20 ಅಡಿ ಕಂದಕಕ್ಕೆ ಉರುಳಿ ಬಿದ್ದ ಮಗು ಸಹಿತ ಐವರಿದ್ದ ಕಾರು

20 ಅಡಿ ಕಂದಕಕ್ಕೆ ಉರುಳಿ ಬಿದ್ದ ಮಗು ಸಹಿತ ಐವರಿದ್ದ ಕಾರು

ಪುತ್ತೂರು : ಬೆಳ್ಳಂಬೆಳಿಗೆ ಚೆಲ್ಯಡ್ಕದಲ್ಲಿ 20 ಅಡಿ ಕಂದಕಕ್ಕೆ ಉರುಳಿ ಬಿದ್ದ ಮಗು ಸಹಿತ ಐವರಿದ್ದ ಕಾರು.ಐವರು ಪ್ರಯಾಣಿಸುತ್ತಿದ್ದ ಕಾರೊಂದು ಪುತ್ತೂರು – ಪಾಣಾಜೆ ರಸ್ತೆಯ ಚೆಲ್ಯಡ್ಕ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಡಿ.

16ರ ಬೆಳಿಗ್ಗೆ ನಡೆದಿದೆ. ಅಪಾಯಕಾರಿ ಸ್ಥಿತಿಯಲ್ಲಿ ಕಾರು ಉರುಳಿ ಬಿದ್ದಿದ್ದರು ಪವಾಡ ಸದೃಶ್ಯ ವಾಗಿ ಐವರು ಯಾವುದೇ ಪ್ರಾಣಾಪಾಯ ಗಳಿಲ್ಲದ್ದೆ ಪಾರಾಗಿ ದ್ದಾರೆ.

ಬೆಟ್ಟಂಪಾಡಿ ಬಳಿಯ ಡೆಮ್ಮಂಗಾರದಿಂದ ಪುತ್ತೂರು ಕಡೆಗೆ ಹೊರಟಿದ್ದ ಆಲ್ಟೋ-800 ಕಾರು ಉಪ್ಪಳಿಗೆ ಸಮೀಪದ ಚೆಲ್ಯಡ್ಕ ಎಂಬಲ್ಲಿ ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ.

ಉಪ್ಪಳಿಗೆಯ ಚೆಲ್ಯಡ್ಕ ತಿರುವಿನ ಬಳಿ ಚಾಲಕನ ಹತೋಟಿ ಕಳಕೊಂಡು ಅವಘಡ ಸಂಭವಿಸಿದೆ. ಕಾರಿನಲ್ಲಿ ಮಗು ಸಹಿತ ಐವರು ಪ್ರಯಾಣಿಸುತ್ತಿದ್ದರು. ಕಾರು ಕಂದಕಕ್ಕೆ ಉರುಳಿ ಬಿದ್ದ ವೇಳೆ ಪಲ್ಟಿಯಾಗಿತ್ತು.

ಅಪಘಾತದ ತೀವ್ರತೆಯನ್ನು ಗಮನಿಸಿದಾಗ ಭಾರಿ ಅನಾಹುತ ಸಂಭವಿಸಿದಂತೆ ಕಂಡು ಬರುತ್ತಿತ್ತಾದರೂ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸದೆ ಎಲ್ಲರು ಸುರಕ್ಷಿತವಾಗಿ ಮೇಲೆ ಬಂದಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕ‌ನ ಕೊಲೆ

Thu Dec 16 , 2021
ಮೈಸೂರು: ತಾಲ್ಲೂಕಿನ ರಮ್ಮನಹಳ್ಳಿ ಗ್ರಾಮದ ನಿವಾಸಿ ಅರ್ಜುನ (24) ಅವರನ್ನು ಚಾಕುವಿನಿಂದ ಇರಿದು ಹಾಗೂ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ‌ ಮಾಡಲಾಗಿದೆ.ತೀವ್ರವಾಗಿ ಗಾಯಗೊಂಡ ಇವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು. ಬುಧವಾರ ತಡರಾತ್ರಿ ಇವರನ್ನು ಫೋನ್ ಮಾಡಿ ಗ್ರಾಮದ ಹೊರ ವಲಯಕ್ಕೆ ಕರೆಸಿಕೊಂಡ ಕೆಲವರು ಚಾಕುವಿನಿಂದ ಇರಿದು, ಅಟ್ಟಾಡಿಸಿದ್ದಾರೆ.ನಂತರ ಹಳ್ಳಕ್ಕೆ ಬಿದ್ದ ಇವರ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. Please follow […]

Advertisement

Wordpress Social Share Plugin powered by Ultimatelysocial