಲವಾಗಿದೆ ಎಂದು ಕಿಡಿಕಾರಿದ್ದರು. ಅಲ್ಲದೆ ಸೆನ್ಸಾರ್ ಬೋರ್ಡ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

ಇನ್ನೇನು ಸಿನಿಮಾ ಬಿಡುಗಡೆಗೆ ಸನಿಹದಲ್ಲಿರುವಾಗಲೇ ಸೆನ್ಸಾರ್ ಸಿನಿಮಾ ಕತ್ತರಿ ಹಾಕಿದೆ. ಹಾಗಿದ್ದರೆ ವಿವಾದಕ್ಕೆ ಸಿಲುಕಿದ್ದ ‘ಪಠಾಣ್‌’ಗೆ ಸೆನ್ಸಾರ್ ಬೋರ್ಡ್ ಎಲ್ಲೆಲ್ಲಿ ಕತ್ತರಿ ಹಾಕಿದೆ? ಯಾವ ಸರ್ಟಿಫಿಕೇಟ್ ಸಿಕ್ಕಿದೆ? ಬೇಷರಂ ಹಾಡು ಇರುತ್ತಾ? ಇಲ್ವಾ? ಇವೆಲ್ಲದರ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ.

‘ಪಠಾಣ್‌’ಗೆ U/A ಸೆರ್ಟಿಫಿಕೇಟ್ವಿವಾದ ಸುಳಿಗೆ ಸಿಲುಕಿ ಬೆಂಡಾಗಿದ್ದ ಶಾರುಖ್ ಖಾನ್‌ ಸಿನಿಮಾ ‘ಪಠಾಣ್‌’ವನ್ನು ಸೆನ್ಸಾರ್ ಬೋರ್ಡ್ ವೀಕ್ಷಿಸಿದೆ. ಸೆನ್ಸಾರ್ ಅಧಿಕಾರಿಗಳು ಸಿನಿಮಾ ನೋಡಿ U/A ಸೆರ್ಟಿಫಿಕೇಟ್ ನೀಡಿದೆ. ಆದರೆ, ಸುಮಾರು 10 ಕಡೆಗಳಲ್ಲಿ ಕತ್ತರಿ ಹಾಕುವಂತೆ ಸೂಚನೆಯನ್ನು ನೀಡಿದೆ. ಇದರಲ್ಲಿ ಇತ್ತೀಚೆಗೆ ವಿವಾದಕ್ಕೆ ಒಳಗಾಗಿದ್ದ ಬೇಷರಂ ಹಾಡು ಕೂಡ ಇದೆ. ದೀಪಿಕಾ ಪಡುಕೋಣೆ ಕ್ಲೋಸ್‌ ಅಪ್ ದೃಶ್ಯ ಹಾಗೂ ಡೈಲಾಗ್‌ಗಳಿಗೆ ಕತ್ತರಿ ಹಾಕುವಂತೆ ತಿಳಿಸಿದೆ. ಸದ್ಯ 10 ದೃಶ್ಯಗಳಲ್ಲಿ ಏನಕ್ಕೆ ಕತ್ತರಿ ಪ್ರಯೋಗ ಮಾಡಿದೆ ಅನ್ನೋನ್ನು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

10 ಕಡೆ ‘ಪಠಾಣ್’ ಸಿನಿಮಾಗೆ ಕತ್ತರಿ

“ಬೇಷರಂ ರಂಗ್…” ಹಾಡನಲ್ಲಿ ಮೂರು ಬದಲಾವಣೆಗಳನ್ನು ಮಾಡುವಂತೆ ಸೆನ್ಸಾರ್ ಬೋರ್ಡ್ ಸೂಚಿದೆ. ದೀಪಿಕಾ ಕ್ಲೋಸ್ ಅಪ್ ಶಾರ್ಟ್ಸ್‌ನಲ್ಲಿ ಸೈಡ್ ಪೋಸ್, ಮಾದಕ ಡ್ಯಾನ್ಸ್ ಮೂವ್‌ಮೆಂಟ್ಸ್ ಹಾಗೂ ಬಹುತ್ ತಂಗ್ ಕಿಯ ( ತುಂಬಾನೇ ಸತಾಯಿಸಿ ಬಿಟ್ಟೆ) ಅನ್ನೋದನ್ನು ತೆಗೆದು ಹಾಕುವಂತೆ ಹೇಳಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಅದರಂತೆಯೇ ಸೆನ್ಸಾರ್ ಸರ್ಟಿಫಿಕೇಟ್‌ನಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಕೇಸರಿ ಬಿಕಿನಿಯನ್ನು ತೆಗೆಯುವಂತೆ ಸೂಚಿಸಿಲ್ಲ ಎನ್ನಲಾಗಿದೆ.

ಕೆಲವು ಪದಗಳಿಗೆ ಸೆನ್ಸಾರ್ ಕತ್ತರಿ

‘ಪಠಾಣ್’ ಸಿನಿಮಾದ ಡೈಲಾಗ್‌ಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಹೇಳಲಾಗಿದೆ. ‘ರಾ’ ಪದವನ್ನು ‘ಹಮಾರೆ’ ಅಂತಲೂ ‘ಲಂಗ್ಡೆ ಲುಲ್ಲೆ’ ಅನ್ನೋ ಪದಗಳ ಬದಲು ‘ಟೂಟೆ ಫೂಟೆ’ ಅಂತಲೂ ಸೇರಿಸುವಂತೆ ತಿಳಿಸಿದೆ. 13 ಕಡೆ ‘ಪಿಎಂಓ’ ಪದವನ್ನು ತೆಗೆದು ಹಾಕುವಂತೆ ಹೇಳಿದೆ. ‘ಪಿಎಂ’ ಬದಲು ಅಧ್ಯಕ್ಷ ಅಥವಾ ಮಿನಿಸ್ಟರ್ ಅಂತ ಸೇರಿಸುವಂತೆ ಹೇಳಲಾಗಿದೆ. ‘ಮಿಸ್ಸಸ್ ಭಾರತ್‌ ಮಾತಾ’ ಬದಲು ‘ಹಮಾರಿ ಭಾರತ್‌ ಮಾತಾ’ ಹಾಗೂ ‘ಅಶೋಕ ಚಕ್ರ’ ಬದಲು ‘ವೀರ್ ಪುರಸ್ಕರ್’ ಹಾಗೇ ‘ಕೆಜಿಬಿ’ ಬದಲು ‘ಎಸ್‌ಬಿಯು’ ಎಂದೂ, ‘ಸ್ಕಾಚ್’ ಬದಲು ‘ಡ್ರಿಂಕ್’ ಅಂತಲೂ ಬದಲಾಯಿಸುವಂತೆ ಹೇಳಿದೆ. ಹಾಗೇ ರಷ್ಯಾ ಪದವನ್ನು ತೆಗೆಯುವಂತೆ ಸೂಚಿಸಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿಂಹ- ಪ್ರಿಯಾ ವಿವಾಹಕ್ಕೆ ಮೂಹೂರ್ತ ಫಿಕ್ಸ್

Thu Jan 5 , 2023
‌ ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನಲ್ಲಿ ತಮ್ಮ ವಿವಾಹ ಸಮಾರಂಭ ನಡೆಸಲು ಇಬ್ಬರು ನಿರ್ಧರಿಸಿದ್ದಾರೆ.  ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನಲ್ಲಿ ತಮ್ಮ ವಿವಾಹ ಸಮಾರಂಭ ನಡೆಸಲು ಇಬ್ಬರು ನಿರ್ಧರಿಸಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ಚಂದನವನದ ಮುದ್ದು ಜೋಡಿಯ ವಿವಾಹ ನಡೆಯಲಿದೆ. ಹರಿಪ್ರಿಯಾ-ವಸಿಷ್ಠ ಅವರು […]

Advertisement

Wordpress Social Share Plugin powered by Ultimatelysocial