V. K. Singh: ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಬೇಕು: ವಿ. ಕೆ. ಸಿಂಗ್

 

ಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಮೂವರು ಸೇನಾ ಅಧಿಕಾರಿಗಳು ಉಗ್ರರ ದಾಳಿಯಲ್ಲಿ ಹುತಾತ್ಮರಾದ ಘಟನೆಗೆ ಕೇಂದ್ರ ಸಚಿವ ವಿ. ಕೆ. ಸಿಂಗ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳನ್ನು ನಿಲ್ಲಿಸಬೇಕೆಂದರೆ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿವೃತ್ತ ಸೇನಾ ಮುಖ್ಯಸ್ಥರೂ ಆಗಿರುವ ವಿ. ಕೆ. ಸಿಂಗ್, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಕರ್ನಲ್ ಮನಪ್ರೀತ್ ಸಿಂಗ್, ಮೇಜರ್ ಆಶೀಶ್ ಧೋನ್ಕರ್ ಹಾಗೂ ಡಿಎಸ್‌ಪಿ ಹುಮಾಯೂನ್ ಭಟ್‌ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಉಗ್ರ ದಾಳಿಯ ಈ ರೀತಿಯ ಕೃತ್ಯಗಳ ಬಗ್ಗೆ ನಾವು ಚಿಂತನೆ ಮಾಡಲೇ ಬೇಕು ಎಂದಿರುವ ವಿ. ಕೆ. ಸಿಂಗ್, ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಶಾಂತ ಆಗುವವರೆಗೆ ನಾವು ಪಾಕಿಸ್ತಾನವನ್ನು ಏಕಾಂಗಿಯಾಗಿ ಇಡಲೇ ಬೇಕಿದೆ. ನಾವು ಅವರ ಮೇಲೆ ಒತ್ತಡ ಹೇರಲೇ ಬೇಕಿದೆ. ನಿಮ್ಮ ಕಡೆಯಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬಾರದೇ ಇದ್ದರೆ ನಾವು ಸಹಜ ದ್ವಿಪಕ್ಷೀಯ ಸಂಬಂಧ ಹೊಂದಿರಲು ಸಾಧ್ಯವಿಲ್ಲ ಅನ್ನೋದನ್ನ ಅವರಿಗೆ ಹೇಳಬೇಕಿದೆ. ಈ ಸನ್ನಿವೇಶವನ್ನು ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ವಿ. ಕೆ. ಸಿಂಗ್ ಹೇಳಿದ್ದಾರೆ.

ಈ ಚಹಾಗಳನ್ನು ಕುಡಿದ್ರೆ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಇರಲ್ಲವಂತೆ..!

ಕೆಲ ದಿನಗಳ ಹಿಂದಷ್ಟೇ ಕಾಶ್ಮೀರ ವಿಚಾರವಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ವಿ. ಕೆ. ಸಿಂಗ್, ಪಾಕ್ ಆಕ್ರಮಿತ ಕಾಶ್ಮೀರವು ತಾನಾಗಿಯೇ ಭಾರತದ ಭಾಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಸಚಿವರ ಈ ಹೇಳಿಕೆ ಹೊರಬಿದ್ದ ಎರಡೇ ದಿನಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಆರ್ಭಟಿಸಿದ್ದು, ಭದ್ರತಾ ಪಡೆಗಳ ಹಿರಿಯ ಅಧಿಕಾರಿಗಳೇ ಹುತಾತ್ಮರಾಗಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ರಸ್ತೆಗಿಳಿದ ಐಟಿ ಉದ್ಯೋಗಿಗಳು

Sat Sep 16 , 2023
  ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಎಪಿ ಕೌಶಲ್ಯ ಅಭಿವೃದ್ಧಿ ಪ್ರಕರಣದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿರುವುದು ಗೊತ್ತೇ ಇದೆ. ಸದ್ಯ ಚಂದ್ರಬಾಬು ರಾಜಮಂಡ್ರಿಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಎಪಿ ಸರ್ಕಾರದ ಪಿತೂರಿಯ ಭಾಗವಾಗಿ ಚಂದ್ರಬಾಬು ಅವರನ್ನು ಅಕ್ರಮವಾಗಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿ ಟಿಡಿಪಿ ಕಾರ್ಯಕರ್ತರು ಆಂಧ್ರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ಹೈದರಾಬಾದ್, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಐಟಿ ಉದ್ಯೋಗಿಗಳು ಪ್ರತಿಭಟನೆಗಿಳಿದಿದ್ದಾರೆ. […]

Advertisement

Wordpress Social Share Plugin powered by Ultimatelysocial