ಹೈಕೋರ್ಟ್‌ ಮಧ್ಯಂತರ ಆದೇಶದ ನಡುವೆಯೂ ರಾಜ್ಯದಲ್ಲಿ ಹಿಜಾಬ್‌ ಸಂಘರ್ಷ ಮುಂದುವರೆದಿದ್ದು!

ಬೆಳಗಾವಿ : ಹೈಕೋರ್ಟ್‌ ಮಧ್ಯಂತರ ಆದೇಶದ ನಡುವೆಯೂ ರಾಜ್ಯದಲ್ಲಿ ಹಿಜಾಬ್‌ ಸಂಘರ್ಷ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಈ ಕದನ ಅಕ್ಷರಶಃ ತಾರಕಕ್ಕೇರಿದೆ.ಜಿಲ್ಲೆಯ ವಿಜಯ್‌ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರನ್ನ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿತ್ತು.ಆದ್ರೆ, ಹಿಜಾಬ್‌ ತೆಗೆಯದಿದ್ದರಿಂದ‌ ಉಪನ್ಯಾಸಕರು ಪಾಠ ಮಾಡಲು ನಿರಾಕರಿಸಿದ್ದಾರೆ. ಇನ್ನು 2 ಗಂಟೆಗಳ ಕಾಲ ಕಾದು ಕುಳಿತ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ. ಆಗ ಕೆಲ ಯುವಕರು ಕಾಲೇಜಿನ ಬಳಿ ಗಲಾಟೆ ನಡೆಸಿದ್ದರಿಂದ, ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಅದ್ರಂತೆ, ಸೋಮವಾರದವರೆಗೂ ಅನ್‌ಲೈನ್‌ ಕ್ಲಾಸ್ ಮುಂದುವರೆಯಲಿದ್ದು, ನಂತ್ರ ಸಭೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ ̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕೋಡಿ: ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ

Thu Feb 17 , 2022
  ಚಿಕ್ಕೋಡಿ: ಕೆಎಸ್​ಆರ್​ಟಿಸಿ ಬಸ್​ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್​ ಸವಾರರಿಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ‌ ಕೇರೂರವಾಡಿ ಗ್ರಾಮದ ಚಿಕ್ಕೋಡಿ-ಮಿರಜ್ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಬೈಕ್​ ಸವಾರರಾದ ಸವಾರ ಸಂತೋಷ ಮಾಗ(25) ಹಾಗೂ ಶ್ರೀಶೈಲ ಮಹಾದೇವ ಕೂರವಿ(27) ಮೃತ ದುರ್ದೈವಿಗಳು. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial