ಬೀದಿ ನಾಯಿ ಜಗಳಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅಮಾನತು !

ಬೀದಿ ನಾಯಿ ಜಗಳಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅಮಾನತು !

ಬೆಂಗಳೂರು, ಡಿ. 23: ಬೀದಿ ನಾಯಿ ಜಗಳದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಸೇವೆಯಿಂದ ವಜಾ ಆಗಿದ್ದಾರೆ. ಬೀದಿ ನಾಯಿಗಳಿಗೆ ಅನ್ನ ಹಾಕುವುದನ್ನು ಪ್ರಶ್ನಿಸಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಮೃತಹಳ್ಳಿ ಪೊಲೀಸ್ ಠಾಣೆ ಎಎಸ್‌ಐ ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ.

 

ಏನಿದು ಘಟನೆ: ಯಲಹಂಕ ನ್ಯೂಟೌನ್ ಪೊಲೀಸ್ ಕ್ವಾಟ್ರಸ್‌ನಲ್ಲಿರುವ ಬಿ.ಎಚ್. ಚಂದ್ರಶೇಖರ್ ಯಲಹಂಕ ನ್ಯೂ ಟೌನ್ ಸಮೀಪ ನಿಂತಿದ್ದರು. ಈ ವೇಳೆ ಮಹಿಳೆಯೊಬ್ಬಳು ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಬೀದಿ ನಾಯಿಗಳಿಗೆ ಊಟ ಹಾಕುವುದನ್ನು ಪ್ರಶ್ನಿಸಿದ ಚಂದ್ರಶೇಖರ್ ಅವಾಚ್ಯ ಪದಗಳಿಂದ ಮಹಿಳೆಯನ್ನು ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನು ಗಮನಿಸಿದ ಸಾರ್ವಜನಿಕರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದೇ ವಿಚಾರವಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ದೂರನ್ನಾಧರಿಸಿ ಮುಖ್ಯ ಪೇದೆ ವಿರುದ್ಧ ಬೆದರಿಕೆ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಮಹಿಳೆ ನೀಡಿರುವ ದೂರಿನ ಪ್ರಕಾರ, ಆಕೆ ಮನೆಯಿಂದ ಹೊರ ಬಂದು ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದರು. ಸಮೀಪದಲ್ಲಿ ಚಂದ್ರಶೇಖರ್ ನಿಂತಿದ್ದರು. ರಾತ್ರಿಯಾಗಿದ್ದ ರಿಂದ ಮೊಬೈಲ್ ಟಾರ್ಚ್ ಹಾಕಿ ಆ ವ್ಯಕ್ತಿ ಮಹಿಳೆಯ ದೇಹದ ಮೇಲೆ ಬಿಟ್ಟಿದ್ದಾನೆ. ಅಲ್ಲದೇ ಬೀದಿ ನಾಯಿಗಳಿಗೆ ಊಟ ಹಾಕುವುದರ ಬಗ್ಗೆ ಚಂದ್ರಶೇಖರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಾನು ಪೊಲೀಸ್ ಆಗಿದ್ದು, ನನ್ನನ್ನು ನೀನು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಇದೇ ವೇಳೆ ಸಮೀಪ ಬಂದ ವ್ಯಕ್ತಿಗೆ ಪೊಲೀಸ್ ವರ್ತನೆ ರೆಕಾರ್ಡ್ ಮಾಡಿಕೊಳ್ಳುವಂತೆ ಮಹಿಳೆ ಸೂಚಿಸಿದ್ದು, ಅದರಂತೆ ರೆಕಾರ್ಡ್ ಮಾಡಿಕೊಂಡಿದ್ದಾಗಿ ವಿವರಿಸಲಾಗಿದೆ. ವಿಡಿಯೋ ಮಾಡಿಕೊಂಡ ಬಳಿಕ ಅದನ್ನು ಡಿಲೀಟ್ ಮಡುವಂತೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಪರಿ ಪರಿ ಬೇಡಿಕೊಂಡಿದ್ದಾರೆ.

ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಘಟನೆ ಬಗ್ಗೆ ವಿವರಿಸಿದ್ದು, ಇದು ವೈರಲ್ ಆಗುತ್ತಿದ್ದಂತೆ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. ನಾಯಿಗಳಿಗೆ ಊಟ ಹಾಕಿದ್ದನ್ನು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಚಾರದಲ್ಲಿ ಪೊಲೀಸ್ ಅಮಾನತಿಗೆ ಒಳಗಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೂದಲ ಬೆಳವಣಿಗೆಗೆ ಸಹಕಾರಿ ಈ ಯೋಗ

Thu Dec 23 , 2021
ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ. ಇಲ್ಲವಾದರೆ ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡುತ್ತದೆ. ಹಾಗಾಗಿ ನಿಮ್ಮ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಬಲಯಂ ಯೋಗವನ್ನು ಮಾಡಿ. ಅದನ್ನು ಮಾಡುವ ವಿಧಾನ ಇಲ್ಲಿದೆ. ಬಲಯಂ ಯೋಗವು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಮತ್ತು ಬೋಳು ತಲೆಯ ಸಮಸ್ಯೆಯನ್ನು ತಪ್ಪಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಈ ಯೋಗ ಮಾಡಲು ಮೊದಲಿಗೆ ಸೊಂಟವನ್ನು ನೇರವಾಗಿ ಇರಿಸಿ ನಂತರ ಎರಡೂ ಕೈಗಳನ್ನೂ […]

Advertisement

Wordpress Social Share Plugin powered by Ultimatelysocial