ಶ್ರೀ ಬಸವೇಶ್ವರ ದೇವಸ್ಥಾನದ ವೈಭವದ ಜಾತ್ರಾ ಮಹೋತ್ಸವ..!

ಶ್ರೀ ಬಸವೇಶ್ವರ ದೇವಸ್ಥಾನ, ಬಸವನಮೂಲೆ ಕುಲ್ಕುಂದ ಸುಬ್ರಹ್ಮಣ್ಯ ಇದರ ಜಾತ್ರಾ ಮಹೋತ್ಸವವು  ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವೈಭವದಿಂದ  ಎ.19 ಮತ್ತು ಎ.20 ರಂದು ನಡೆಯಿತು. ಎ.19 ರ ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು.

ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಾಯಂಕಾಲ ಸಂಜೆ ದೇವಸ್ಥಾನದಲ್ಲಿ ಪ್ರಾಸಾದ ಶುದ್ಧಿ ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹವಾಚನ ನಡೆಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಏ.20 ರ ಬೆಳಗ್ಗೆ ಗಣಪತಿ ಹವನ, ಕಲಶ ಪೂಜೆ, ಮಹಾಪೂಜೆ ನಡೆದು ಪೂರ್ವಾಹ್ನ ಶತರುದ್ರಾಭಿಷೇಕ ನಡೆಯಿತು. ಪರಿವಾರ ದೇವರುಗಳಿಗೆ ಕಲಶತಂಬಿಲ ಸೇವೆ, ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ ದೀಪಾರಾಧನೆ, ತಾಯಂಬಕ, ರಂಗಪೂಜೆ ರಾತ್ರಿ ಶ್ರೀ ಭೂತ ಬಲಿ ನಡೆದು ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಿಸಲಾಯಿತು. ಬಳಿಕ ಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಬೈಲುವಾರು ಸಮಿತಿಯವರು ಕಾರ್ಯಕ್ರಮ. ಯಶಸ್ವಿಗೆ ಸಹಕರಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನ ಯಡವಟ್ಟು..!

Sat Apr 22 , 2023
ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯನ ಯಡವಟ್ಟು,  ದುರ್ವರ್ತನೆ ತೋರಿದ ವೈದ್ಯ, ರೋಗಿ ತನ್ನ ಅಳಿಲನ್ನು ತೋಡಿಕೊಂಡರು ಕೃಪೆ ತೋರದ ವೈದ್ಯ, ಇದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಹೀನಾಯ ಘಟನೆ. ರೋಗಿಯ ಜೀವದ ಜೊತೆ ಆಟವಾಡಿದ ವೈದ್ಯ,  ಖಾಸಗಿಯಾಗಿ ತನ್ನ ಹೆಂಡತಿಯನ್ನು ಆಪರೇಷನ್ ಥೇಟರ್ ಒಳಗಡೆ ಪ್ರವೇಶ ಮಾಡಿಕೊಂಡ ವೈದ್ಯ ಅಭಿನಂದನ ಡೋರ್ಲೆ, ಬುಲ್ ಕೊಡದೆ ಆಪರೇಷನ್ ಮಾಡಿದ ವೈದ್ಯ, ರೋಗಿಯು ಕುಡಚಿ […]

Advertisement

Wordpress Social Share Plugin powered by Ultimatelysocial