ಚೀನಾದಲ್ಲಿ ʼಡೈನೋಸಾರ್ ಮರಿʼ ಪತ್ತೆ : ಇದು 72 ದಶಲಕ್ಷ ವರ್ಷಗಳ ಹಿಂದೆ ಸಂರಕ್ಷಿಸಲ್ಪಟ್ಟ ʼಡೈನೋಸಾರ್ ಮೊಟ್ಟೆʼಯಂತೆ

ಚೀನಾದಲ್ಲಿ ʼಡೈನೋಸಾರ್ ಮರಿʼ ಪತ್ತೆ : ಇದು 72 ದಶಲಕ್ಷ ವರ್ಷಗಳ ಹಿಂದೆ ಸಂರಕ್ಷಿಸಲ್ಪಟ್ಟ ʼಡೈನೋಸಾರ್ ಮೊಟ್ಟೆʼಯಂತೆ

ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ವಿಜ್ಞಾನಿಗಳು ಕನಿಷ್ಠ 72 ದಶಲಕ್ಷ ವರ್ಷಗಳ ಹಿಂದೆ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಡೈನೋಸಾರ್ʼನ ಭ್ರೂಣವನ್ನ ಕಂಡುಹಿಡಿದಿರುವುದಾಗಿ ಘೋಷಿಸಿದ್ದಾರೆ. ಅದು ಅದರ ಮೊಟ್ಟೆಯಿಂದ ಮೊಟ್ಟೆಯೊಡೆಯಲು ಸಿದ್ಧತೆ ನಡೆಸಿತ್ತು ಎಂದಿದ್ದಾರೆ.

ಈ ಪಳೆಯುಳಿಕೆಯನ್ನ ದಕ್ಷಿಣ ಚೀನಾದ ಗಾಂಝೌ (Ganzhou)ನಲ್ಲಿ ಕಂಡುಹಿಡಿಯಲಾಗಿದೆ ಮತ್ತು ಇದು ಹಲ್ಲಿಲ್ಲದ ಥೆರೋಪಾಡ್ (Theropod) ಡೈನೋಸಾರ್ ಅಥವಾ ಒವಿರಾಪ್ಟೋರೊಸಾರ್ (Oviraptorosar) ಎಂದು ಹೇಳಲಾಗ್ತಿದೆ. ಇನ್ನು ಈ ಭ್ರೂಣಕ್ಕೆ ‘ಬೇಬಿ ಯಿಂಗ್ಲಿಯಾಂಗ್’ ಎಂದು ಹೆಸರಿಡಲಾಗಿದೆ. ಇನ್ನು ಬೇಬಿ ಯಿಂಗ್ಲಿಯಾಂಗ್ (Baby Yingliang) ವಕ್ರ ಭಂಗಿ ಸಂಶೋಧಕರಿಗೆ ಆಸಕ್ತಿದಾಯಕವಾಗಿದೆ. ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಪ್ಯಾಲಿಯೋಂಟಾಲಜಿಸ್ಟ್ ಗಳು ಭ್ರೂಣವು ಒವಿರಾಪ್ಟೋಸಾರ್ ಪ್ರಭೇದಕ್ಕೆ ಸೇರಿದ್ದು, ಇದು ಹಲ್ಲುಗಳನ್ನ ಹೊಂದಿಲ್ಲ ಮತ್ತು ಕೊಕ್ಕುಗಳನ್ನ ಹೊಂದಿತ್ತು ಎಂದಿದ್ದಾರೆ. ಒವಿರಾಪ್ಟೋಸಾರ್ʼಗಳು ಏಷ್ಯಾ ಮತ್ತು ಉತ್ತರ ಅಮೆರಿಕಾದ ಬಂಡೆಗಳಲ್ಲಿ ಕಂಡುಬರುವ ರೆಕ್ಕೆಯ ಡೈನೋಸಾರ್ʼಗಳಾಗಿದ್ದವು. ಅಂದ್ಹಾಗೆ, ಈ ಭ್ರೂಣವು ಅತ್ಯಂತ ಪೂರ್ಣವಾಗಿ ತಿಳಿದಿರುವ ಡೈನೋಸಾರ್ ಭ್ರೂಣವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಂದೆ ಮನೆಯಲ್ಲಿ ವಾಸಿಸಲು ಮಗನಿಗೆ ಅಧಿಕಾರವಿಲ್ಲ

Wed Dec 22 , 2021
ವಾರಣಾಸಿಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಗನಿಗೆ ತಂದೆಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿಲ್ಲ. ಮಗ ತಾನು ಕಟ್ಟಿದ ಮನೆಯಲ್ಲಿಯೇ ಇರಬೇಕೆಂದು ಕೋರ್ಟ್ ಹೇಳಿದೆ. ಮಗ ತನ್ನ ತಂದೆಯ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ. ಮಂಗಳವಾರ ವಿಚಾರಣೆಯ ಸಂದರ್ಭದಲ್ಲಿ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ-2007 ರ ಸೆಕ್ಷನ್ 21 ರ ಅಡಿಯಲ್ಲಿ, ಮಗ, ತಂದೆ ಮನೆಯಲ್ಲಿ ಉಳಿಯಲು […]

Advertisement

Wordpress Social Share Plugin powered by Ultimatelysocial