ರುಚಿಕರವಾದ ಬಿಸ್ಕೆಟ್ ಬರ್ಫಿ ಮಾಡುವ ವಿಧಾನ!!!!

ಬೇಕಾಗುವ ಪದಾರ್ಥಗಳು :

  • ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್
  • ಸಕ್ಕರೆ – ಅರ್ಧ ಬಟ್ಟಲು
  • ತುಪ್ಪ- ಅರ್ಧ ಕೆಜಿ
  • ಹಾಲಿನ ಪುಡಿ- 1 ಚಮಚ
  • ಹಾಲು- ಅರ್ಧ ಬಟ್ಟಲು
  • ಡ್ರೈಫ್ರೂಟ್ಸ್- ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಕಾಯಲು ಬಿಡಿ. ಕಾದ ತುಪ್ಪಕ್ಕೆ ಪಾರ್ಲೆಜಿ ಬಿಸ್ಕೆಟ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ.

ಬಳಿಕ ತಣ್ಣಗಾಗಲು ಬಿಟ್ಟು ಮಕ್ಸಿ ಜಾರ್’ಗೆ ತುಪ್ಪದಲ್ಲಿ ಕರಿದ ಬಿಸ್ಕೆಟ್ ಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ

ಮತ್ತೊಂದೆಡೆ ಹಾಲಿನ ಪುಡಿಗೆ ಹಾಕಿ ಹಾಲು ಹಾಕಿ ಮಿಶ್ರಣ ಮಾಡಿಕೊಳ್ಳಿ. ಮತ್ತೊಂದು ಬಾಣೆಲೆ ಇಟ್ಟು, ಅದಕ್ಕೆ ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಿ. ಪಾಕ ಗಟ್ಟಿಯಾದ ಬಳಿಕ ಹಾಲಿನ ಪುಡಿ ಮಿಶ್ರಣವನ್ನು ಹಾಕಿ ಕುದಿಯಲು ಬಿಡಿ.

ಬಳಿಕ ಬಿಸ್ಕೆಟ್ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 10-15 ನಿಮಿಷ ಕೈಯಾಡಿಸಿ.

ಬಳಿಕ ತಟ್ಟೆಯೊಂದಕ್ಕೆ ತುಪ್ಪವನ್ನು ಸವರಿ ಮಿಶ್ರಣವನ್ನು ಹಾಕಿ ಕದಡಿಕೊಂಡು, ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು, ಡ್ರೈಫ್ರೂಟ್ಸ್ ಗಳಿಂದ ಅಲಂಕರಿಸಿದರೆ, ರುಚಿಕರವಾದ ಬಿಸ್ಕೆಟ್ ಬರ್ಫಿ ಸವಿಯಲು ಸಿದ್ಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ಮುಂದೆ ಮೆಟ್ರೋದಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ.

Fri Jan 14 , 2022
ಕೊರೋನಾ ವೈರಸ್ ಮೂರನೇ ಅಲೆ ಅಬ್ಬರ ಹೆಚ್ಚುತ್ತಿದ್ದು, ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಬಿಎಂಆರ್ ಸಿಎಲ್ ತಕ್ಷಣದಿಂದ ಜಾರಿಗೆ ಬರುವಂತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದೆ. ಮೆಟ್ರೋದಲ್ಲಿ ಜನಸಂದಣಿ ಕಡಿಮೆ ಮಾಡಲು ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಬಿಎಂಆರ್ ಸಿಎಲ್, ಆಸನ ಸಾಮರ್ಥ್ಯ ಮೀರಿ ಪ್ರಯಾಣಿಸುವುದಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಹೇಳಿದೆ. ರೈಲುಗಳಲ್ಲಿ ಲಭ್ಯವಿರುವ ಆಸನ ಸಾಮರ್ಥ್ಯದ ಆಧಾರದ ಮೇಲೆ ಸೀಮಿತ ಆಕ್ಯುಪೆನ್ಸಿಗೆ ಅನುಮತಿಸಲು ನಿಲ್ದಾಣಗಳಲ್ಲಿ ಪ್ರಯಾಣಿಕರ […]

Advertisement

Wordpress Social Share Plugin powered by Ultimatelysocial