ಕೋಲಾರದ ರೈತ ಸಂಘದಿಂದ ಪ್ರತಿಭಟನೆ

ಪಶು ಆಹಾರದ ಬೆಲೆ ಇಳಿಕೆ ಮಾಡಿ, ಹಾಲಿನ ಬೆಲೆಯನ್ನು ಏರಿಕೆ ಮಾಡಬೇಕು ಹಾಗೂ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಹಾಲಿನ ಬೆಲೆಯನ್ನು 40ರೂಗಳಿಗೆ ನಿಗಧಿ ಮಾಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ಜಾನುವಾರುಗಳ ಸಮೇತ ಕಪ್ಪುಪಟ್ಟಿ ಧರಿಸಿ ಕೋಚಿಮುಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ತಮ್ಮ ಹೊಟ್ಟೆಪಾಡಿಗಾಗಿ ನಗರಗಳತ್ತ ವಲಸೆ ಹೋಗಿದ್ದ ಅನೇಕರು ಇಂದು ಗ್ರಾಮೀಣ ಭಾಗಗಳಿಗೆ ವಾಪಸ್ಸು ಬಂದ ಸಂದರ್ಭದಲ್ಲಿ ಹೈನೋದ್ಯಮವು ಕೈ ಹಿಡಿದಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದ್ದಾರೆ. ಮನವಿ ಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಒಡವೆಗಳನ್ನು ಅಡವಿಟ್ಟು ಹಸುಗಳನ್ನು ಖರೀದಿಸಿ ಸ್ವಾಭಿಮಾನದ ಜೀವನವನ್ನು ನಡೆಸಲು ಆರಂಭಿಸಿದ್ದಾರೆ. ಉತ್ಪಾದನೆ ಹೆಚ್ಚಾಗಿದೆ ಎಂದು ಕಾರಣ ನೀಡಿ 4 ರೂಗಳನ್ನು ಕಡಿತ ಮಾಡಿರುವುದು ಲಕ್ಷಾಂತರ ಕುಟುಂಬಗಳ ಮರಣಶಾಸನ ಬರೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಕಾವೇರುತ್ತಿದೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟು

Wed Jul 29 , 2020
ರಾಜಸ್ಥಾನದ ೧೮ ಶಾಸಕರನ್ನ ಯಾವಾಗ ಅನರ್ಹಗೊಳಿಸಬಹುದು ಎನ್ನುವ ವಿಚಾರ ದಿನೇ ದಿನೇ ಕಾವೇರತೊಡಗಿದೆ ಹಾಗಾಗಿ ರಾಜಕೀಯ ಬಿಕ್ಕಟ್ಟು ಕೋರ್ಟ್ ಮೆಟ್ಟಿಲೇರಿದ್ದರು ಸಹ ಅದರ ವಿಚಾರಣೆಯ ಕುರಿತು ಬೇರೆ ಬೇರೆ ರಿತಿಯಾಗಿ ಚರ್ಚೇಗಲು ಪ್ರಾರಂಭವಾಗಿದೆ. ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪೈಲೆಟ್ ವರ ವಕೀಲರು ನ್ಯಾಯಾಲಯಕ್ಕೆ ಪಕ್ಷದ ಸದಸ್ಯತ್ವವನ್ನು ಬಿಡುತ್ತೇವೆ ಎಂದು ಎಲ್ಲಿಯೂ ಶಾಸಕರು ಹೇಳಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಪ್ಯಾರಾ (೨) (೧) ಎ ಅಡಿಯಲ್ಲಿ ಇದು ಬರುವುದಿಲ್ಲ. ಆದ್ದರಿಂದ, […]

Advertisement

Wordpress Social Share Plugin powered by Ultimatelysocial