ಮಾದಿಗ ದಂಡೋರ ದಿಂದ ಸರ್ಕಾರಕ್ಕೆ ಎಚ್ಚರಿಕೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮಟ್ಟದ ರಾಜ್ಯ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೊರಟ ಸಮಿತಿ ವತಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೆ ಎಂ ದೇವರಾಜ್ ಸರ್ಕಾರದ ವಿರುದ್ಧ ಕಿಡಿ ಕಾರಿದರು ಸರ್ಕಾರಗಳು ಚುನಾವಣೆಗಳು ಹತ್ತಿರ ಬಂದಾಗ ನಮ್ಮ ಸಮಾಜವನ್ನು ದಿಕ್ಕು ತಪ್ಪಿಸುವಂತಹ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಅದೇ ರೀತಿಯಾಗಿ ಈಗಿನ ಬಿಜೆಪಿ ಸರ್ಕಾರವು ಸಹ ಮುಂದಾಗುತ್ತಿದ್ದು ಒಂದು ಉಪ ಸಮಿತಿಯನ್ನು ರಚನೆ ಮಾಡಿ ಕಾನೂನು ಮಂತ್ರಿಗಳಾದಂತಹ ಮಾಧುಸ್ವಾಮಿ ರವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಸದಾಶಿವ ಆಯೋಗ ಜಾರಿಗೆ ತರಲು ಉಪಸಮತಿ ಬೇಕೇ ಕೇವಲ ಎರಡು ಪರ್ಸೆಂಟ್ ಹಾಗೂ ಮೂರು ಪರ್ಸೆಂಟ್ ಇರುವಂತಹ ಸಮುದಾಯಗಳಿಗೆ ಮೀಸಲಾತಿ ಕೊಟ್ಟು ಬಹು ಸಂಖ್ಯಾತರಾಗಿರುವಂತಹ ಮಾದಿಗ ಸಮುದಾಯ ಹಾಗೂ ಚಲವಾದಿ ಸಮುದಾಯಕ್ಕೆ ಅನ್ಯಾಯವನ್ನು ಮಾಡುತ್ತಿದ್ದೀರಿ ಚಳಿಗಾಲ ಅಧಿವೇಶನ ಆರಂಭದ ಮೊದಲ ದಿನವೇ ತಾವು ಸದಾಶಿವ ಆಯೋಗ ವರದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೆ ಹೋದಲ್ಲಿ ಮಾದಿಗ ಸಮುದಾಯದ ಹೋರಾಟ ತೀವ್ರವಾಗುತ್ತದೆ 27 ರಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರ ಮನೆಗೆ ಮುತ್ತಿಗೆ ಹಾಕಲಾಗುತ್ತದೆ ಅಲ್ಲಿ ನಮ್ಮ ಪ್ರತಿಭಟನೆಗೆ ಅಡ್ಡಿಪಡಿಸಿದರೆ ಮುಂದಿನ ಚುನಾವಣೆಯಲ್ಲಿ ನಾವು ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದು ಜನವರಿ 6 ಕ್ಕೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ರವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ರಾಜ್ಯದಲ್ಲಿ ಬಹು ಸಂಖ್ಯಾತರಾಗಿರುವ ನಾವು ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಚಿಂತನೆಯನ್ನು ನಡೆಸಲಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿರಾಗಿ ಶ್ರೀ ಕುಮಾರೇಶ್ವರ ಬೃಹತ್ ರಥಯಾತ್ರೆ6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ

Sun Dec 18 , 2022
ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನಚರಿತ್ರೆ ಆಧರಿತ ಸಿನಿಮಾ ವಿರಾಟಪುರ ವಿರಾಗಿ ಸಿದ್ಧವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್. ಲಿಂಗದೇವರು ನಿರ್ದೇಶನದ ಈ ಸಿನಿಮಾವನ್ನು ಸಮಾಧಾನ್ ಸಂಸ್ಥೆ ನಿರ್ಮಿಸಿದೆ. ಹಿನ್ನೆಲೆಯಲ್ಲಿ ಮಹಾಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ನೆನಪಿನಲ್ಲಿ ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ ನಡೆಸಲು ಉದ್ದೇಶಿಸಲಾಗಿದೆ.6 ರಥ, 13 ದಿನ, 7000 ಕಿಮೀ, 360 ಸಭೆ, 1 ಕೋಟಿ ಜನರ ಉಪಸ್ಥಿತಿ ಇರುವ ಈ ಬೃಹತ್ […]

Advertisement

Wordpress Social Share Plugin powered by Ultimatelysocial