ತುಳಸಿ ಬಹಳ ದೊಡ್ಡ ಸಂಕಟದಲ್ಲಿ ಸಿಕ್ಕಿ ಬಿದ್ದಿದ್ದಾಳೆ.

ತುಳಸಿ ಬಹಳ ದೊಡ್ಡ ಸಂಕಟದಲ್ಲಿ ಸಿಕ್ಕಿ ಬಿದ್ದಿದ್ದಾಳೆ. ಆಕೆಯ ಮಾವ ಹಬ್ಬಗಳಿಗೆ ಕೊಟ್ಟ ಹಣವನ್ನು, ಕೂಡಿಟ್ಟ ಹಣವನ್ನು ಮಗಳಿಗೆ ನೀಡಿದ್ದಾಳೆ. ಅತ್ತ ಗೀಸರ್ ರಿಪೇರಿ ಮಾಡುವಾತನಿಗೆ ಸಿರಿ ಹಣ ಕೊಡ್ತಾಳೆ. ಗೀಜರ್ ರಿಪೇರಿ ಮಾಡಿ ಆ ವ್ಯಕ್ತಿ ಹೊರಡುತ್ತಾರೆ. ಇದನು ನೋಡಿದ ದತ್ತ ಇನ್ನೇನಾದರೂ ಗೀಜರ್ ಕೆಟ್ಟು ಹೋದರೆ ನಾನು ನಿಮ್ಮ ಮನೆಗೆ ಗೀಜರ್ ತೆಗೆದುಕೊಂಡು ಬಂದು ಗಲಾಟೆ ಮಾಡಿ ಬಿಡುತ್ತೇನೆ ಎಂದು ಹೇಳುತ್ತಾರೆ.

ಅಷ್ಟರಲ್ಲಿ ಅಲ್ಲಿಗೆ ಬಂದ ತುಳಸಿ ಗೀಜರ್ ರಿಪೇರಿ ಮಾಡುವಾತನನ್ನು ನಿಲ್ಲಿಸಿ ಗೀಜರ್ ರಿಪೇರಿ ಮಾಡಿದ ಹಣ ತೆಗೆದುಕೋ ಎಂದು ಹೇಳಿದಾಗ ಬೇಡಮ್ಮಾ ಒಳಗೆ ಹಣ ಕೊಟ್ಟರು ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಗೆ ಆಶ್ಚರ್ಯ ಆಗುತ್ತದೆ.

ಆ ವೇಳೆ ಅಲ್ಲಿಗೆ ಸಿರಿ ಬಂದು ತಾನು ಹಣ ಕೊಟ್ಟೆ ಎಂದು ಹೇಳಿದಾಗ ತುಳಸಿಗೆ ಆಕೆಗೆ ಹಣ ಕೊಡಲು ಬಂದಾಗ ಬೇಸರ ಪಟ್ಟುಕೊಂಡ ಸಿರಿ ನಾನು ಈ ಮನೆಯವಳು ತಾನೇ ನೀವು ನನ್ನ ಹಾಗೆ ನೋಡುತ್ತಾ ಇಲ್ಲ ಎಂದು ಹೇಳುತ್ತಾಳೆ. ಬಳಿಕ ಇದನ್ನು ಕೇಳಿಸಿಕೊಂಡ ತುಳಸಿ ಹಾಗೇನೂ ಇಲ್ಲ ಎಂದೆಲ್ಲ ಹೇಳುತ್ತ ಸಿರಿಯನ್ನು ಸಮಾಧಾನ ಪಡಿಸುತ್ತಾಳೆ.

ಒಳಗೆ ನಾಟಕ ಪ್ರಾಕ್ಟೀಸ್ ನಡೆಯುತ್ತಾ ಇರುತ್ತದೆ. ಆದರೆ ದತ್ತನಿಗೆ ಡೈಲಾಗ್ ಮರೆತು ಹೋಗಿರುತ್ತದೆ. ಡೈಲಾಗ್ ಅನ್ನು ನೆನಪು ಮಾಡಿಕೊಂಡು ಹೇಳುತ್ತ ಇರುತ್ತಾನೆ. ಅಷ್ಟರಲ್ಲಿ ದೇವಾಲಯಕ್ಕೆ ಹೋಗಲು ರೆಡಿಯಾಗಿ ಎಲ್ಲರೂ ಬರುತ್ತಾರೆ. ಶೇಷ ತಾನು ದೇವಾಲಯಕ್ಕೆ ಬರುವುದಿಲ್ಲ ಎಂದು ತನ್ನ ಮನೆಗೆ ಹೋಗುತ್ತಾನೆ. ದತ್ತ ಹಾಗೂ ಅವರ ಮನೆಯವರೆಲ್ಲ ದೇವರ ದರ್ಶನ ಮಾಡಲು ಹೋಗುತ್ತಾರೆ .

ದೇವಾಲಯಕ್ಕೆ ಹೊರಟ ಮನೆ ಮಂದಿ

ಆದರೆ ಅಲ್ಲಿ ಕ್ಯೂ ಇದ್ದ ಕಾರಣ ದೇವರ ದರ್ಶನ ಮಾಡಲು ಕಷ್ಟ ಪಡಬೇಕಾಗುತ್ತದೆ. ಶಿವರಾತ್ರಿ ಆದ ಕಾರಣ ಜನರು ಹೆಚ್ಚಾಗಿ ದೇವಾಲಯಕ್ಕೆ ಆಗಮಿಸುತ್ತಾ ಇರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಶಾರ್ವರಿ ಹಾಗೂ ಅಭಿ, ನಿಧಿ ಬರುತ್ತಾರೆ . ಪೂರ್ಣಿಮಾ ತಾನು ಮಾವನ ಜೊತೆ ಬರುವುದಾಗಿ ಹೇಳಿ ಸುಮ್ಮನೆ ಆಗಿದ್ದಳು. ಇತ್ತ ದೇವಾಲಯಕ್ಕೆ ನಾವು ಮಾತ್ರ ಹೋಗಬೇಕು ಎನ್ನುವ ದೃಷ್ಟಿಯಲ್ಲಿ ಶಾರ್ವರಿ ಆಕೆಯ ಕೆಲಸಗಾರರಿಗೆ ಹೇಳುತ್ತ ಇರುತ್ತಾಳೆ.

ದೇವಾಲಯಕ್ಕೆ ಬಂದ ಮಾಧವನ ಕುಟುಂಬ

ಆತ ದೇವಾಲಯಕ್ಕೆ ಹೋಗಿ ಹೊರಗೆ ಬಂದು ಎಲ್ಲವೂ ರೆಡಿ ಆಗಿದೆ ಎಂದು ಹೇಳುತ್ತಾನೆಇ. ದನ್ನು ಕೇಳಿದ ಶಾರ್ವರಿ ಅಲ್ಲಿಂದ ಒಳಗೆ ಹೋಗುತ್ತಾಳೆ. ಆ ವೇಳೆ ಸಮರ್ಥ್ ನೋಡಿದ ಅಭಿ ಹಂಗಿಸಿ ಮಾತನಾಡುತ್ತಾನೆ. ಬಳಿಕ ಅಲ್ಲಿಂದ ಹೋಗುತ್ತಾರೆ. ಅಷ್ಟರಲ್ಲಿ ಜನರ ತಾಳ್ಮೆ ಮಿತಿ ಮೀರಿತ್ತು. ದತ್ತನಿಗೆ ಕೂಡ ಮಂಡಿ ನೋವು ಬರುತ್ತಾ ಇತ್ತು. ದತ್ತ ಜೋರಾಗಿ ಕಿರುಚುತ್ತಾ ಇರುವುದು ಮಾಧವನಿಗೆ ಕೇಳಿಸಿಬಿಡುತ್ತದೆ. ಮಾಧವ ಮೆತ್ತಗೆ ಯಾಕೆ ಏನಾಯಿತು ಎಂದೆಲ್ಲ ವಿಚಾರಣೆ ಮಾಡಿದಾಗ ಸತ್ಯ ತಿಳಿಯುತ್ತದೆ. ಬಳಿಕ ಎಲ್ಲರೂ ಜೊತೆಯಾಗಿ ದೇವರ ದರ್ಶನ ಮಾಡೋಣ ಎಂದು ಹೇಳುತ್ತಾನೆ ..

ಎಲ್ಲರನ್ನೂ ದೇವಾಲಯದ ಒಳಗೆ ನೋಡಿ ಕಕ್ಕಾಬಿಕ್ಕಿ ಆದ ಶಾರ್ವರಿ

ಎಲ್ಲರೂ ಒಳಗೆ ಬರುವುದನ್ನು ನೋಡಿದ ಶಾರ್ವರಿ ಅವಕ್ಕಾಗಿ ನಿಂತು ಬಿಡುತ್ತಾಳೆ. ಇದನ್ನು ನೋಡಿದ ಮಾಧವ ಮಾತ್ರ ಏನೂ ತಲೆ ಕೆಡಿಸಿಕೊಳ್ಳದೆ ಎಲ್ಲರೂ ಜೊತೆಯಾಗಿ ಪೂಜೆ ಮಾಡಿಸುತ್ತಾರೆ. ಇನ್ನು ತುಳಸಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಬರುತ್ತೇನೆ ಎಂದು ಹೇಳುತ್ತಾಳೆ ಆಗ ದತ್ತ ನನ್ನದು ಎರಡು ಸುತ್ತು ನೀನೇ ಹಾಕಿ ಬಿಡು ತುಳಸಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ತುಳಸಿ ಯಾಕೆ ಮಾವ ಮಂಡಿ ನೋವು ಜಾಸ್ತಿ ಇದೆಯಾ ಎಂದು ಕೇಳುತ್ತಾಳೆ. ಆದರೆ ದತ್ತ ಏನು ಆಗಿಲ್ಲ ಎಂಬಂತೆ ಇರುತ್ತಾನೆ . ತುಳಸಿ ಪ್ರದಕ್ಷಿಣೆ ಹಾಕುತ್ತ ಇರುವ ವೇಳೆ ಮಾಧವ ಸಿಗುತ್ತಾನೆ. ಆಕೆಯ ಬಳಿ ಮಾತನಾಡುತ್ತಾ ಇರುವಾಗ ಶಾರ್ವರಿ ಅದನ್ನು ನೋಡುತ್ತಾಳೆ. ಅದನ್ನು ನೋಡಿದ ಶಾರ್ವರಿಗೆ ಬಾವ ಯಾರ ಜೊತೆ ಮಾತನಾಡುತ್ತಾ ಇರಬಹುದು ಎನ್ನುವುದೇ ದೊಡ್ಡ ಗೊಂದಲ ಆಗುತ್ತದೆ. ಪೂರ್ಣಿಮಾ ಜೊತೆ ಕೇಳಿದಾಗ ಅವರೇ ಮಾವ ವಾಪಸ್ ಮನೆಗೆ ಬರುವ ಹಾಗೆ ಮಾಡಿರುವುದು ಎಂದು ಹೇಳುತ್ತಾಳೆ. ಶಾರ್ವರಿ ತುಳಸಿ ಮುಖವನ್ನು ನೋಡಲು ಟ್ರೈ ಮಾಡುತ್ತ ಇರುತ್ತಾಳೆ. ಇನ್ನು ಅಭಿ ಮಾತ್ರ ಸಮರ್ಥ್ ನೋಡಿ ವ್ಯಂಗ್ಯವಾಗಿ ಮಾತನಾಡುತ್ತಾ ಇರುತ್ತಾನೆ. ಇದನ್ನು ನೋಡಿದ ಸಮರ್ಥ್ ಅಭಿಗೆ ತಕ್ಕ ಉತ್ತರ ನೀಡುತ್ತಾನೆ. ಮುಂದೇನು ಕಾದು ನೀಡಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್. ಎಸ್. ಮುಕ್ತಾಯಕ್ಕ ಕನ್ನಡದ ಪ್ರಸಿದ್ಧ ಕವಯಿತ್ರಿ.

Fri Feb 17 , 2023
ಎಚ್. ಎಸ್. ಮುಕ್ತಾಯಕ್ಕ ಕನ್ನಡದ ಪ್ರಸಿದ್ಧ ಕವಯಿತ್ರಿ. ಕನ್ನಡದಲ್ಲಿ ಅವರ ಗಜಲುಗಳ ಕೊಡುಗೆ ಮಹತ್ವದ್ದು.ಮುಕ್ತಾಯಕ್ಕ ಕರ್ನಾಟಕದ ರಾಯಚೂರು ಜಿಲ್ಲೆಯವರು. ಇವರು ಕನ್ನಡದ ಮಹಾನ್ ಸಾಹಿತಿಗಳಾಗಿದ್ದ ಶಾಂತರಸ ಅವರ ಪುತ್ರಿ.ಮುಕ್ತಾಯಕ್ಕ ಅವರು ರಾಯಚೂರಿನ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಒಂದೆಡೆ ಶಾಂತರಸರು ಹೀಗೆ ಹೇಳುತ್ತಾರೆ. “ಎಲ್ಲ ಕನ್ನಡ ಕವಿಗಳಂತೆ ನನ್ನ ಮಗಳು ಎಚ್. ಎಸ್. ಮುಕ್ತಾಯಕ್ಕನೂ ಪ್ರೇಮಗೀತೆಗಳನ್ನು ಬರೆದು ಗಝಲ್ ಎಂದು ಪ್ರಕಟಿಸುತ್ತಿದ್ದಳು. ಆಕೆಗೆ ಅದು ಸರಿಯಲ್ಲವೆಂದು […]

Advertisement

Wordpress Social Share Plugin powered by Ultimatelysocial