ಬೆಂಜಮಿನ್ ಫ್ರಾಂಕ್ಲಿನ್ ಒಬ್ಬ ವಿಜ್ಞಾನಿ.

ಬೆಂಜಮಿನ್ ಫ್ರಾಂಕ್ಲಿನ್ ಒಬ್ಬ ವಿಜ್ಞಾನಿಯಾಗಿ, ಲೇಖಕನಾಗಿ, ರಾಜಕಾರಣಿಯಾಗಿ, ಸಂಗೀತಗಾರನಾಗಿ ಮುತ್ಸದ್ದಿಯಾಗಿ ಅಮೆರಿಕದಲ್ಲಿ ಹೆಸರು ಮಾಡಿದವರು. ಅಮೆರಿಕದ ಪ್ರಥಮ ಪೋಸ್ಟ್ ಜನರಲ್ ಆಗಿದ್ದವರು. ಇವರಿಗೆ ಮಿಂಚೆಂಬುದು ವಿದ್ಯುತ್ ಸಂಬಂಧವಾದ ವಿದ್ಯಮಾನವಾಗಿ ಅರಿವಾಯಿತು. ಅದನ್ನು ಲೋಕಕ್ಕೆ ತೋರಿಸಿಕೊಟ್ಟರು ಕೂಡ. ಅಲ್ಲದೆ ಮಿಂಚುಕೋಲು, ಫ್ರಾಂಕ್ಲಿನ್ ಸ್ಟೌವ್, ಓಡೋಮೀಟರ್, ಬೈಫೋಕಲ್ ಕನ್ನಡಕದ ಗಾಜು ಹೀಗೆ ಅನೇಕ ವಸ್ತುಗಳ ಜನಕರವರು.
ಫ್ರಾಂಕ್ಲಿನ್ 1706ರ ಜನವರಿ 17ರಂದು ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ನಲ್ಲಿ ಜನಿಸಿದರು. 1790ರವರೆಗೆ ಜೀವಿಸಿದ್ದ ಅವರು ಅಮೆರಿಕದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು.
ಬೆಂಜಮಿನ್ ಫ್ರಾಂಕ್ಲಿನ್ ವಿಜ್ಞಾನ ಕ್ಷೇತ್ರದಲ್ಲಿ ವಿದ್ಯುಚ್ಛಕ್ತಿ ಸಂಬಂಧಿಸಿದ ಸಂಶೋಧನೆಗೆ ಮತ್ತು ಭೌತಶಾಸ್ತ್ರದಲ್ಲಿನ ಚಿಂತನೆಗಳಿಗೆ ಹೆಸರುವಾಸಿಯಾಗಿದ್ದಾರೆ. 1752ರಲ್ಲಿ ಗುಡುಗು, ಬಿರುಗಾಳಿಯ ಸಂದರ್ಭದಲ್ಲಿ ಆಕಾಶದಲ್ಲಿ ಗಾಳಿಪಟವನ್ನು ಹಾರಿಸುವಾಗ, ಮಿಂಚಿನಲ್ಲಿ ವಿದ್ಯುತ್ ಇದೆ ಎಂದು ಕಂಡುಕೊಂಡರು. ಈ ಘಟನೆ ಫ್ರಾಂಕ್ಲಿನ್ ಅವರಿಗೆ ಮಿಂಚುವಾಹಕಗಳನ್ನು ತಯಾರಿಸಲು ಪ್ರೇರೇಪಣೆಯಾಯಿತು. 1753ರ ನಂತರ ಅಮೆರಿಕದಲ್ಲಿ ಅನೇಕ ಮಿಂಚುವಾಹಕಗಳನ್ನು ತಯಾರಿಸಿ, ಎಡ್ ಸ್ಟೋನ್ ಲೈಟ್ ಹೌಸ್, ಇಟಲಿಯ ಸಿಡಿಮದ್ದು ಪುಡಿ ಭಂಡಾರ, ಬ್ರಿಟಿಷ್ ಸಿಡಿಮದ್ದು ಉಗ್ರಾಣ ಮುಂತಾದ ಬಹುಮುಖ್ಯ ಕಟ್ಟಡಗಳನ್ನು ರಕ್ಷಿಸಲಾಯಿತು.
ಬೆಂಜಮಿನ್ ಫ್ರಾಂಕ್ಲಿನ್ ಒಮ್ಮೆ ಇಂಗ್ಲೆಂಡಿಗೆ ಆಗಮಿಸಿದ್ದರು. ಅಲ್ಲಿನ ಲಂಡನ್ನಿನ ಕ್ಲೆಫಾಮ್ ಕಾಮನ್ ಸರೋವರದ ದಡದಲ್ಲಿ ಕುಳಿತಿದ್ದರು. ಗಾಳಿಯ ಅತ್ಯಧಿಕ ಬೀಸುವಿಕೆಯಿಂದ ಸರೋವರವು ಪ್ರಕ್ಷುಬ್ದವಾಗಿತ್ತು. ನೀರಿನ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದವು. ಅಲ್ಲಿ ನಿಂತಿದ್ದವರಿಗೆ ತಾನು ಇನ್ನೈದು ನಿಮಿಷಗಳಲ್ಲಿ ಸರೋವರವನ್ನು ಶಾಂತಗೊಳಿಸುವುದಾಗಿ ತಿಳಿಸಿದರು. ಇಂದೊಂದು ಇಂದ್ರಜಾಲವೇ ಸರಿ ಎಂದು ನಂಬಿದ ಜನ ಸಮುದಾಯ ಸ್ವಲ್ಪ ಸಮಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರತೊಡಗಿತ್ತು. ಫ್ರಾಂಕ್ಲಿನ್ ಒಂದು ಚಮಚದಲ್ಲಿ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಸರೋವರಕ್ಕೆ ಸುರಿದರು. ಬೀಸುತ್ತಿದ್ದ ಗಾಳಿಯಿಂದ ಕೆಲವೇ ನಿಮಿಷಗಳಲ್ಲಿ ಆಲಿವ್ ಎಣ್ಣೆ ಸರೋವರದ ನೀರಿನ ಮೇಲ್ಪದರದಲ್ಲಿ ಹರಡಿತು. ಏನಾಶ್ಚರ್ಯ! ನೋಡುತ್ತಿದ್ದಂತೆ ನೀರು ಒಮ್ಮೆಲೆ ಶಾಂತವಾಯಿತು. ಅಲ್ಲಿ ಸೇರಿದ್ದ ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಆಗ ಫ್ರಾಂಕ್ಲಿನ್ ಹೇಳಿದರು, “ಇದರಲ್ಲಿ ಯಾವ ಪವಾಡವೂ ಇಲ್ಲ. ಆಶ್ಚರ್ಯ ಪಡುವಂತೆಯೂ ಇಲ್ಲ. ಆಲಿವ್ ಎಣ್ಣೆ ನೀರಿನಲ್ಲಿ ಬೆರೆಯದೆ ಇರುವುದರಿಂದ ಹಾಗೂ ಅದು ನೀರಿಗಿಂತ ಹಗುರಾಗಿ ಇರುವುದರಿಂದ ಅದರ ತೆಳುವಾದ ಪದರ ನೀರಿನ ಮೇಲೆಲ್ಲಾ ಹರಡಿಕೊಂಡು ನೀರಿನ ಪ್ರಕ್ಷುಬ್ದತೆಯನ್ನು ನಿವಾರಿಸಿ ನೀರನ್ನು ಶಾಂತವಾಗಿರುವಂತೆ ಮಾಡುತ್ತದೆ” ಎಂದು ವಿವರಿಸಿದರು.
ಬೆಂಜಮಿನ್ ಫ್ರಾಂಕ್ಲಿನ್ ಅವರ ಪ್ರಸಿದ್ಧ ಉದ್ಘೋಷ ಹೀಗಿದೆ. “ಎಲ್ಲರೊಂದಿಗೆ ಸಜ್ಜನಿಕೆಯಿಂದಿರು; ಸಾರ್ವಜನಿಕದಲ್ಲಿ ಬಹಳಷ್ಟು ಜನರೊಂದಿಗಿರು; ಕೆಲವರಿಗೆ ಪರಿಚಯಸ್ಥನಾಗಿರು; ಒಬ್ಬರಿಗೆ ಗೆಳೆಯನಾಗಿರು; ಯಾರಿಗೂ ಶತ್ರುವಾಗಿರಬೇಡ”.
ಬೆಂಜಮಿನ್ ಫ್ರಾಂಕ್ಲಿನ್ ವಿಜ್ಞಾನಿ ಮಾತ್ರವಲ್ಲದೆ ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು, ರಾಜನೀತಿಶಾಸ್ತ್ರಜ್ಞರು, ಸಂಶೋಧಕರು, ಮುದ್ರಕರು ಮತ್ತು ರಾಯಭಾರಿಯೂ ಆಗಿದ್ದರು. ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು, ಲೇಖನ ಬರೆಯುವವರೆಗೂ ಎಲ್ಲ ಕೆಲಸಗಳನ್ನು ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸ.

Tue Jan 17 , 2023
ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅರಸು ಮನೆತನಗಳಲ್ಲಿ ಮೂರನೆಯದಾದ ತುಳುವ ವಂಶಕ್ಕೆ ಸೇರಿದ ಮತ್ತು ಆ ಸಾಮ್ರಾಜ್ಯದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧನಾದ ಚಕ್ರವರ್ತಿ. ಇವನ ಆಳ್ವಿಕೆಯ ಕಾಲ 1509-1529. ಧರ್ಮರಕ್ಷಣೆಗಾಗಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ತನ್ನ ಧ್ಯೇಯವನ್ನು ಸಾಧಿಸಿತಲ್ಲದೆ ಉನ್ನತ ಕೀರ್ತಿಯನ್ನೂ ಪಡೆಯಿತು. ಪೇಸ್, ನ್ಯೂನಿಜ್, ಬರ್ಬೊಸ ಮೊದಲಾದ ಪೋರ್ಚುಗೀಸ್ ಪ್ರವಾಸಿಗಳು ಇವನ ಆಸ್ಥಾನದಲ್ಲಿದ್ದು, ರಾಜನ ವ್ಯಕ್ತಿತ್ವ ಮತ್ತು ವೈಭವಗಳನ್ನು ಕಣ್ಣಾರೆ ಕಂಡು ಅವನ್ನು ವಿವರವಾಗಿ ವರ್ಣಿಸಿದ್ದಾರೆ. ದೊರೆ […]

Advertisement

Wordpress Social Share Plugin powered by Ultimatelysocial