ಇನ್ಮುಂದೆ ಮೆಟ್ರೋದಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ.

ಕೊರೋನಾ ವೈರಸ್ ಮೂರನೇ ಅಲೆ ಅಬ್ಬರ ಹೆಚ್ಚುತ್ತಿದ್ದು, ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಬಿಎಂಆರ್ ಸಿಎಲ್ ತಕ್ಷಣದಿಂದ ಜಾರಿಗೆ ಬರುವಂತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದೆ.

ಮೆಟ್ರೋದಲ್ಲಿ ಜನಸಂದಣಿ ಕಡಿಮೆ ಮಾಡಲು ಮಾರ್ಗಸೂಚಿ ಹೊರಡಿಸಿರುವ ಸರ್ಕಾರ ಬಿಎಂಆರ್ ಸಿಎಲ್, ಆಸನ ಸಾಮರ್ಥ್ಯ ಮೀರಿ ಪ್ರಯಾಣಿಸುವುದಕ್ಕೆ ಯಾವುದೇ ಅನುಮತಿ ಇಲ್ಲ ಎಂದು ಹೇಳಿದೆ.

ರೈಲುಗಳಲ್ಲಿ ಲಭ್ಯವಿರುವ ಆಸನ ಸಾಮರ್ಥ್ಯದ ಆಧಾರದ ಮೇಲೆ ಸೀಮಿತ ಆಕ್ಯುಪೆನ್ಸಿಗೆ ಅನುಮತಿಸಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಪ್ರಯಾಣಿಕರು ಬೋಗಿಗಳು ತುಂಬಿರುವುದನ್ನು ಗಮನಿಸಿದರೆ, ಖಾಲಿ ಕೋಚ್‌ಗಳಿಗೆ ತೆರಳಲು ಅಥವಾ ಮುಂದಿನ ರೈಲಿಗೆ ಹತ್ತಲು ಸಲಹೆ ನೀಡಲಾಗುತ್ತದೆ. ಕರ್ಫ್ಯೂ ಕಾರಣದಿಂದಾಗಿ ವಾರಾಂತ್ಯದಲ್ಲಿ ಮೆಟ್ರೋ ರೈಲುಗಳು 30 ನಿಮಿಷಗಳಿಗೊಂದು ರೈಲು ಚಲಿಸುತ್ತವೆ. ಪ್ರಸ್ತುತ, ಪ್ರತಿ 20 ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Fri Jan 14 , 2022
Please follow and like us:

Advertisement

Wordpress Social Share Plugin powered by Ultimatelysocial