ಗೂಗಲ್‌ ಅನ್ನು ಹಿಂದಿಕ್ಕಿ ಟಾಪ್‌ 1 ಕ್ಕೆ ಏರಿದ ಟಿಕ್‌ಟಾಕ್‌!

ಸ್ಯಾನ್ ಫ್ರಾನ್ಸಿಸ್ಕೋ, ಡಿಸೆಂಬರ್‌ 26: ಶಾಟ್‌ ವಿಡಿಯೋ ಮೂಲಕ ಪ್ರಸಿದ್ಧವಾದ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಟೆಕ್, ಗೂಗಲ್‌ ಅನ್ನು ಹಿಂದಿಕ್ಕಿ ವರ್ಷದ ಅತ್ಯಂತ ಜನಪ್ರಿಯ ವೆಬ್‌ಸೈಟ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಐಟಿ ಭದ್ರತಾ ಕಂಪನಿ ಕ್ಲೌಡ್‌ಫ್ಲೇರ್‌ನ ವರದಿಯ ಪ್ರಕಾರ, ಈ ವೈರಲ್ ವಿಡಿಯೋ ಅಪ್ಲಿಕೇಶನ್ ಯುಎಸ್ ಮೂಲದ ಸರ್ಚ್ ಇಂಜಿನ್‌ಗಿಂತ ಹೆಚ್ಚು ಜನಪ್ರಿಯವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ವರ್ಷದ ಫೆಬ್ರವರಿ, ಮಾರ್ಚ್ ಮತ್ತು ಜೂನ್‌ನಲ್ಲಿ ಗೂಗಲ್‌ ಅನ್ನು ಅಗ್ರ ಸ್ಥಾನದಿಂದ ಕೆಳಕ್ಕೆ ಇಳಿಸಿರುವ ಟಿಕ್‌ಟಾಕ್‌, ಆಗಸ್ಟ್‌ನಿಂದ ಮೊದಲ ಸ್ಥಾನದಲ್ಲಿದೆ ಎಂದು ಶ್ರೇಯಾಂಕಗಳು ತೋರಿಸುತ್ತವೆ. 2020 ರಲ್ಲಿ, ಗೂಗಲ್ ಮೊದಲ ಸ್ಥಾನದಲ್ಲಿತ್ತು ಟಿಕ್‌ಟಾಕ್, ಅಮೆಜಾನ್, ಆಪಲ್, ಫೇಸ್‌ಬುಕ್, ಮೈಕ್ರೋಸಾಫ್ಟ್ ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ ಹಲವಾರು ಇತರ ಸೈಟ್‌ಗಳು ಟಾಪ್‌ 10 ಪಟ್ಟಿಯಲ್ಲಿ ಇತ್ತು. ಟಿಕ್‌ಟಾಕ್‌ 7 ನೇ ಸ್ಥಾನದಲ್ಲಿ ಇತ್ತು. ಕಳೆದ ಬಾರಿ 9 ನೇ ಸ್ಥಾನದಲ್ಲಿದ್ದ ಫೇಸ್‌ಬುಕ್ ಒಡೆತನದ ಇನ್‌ಸ್ಟಾ‌ಗ್ರಾಂ ಈ ಬಾರಿ ಟಾಪ್ 10 ಪಟ್ಟಿಯಿಂದ ಹೊರಕ್ಕೆ ತಳಲ್ಪಟ್ಟಿದೆ.

ಚೀನಾ ಮೂಲದ ಬೈಟ್‌ಡಾನ್ಸ್ ಒಡೆತನದಲ್ಲಿರುವ ಸಾಮಾಜಿಕ ನೆಟ್‌ವರ್ಕ್ ಈಗ ಪ್ರಪಂಚದಾದ್ಯಂತ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಹಾಗೆಯೇ ಬಳಕೆದಾರರ ಸಂಖ್ಯೆಯು ಬೆಳೆಯುತ್ತಲೇ ಇದೆ. ಆದರೆ ಭಾರತ ಹಾಗೂ ಚೀನಾ ನಡುವಿನ ಗಡಿ ಉದ್ವಿಗ್ನತೆಯ ಮಧ್ಯೆ ಜೂನ್ 2020 ರಲ್ಲಿ, ಭಾರತ ಸರ್ಕಾರವು ಜನಪ್ರಿಯ ವಿಡಿಯೋ ಆಪ್‌ ಟಿಕ್‌ಟಾಕ್‌ ಅನ್ನು ನಿಷೇಧ ಮಾಡಿದೆ.

ಟಿಕ್‌ಟಾಕ್‌ ಮೊದಲ ಸ್ಥಾನಕ್ಕೆ ಏರಲು ಕಾರಣವೇನು?ಇನ್ನು ವರದಿಗಳ ಪ್ರಕಾರ ಟಿಕ್‌ಟಾಕ್‌ನ ಜನಪ್ರಿಯತೆ ಹೆಚ್ಚಳಕ್ಕೆ ಕೊರೊನಾ ವೈರಸ್‌ ಸಾಂಕ್ರಾಮಿಕ ಕೂಡಾ ಒಂದು ಕಾರಣವಾಗಿದೆ. ಕೋವಿಡ್‌ ಹಿನ್ನೆಲೆ ಲಾಕ್‌ಡೌನ್‌ ಆದ ಸಂದರ್ಭದಲ್ಲಿ ಜನರು ಮನೆಯಲ್ಲೇ ಕುಳಿತು ಅಧಿಕವಾಗಿ ಟಿಕ್‌ಟಾಕ್‌ ಅನ್ನು ಬಳಿಸಿದ್ದಾರೆ. ಈ ಮೂಲಕ ಮನರಂಜನೆ ಪಡೆದಿದ್ದಾರೆ ಎಂದು ವರದಿಯು ಹೇಳಿದೆ.

ಟಾಪ್‌ 10: ಹೆಚ್ಚು ಜನಪ್ರಿಯ ವೆಬ್‌ಸೈಟ್‌ಗಳು

ಟಿಕ್‌ಟಾಕ್‌.ಕಾಮ್‌ ಮೊದಲ ಸ್ಥಾನದಲ್ಲಿ ಇದೆ. ಕಳೆದ ಬಾರಿ ಮೊದಲ ಸ್ಥಾನದಲ್ಲಿ ಇದ್ದ ಗೂಗಲ್‌ ಈ ಬಾರಿ ಎರಡನೇ ಸ್ಥಾನದಲ್ಲಿ ಇದೆ. ಫೇಸ್‌ಬುಕ್‌ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಳಲ್ಪಟ್ಟಿದೆ. ನಾಲ್ಕನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್‌ ಇದೆ. ಐದನೇ ಸ್ಥಾನದಲ್ಲಿ ಆಪಲ್‌ ಇದೆ. ನೆಟ್‌ಫ್ಲಿಕ್ಸ್‌ ಮಾತ್ರ ಒಂದೇ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ವ್ಯಾಟ್ಸಾಪ್‌ ಹತ್ತನೇ ಸ್ಥಾನದಲ್ಲಿ ಇದೆ.

1. ಟಿಕ್‌ಟಾಕ್‌.ಕಾಮ್‌
2. ಗೂಗಲ್‌.ಕಾಮ್‌
3. ಫೇಸ್‌ಬುಕ್‌.ಕಾಮ್‌
4. ಮೈಕ್ರೋಸಾಫ್ಟ್‌.ಕಾಮ್‌
5. ಆಪಲ್‌.ಕಾಮ್‌
6. ಅಮೆಜಾನ್‌.ಕಾಮ್‌
7. ನೆಟ್‌ಫ್ಲಿಕ್ಸ್‌.ಕಾಮ್‌
8. ಯೂಟ್ಯೂಬ್‌.ಕಾಮ್‌
9. ಟ್ವಿಟ್ಟರ್‌.ಕಾಮ್‌
10. ವಾಟ್ಸಾಪ್‌.ಕಾಮ್‌

ಎರಡನೇ ಸ್ಥಾನದಿಂದ ಕೆಳಕ್ಕೆ ಇಳಿದ ಫೇಸ್‌ಬುಕ್‌

2020 ವರ್ಷ ಪೂರ್ತಿ ಫೇಸ್‌ಬುಕ್‌ ಸ್ಥಿರವಾಗಿ ಎರಡನೇ ಸ್ಥಾನದಲ್ಲಿಯೇ ಇತ್ತು. ಆದರೆ ಟಿಕ್‌ಟಾಕ್‌ ಏಳನೇ ಸ್ಥಾನದಿಂದ ಒಮ್ಮೆಲೇ ಅಗ್ರ ಸ್ಥಾನಕ್ಕೆ ಏರುತ್ತಿದ್ದಂತೆ ಫೇಸ್‌ಬುಕ್‌ ತನ್ನ ಎರಡನೇ ಸ್ಥಾನವನ್ನು ಕಳೆದುಕೊಂಡಿದೆ. ಈ ಬಾರಿ ಫೇಸ್‌ಬುಕ್‌ ಮೂರನೇ ಸ್ಥಾನಕ್ಕೆ ಇಳಿದಿದೆ. ನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್‌.ಕಾಮ್‌ ಹಾಗೂ ಆ ಬಳಿಕದ ಸ್ಥಾನದಲ್ಲಿ ಆಪಲ್‌.ಕಾಮ್‌ ಇದೆ. ಇನ್ನು ಈ ಟಾಪ್‌ 10 ನಿಂದ ಇನ್‌ಸ್ಟಾಗ್ರಾಂ ಹೊರಕ್ಕೆ ಹೋಗಿದೆ. Apple.com ಈ ಪಟ್ಟಿಗೆ ಸೇರ್ಪಡೆ ಆಗಿದೆ.

ನೆಟ್‌ಫ್ಲಿಕ್ಸ್‌ ಜನಪ್ರಿಯತೆ ಕುಂಠಿತ

ಡಿಸೆಂಬರ್ 2020 ರಲ್ಲಿ, ವಿಶೇಷವಾಗಿ ಕ್ರಿಸ್‌ಮಸ್‌ ಇದ್ದ ವಾರದಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್‌ ಅನ್ನು ಮೀರಿಸಿತ್ತು ಎಂದು ವರದಿ ಹೇಳುತ್ತದೆ. ಆದರೆ 2020 ರ ಕ್ರಿಸ್‌ಮಸ್‌ನ ಕ್ರಿಸ್‌ಮಸ್‌ನ ಕೆಲವು ದಿನಗಳಲ್ಲಿ ಟ್‌ಫ್ಲಿಕ್ಸ್ ಆಪಲ್‌ಗಿಂತಲೂ ಹೆಚ್ಚಿತ್ತು. ಅಂದರೆ ಟಾಪ್‌ 4 ಸ್ಥಾನದಲ್ಲಿ ಇತ್ತು. ಡಿಸೆಂಬರ್ 23, 25 ಮತ್ತು ಡಿಸೆಂಬರ್ 29 ರಿಂದ ಜನವರಿ 2, 2021 ರವರೆಗೂ ನೆಟ್‌ಫ್ಲಿಕ್ಸ್‌ ನಾಲ್ಕನೇ ಸ್ಥಾನದಲ್ಲಿಯೇ ಇತ್ತು. ಆದರೆ ಈ ವರ್ಷ ನೆಟ್‌ಫ್ಲಿಕ್ಸ್‌ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಕಳೆದ ವರ್ಷ ಟಿಕ್‌ಟಾಕ್‌ ಇದ್ದ ಟಾಪ್‌ 7 ಸ್ಥಾನದಲ್ಲಿ ನೆಟ್‌ಫ್ಲಿಕ್ಸ್‌.ಕಾಮ್‌ ಇದೆ.

ಸಾಮಾಜಿಕ ಜಾಲತಾಣದಲ್ಲೂ ಟಿಕ್‌ಟಾಕ್‌ ಟಾಪ್‌

ಇನ್ನು ಸಾಮಾಜಿಕ ಮಾಧ್ಯಮ ಡೊಮೇನ್‌ಗಳು ಕ್ಲೌಡ್‌ಫ್ಲೇರ್ ಶ್ರೇಯಾಂಕದಲ್ಲಿಯೂ ಟಿಕ್‌ಟಾಕ್‌ ಉನ್ನತ ಮಟ್ಟದಲ್ಲಿ ಇದೆ. ಒಂಬತ್ತು ಪ್ರಮುಖ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಈ ಪಟ್ಟಿಯಲ್ಲಿ ಇದೆ. ಈ ಪಟ್ಟಿಯಲ್ಲಿಯೂ ಟಿಕ್‌ಟಾಕ್ ಅಗ್ರಸ್ಥಾನದಲ್ಲಿದೆ, ನಂತರ ಫೇಸ್‌ಬುಕ್ ಮತ್ತು ಯೂಟ್ಯೂಬ್ ಇವೆ. ಮೊದಲ ಸ್ಥಾನದಲ್ಲಿ ಟಿಕ್‌ಟಾಕ್‌, ಎರಡನೇ ಸ್ಥಾನದಲ್ಲಿ ಫೇಸ್‌ಬುಕ್‌, ಮೂರನೇ ಸ್ಥಾನದಲ್ಲಿ ಯೂಟ್ಯೂಬ್‌, ನಾಲ್ಕನೇ ಸ್ಥಾನದಲ್ಲಿ ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಐದನೇ ಸ್ಥಾನದಲ್ಲಿ, ಸ್ನಾಪ್‌ಚಾಟ್‌ ಆರನೇ ಸ್ಥಾನ, ರೆಡ್ಡೀಟ್‌ ಏಳನೇ ಸ್ಥಾನದಲ್ಲಿ, ಪಿನ್‌ಟೆರೆಸ್ಟ್‌ ಎಂಟನೇ ಸ್ಥಾನದಲ್ಲಿ, ಲಿಂಕ್ಡ್‌ಇನ್‌ ಒಂಬತ್ತನೇ ಸ್ಥಾನದಲ್ಲಿ ಹಾಗೂ ಕ್ವಾರಾ ಹತ್ತನೇ ಸ್ಥಾನದಲ್ಲಿ ಇದೆ. ಕಳೆದ ವರ್ಷ ಫೇಸ್‌ಬುಕ್‌ ಮೊದಲ ಸ್ಥಾನದಲ್ಲಿ ಇತ್ತು, ಆದರೆ ಈ ವರ್ಷ ಎರಡನೇ ಸ್ಥಾನಕ್ಕೆ ತಳಲ್ಪಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯಾವ್ಯಾವ ನಟರ ಬಳಿ ಪ್ರೈವೇಟ್​ ಜೆಟ್​ ಇದೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​!

Sun Dec 26 , 2021
ಅಲ್ಲು ಅರ್ಜುನ್​: ಟಾಲಿವುಡ್​​ನ ಐಕಾನ್​ ಸ್ಟಾ​ ಅಲ್ಲು ಅರ್ಜುನ್​ ದುಬಾರಿ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದಾರೆ. ಇವರ ಬಳಿ ಪ್ರೈವೇಟ್​ ಜೆಟ್​ ಇದೆ. ‘ರೇಸ್​ ಗುರಮ್​’ ಸಿನಿಮಾ ಪ್ರಮೋಷನ್​ ಸಂದರ್ಭದಲ್ಲಿ ಅವರು ಇದೇ ವಿಮಾನದಲ್ಲಿ ಹಾರಾಟ ನಡೆಸಿದ್ದರು. ‘ಪುಷ್ಪ’ ಸಿನಿಮಾ ಪ್ರಚಾರಕ್ಕೆ ಇದೇ ವಿಮಾನ ಬಳಕೆ ಮಾಡಿಕೊಂಡಿದ್ದರು.   ಚಿರಂಜೀವಿ: ಮೆಗಾ ಸ್ಟಾರ್​ ಚಿರಂಜೀವಿ ಬಗ್ಗೆ ಪರಿಚಯ ಮಾಡಿಸಿಕೊಡುವ ಅವಶ್ಯಕತೆ ಇಲ್ಲ.ಟಾಲಿವುಡ್​ನಲ್ಲಿ ಈಗಾಗಲೇ ಅನೇಕ ಸಿನಿಮಾಗಳನ್ನು ಚಿರಂಜೀವಿ ಮಾಡಿದ್ದಾರೆ. ಅಷ್ಟೇ […]

Advertisement

Wordpress Social Share Plugin powered by Ultimatelysocial