ಮಹಾಮಾತೆ ಜೀಜಾಬಾಯಿ

ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ, ಸಂಸ್ಕಾರ ಕೊಟ್ಟು ತ್ಯಾಗ ಮಾಡಿ ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ ಕಾರ್ಯದಲ್ಲಿ ಅತ್ಯಂತ ಹಿರಿಯದಾದ ಪಾತ್ರ ವಹಿಸಿ ಇಡೀ ಮಾತೃವರ್ಗಕ್ಕೆ ಆದರ್ಶ ಮಾತೆಯಾಗಿ ಮೆರೆದ ವೀರ ಮಹಿಳೆ ಜೀಜಾಬಾಯಿ!
ಜೀಜಾಬಾಯಿ ಅವರು 1598ರ ವರ್ಷದ ಜನವರಿ 12ರಂದು ಜನಿಸಿದರು. ತಂದೆ ಲಖೋಜಿ ರಾವ್ ಜಾಧವ್ ಮತ್ತು ತಾಯಿ ಮಾಳಸಬಾಯಿ. ಬಾಲ್ಯದಲ್ಲಿಯೇ ಜೀಜಾಬಾಯಿ ಅವರು ತಂದೆಯ ಜೊತೆಗೂಡಿ ರಾಜಶಾಸ್ತ್ರ ವಿದ್ಯೆಯ ಬಗ್ಗೆ ಜ್ಞಾನ ಪಡೆದರು. ತಾಯಿಯಿಂದ ಭಕ್ತಿ, ಭಾವ, ಎಲ್ಲಾ ಸಂಸ್ಕಾರಗಳನ್ನು ಕಲಿಯುತ್ತಲೇ ದೊಡ್ಡವಳಾದರು. ಆಕೆಯನ್ನು ಕಂಡರೆ ಎಲ್ಲರಿಗೂ ಅತ್ಯಂತ ಗೌರವ.
ಚಾಣಾಕ್ಷೆ ಸುಂದರಿ ಜೀಜಾಬಾಯಿ ಚಿಕ್ಕಂದಿನಿಂದಲೇ ತಂದೆಯ ಪರಾಕ್ರಮದ ಉದಾಹರಣೆಗಳನ್ನು ಬೆರಗಾಗಿ ಕೇಳುತ್ತಿದ್ದರು. ಬೆಳೆಯುತ್ತಲೇ ಅಸಹಾಯಕತೆ ಮತ್ತು ಅವಿಶ್ವಾಸ ಎಂಬ ರೋಗಗಳನ್ನು ಮನಸ್ಸಿನಿಂದ ಕಿತ್ತೊಗೆಯಲು ಮುಂದಾದರು. ಸಾಹಸಿಯಾಗಿ ಕತ್ತಿವರಸೆಯಲ್ಲಿ ಪರಿಣತಿ ಸಾಧಿಸಿದರು.
ಜೀಜಾಬಾಯಿ 1605ರಲ್ಲಿ ಶಹಾಜಿ ಭೋಸಲೆಯ ಪಟ್ಟದರಸಿಯಾದರು. ಬಹುವರ್ಷ ಮಕ್ಕಳಾಗದಿದ್ದಾಗ ಭವಾನಿ ಮಾತೆಯಲ್ಲಿ “ತೇಜಸ್ವಿ, ಪರಾಕ್ರಮಿ, ಸ್ವರಾಜ್ಯ ಸ್ಥಾಪಿಸಲು ಸಾಮಾರ್ಥ್ಯವುಳ್ಳ ಪುತ್ರನನ್ನು ನನಗೆ ದಯಪಾಲಿಸು” ಎಂದು ಮೊರೆ ಇಟ್ಟರು. 1630 ವರ್ಷದಲ್ಲಿ ಅವರಿಗೆ ಜನಿಸಿದ ಗಂಡು ಮಗುವಿಗೆ ಶಿವಾಜಿ ಎಂದು ಹೆಸರಿಟ್ಟರು.
ಆರಂಭದಿಂದಲೇ ಶಿವಾಜಿಗೆ ಜೀಜಾಬಾಯಿ ಅವರು ವೀರ ಸಾಹಸ ಕಥೆಗಳನ್ನು ಹೇಳುತ್ತಿದ್ದರಲ್ಲದೆ, ಸೀತೆಯ ಅಪಹರಣ ಮಾಡಿದ ದುಷ್ಟ ರಾವಣನನ್ನು ವಧಿಸಿದ ರಾಮನು ಎಷ್ಟು ಪರಾಕ್ರಮಿಯಾಗಿದ್ದನು, ಬಕಾಸುರನನ್ನು ವಧಿಸಿ ದುರ್ಬಲ ಜನರನ್ನು ಮುಕ್ತಗೊಳಿಸುವ ಭೀಮನು ಎಷ್ಟು ಪರಾಕ್ರಮಿಯಾಗಿದ್ದನು ಹೀಗೆ ಪ್ರತಿಯೊಂದು ಕಥೆಯಲ್ಲಿ ಅವರು ಪರಾಕ್ರಮಿ ಪುರುಷನಿಗೆ ಭಗವಂತನ ಸ್ಥಾನವನ್ನು ನೀಡಿದರು. ಅಲ್ಲದೇ ಸ್ವಾತಂತ್ರ್ಯಕ್ಕೆ ಧ್ಯೇಯದ ಸ್ಥಾನವನ್ನೂ ನೀಡಿದರು.
ಜೀಜಾಬಾಯಿಯ ಮಗ ಶಿವಾಜಿ, ತಾಯಿಯ ಪೋಷಣೆ ಹಾಗು ಮಾರ್ಗದರ್ಶನದಲ್ಲಿಯೇ ಬೆಳೆದರು. ಭಾರತದ ಗಡಿಯಾಚೆಯಿಂದ ನುಗ್ಗಿದ ಕಟುಕ ದರೋಡೆಕೋರರನ್ನು ಜೀಜಾಬಾಯಿ ನೋಡಿದ್ದರು. ಇಲ್ಲಿ ರಾಜ್ಯ ಸ್ಥಾಪಿಸಿ, ಇಲ್ಲಿಯ ಜನತೆಯನ್ನು ಹಿಂಡುತ್ತಿದ್ದಂತಹ, ಇಲ್ಲಿಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಂತಹ ವಿದೇಶಿ ದಾಳಿಕಾರರ ಅಡಿಯಲ್ಲಿಯೇ ಅವಳ ತಂದೆ ಹಾಗು ಅವಳ ಗಂಡ ಊಳಿಗ ಮಾಡುತ್ತಿದ್ದರು. ನಾಡ ಜನತೆಯ ಮೇಲೆ ನಡೆಯುವ ದಬ್ಬಾಳಿಕೆಯನ್ನು ಪ್ರತ್ಯಕ್ಷವಾಗಿ ಕಂಡ ಜೀಜಾಬಾಯಿ ಈ ನಾಡವರ ರಾಜ್ಯಕ್ಕಾಗಿ, ಭಾರತೀಯರ ಸ್ವರಾಜಕ್ಕಾಗಿ ತನ್ನ ಮಗ ಶಿವಾಜಿಗೆ ಪ್ರೇರಣೆ ಇತ್ತಳು. ಶಿವಾಜಿಯ ಜನ್ಮದೊಂದಿಗೆ ಹಿಂದವೀ ಸ್ವರಾಜ್ಯದ ಅಡಿಪಾಯ ಹಾಕಿದಂತಾಗಿತ್ತು.
ಶಿವಾಜಿಯ ಮನಸ್ಸಿನಲ್ಲಿ ಕರ್ತೃತ್ವದ ಕಿಡಿಯನ್ನು ಹಚ್ಚಿದ ಜೀಜಾಬಾಯಿ ಮಗನಿಗೆ ರಾಜನೀತಿಯನ್ನು ಕೂಡ ಕಲಿಸಿದರು. ಸಮಾನ ನ್ಯಾಯವನ್ನು ನೀಡುವ ವೃತ್ತಿ ಹಾಗೂ ಅನ್ಯಾಯ ಮಾಡುವವರಿಗೆ ಕಠೋರ ಶಿಕ್ಷೆ ನೀಡುವ ಧೈರ್ಯವನ್ನು ನೀಡಿದರು. ಶಿವಾಜಿಯ ಶಸ್ತ್ರಾಸ್ತ್ರಗಳ ಪ್ರತಿಕ್ಷಣದತ್ತ ಸ್ವತಃ ಸೂಕ್ಷ್ಮ ಗಮನ ನೀಡಿದರು. ಶಹಾಜಿರಾಜರ ಬಂಧನ ಹಾಗೂ ಬಂಧಮುಕ್ತಿ, ಅಫ್ಜಲ್ ಖಾನನ ತೊಂದರೆ, ಆಗ್ರಾದಿಂದ ಮುಕ್ತಿ ಹೀಗೆ ಅನೇಕ ಪ್ರಸಂಗಗಳಲ್ಲಿ ಶಿವಾಜಿಗೆ ಜೀಜಾಬಾಯಿಯವರ ಮಾರ್ಗದರ್ಶನ ಲಭಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿ

Fri Jan 13 , 2023
ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ ಸಾಧನೆ ಮಾಡಿದವರಾಗಿದ್ದಾರೆ. ವೀರಪ್ಪ ಮೊಯ್ಲಿಯವರು 1940ರ ಜನವರಿ 12ರಂದು ಜನಿಸಿದರು. ತಾಯಿ ಪೂವಮ್ಮ ಮತ್ತು ತಂದೆ ತಮ್ಮಯ್ಯ ಮೊಯ್ಲಿ. ಮೊಯ್ಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ ನಂತರ ಭಾರತೀಯ ಜೀವವಿಮಾ […]

Advertisement

Wordpress Social Share Plugin powered by Ultimatelysocial