ಕೂದಲಿನ ಆರೈಕೆ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

ಕೂದಲಿನ ಆರೈಕೆ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು ನಾವು ಸೇವಿಸುವ ಆಹಾರದಿಂದಲೇ ಪಡೆದುಕೊಳ್ಳಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಆಯಿಲ್, ಹೇರ್ ಕ್ರೀಮ್ಸ್, ವಿವಿಧ ಬಗೆಯ ಶ್ಯಾಂಪೂಗಳು, ಕಂಡೀಶನರ್ ಗಳು ಹೀಗೆ ಹಲವು ಉತ್ಪನ್ನಗಳ ಮೊರೆ ಹೋಗುತ್ತೇವೆ.

ಇತ್ತೀಚಿನ ದಿನಗಳಲ್ಲಿ ಈ ಉತ್ಪನ್ನಗಳನ್ನು ಬಳಸಿ ಹೇಗಾದರೂ ತಮ್ಮ ಕೂದಲನ್ನು ಆರೈಕೆ ಮಾಡಿಕೊಳ್ಳಬೇಕು ಅನ್ನೋ ಧಾವಂತ ಎಲ್ಲರಲ್ಲೂ ಇದೆ. ಹೀಗೆ ಮಾಡುವುದರಿಂದ ರಾಸಾಯನಿಕಗಳು ಮತ್ತು ಪೋಷಕಾಂಶಗಳ ಕೊರತೆಯಿಂದಾಗಿ ಕೂದಲಿನ ಆರೋಗ್ಯವನ್ನು ಮತ್ತಷ್ಟು ಕಳೆದುಕೊಳ್ಳುತ್ತೇವೆ. ಆದ್ದರಿಂದ ಕೂದಲಿನ ಆರೈಕೆಗೆ ನಮ್ಮಲ್ಲೇ ದೊರೆಯುವ ವಿಟಮಿನ್ಸ್ ಗಳನ್ನು ಒದಗಿಸುವ ಒಂದಷ್ಟು ಆಹಾರಧಾನ್ಯಗಳ ಪಟ್ಟಿ ಇಲ್ಲಿದೆ.

ವಿಟಮಿನ್ ಎ : ಎಲ್ಲಾ ವಿಧದ ಜೀವಕೋಶಗಳ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ಇದು ಮೇದೋಗ್ರಂಥಿಗಳಿಗೆ ಚೈತನ್ಯ ನೀಡಿ, ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಆಲೂಗೆಡ್ಡೆ, ಕ್ಯಾರೆಟ್ ಮತ್ತು ಪಾಲಾಕ್ ಸೊಪ್ಪುಗಳಲ್ಲಿ ಇದು ಹೇರಳವಾಗಿ ಲಭಿಸುತ್ತದೆ.

ವಿಟಮಿನ್ ಬಿ : ಕೂದಲಿನ ಬೆಳವಣಿಗೆಗೆ ಇದು ಅತ್ಯಂತ ಉಪಯುಕ್ತವಾದ ಜೀವಸತ್ವ. ಇದು ಕೂದಲಿಗೆ ಬೇಕಾದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಧಾನ್ಯಗಳು, ಮಾಂಸಾಹಾರ, ಸೀ ಫೂಡ್ಸ್ ಮತ್ತು ಹಸಿರು ಸೊಪ್ಪುಗಳಲ್ಲಿ ಇದು ಹೆಚ್ಚಿರುತ್ತವೆ.

ವಿಟಮಿನ್ ಸಿ : ಕೂದಲಿನ ರಚನೆಗೆ ಪ್ರಮುಖ ಭಾಗವಾಗಿರುವ ಕಾಲಜನ್ ಗೆ ವಿಟಮಿನ್ ಸಿ ಅತ್ಯಗತ್ಯ. ಇದು ಸ್ಟ್ರಾಬೆರಿ, ಮೆಣಸು, ಸೀಬೆಹಣ್ಣು ಮತ್ತು ಸಿಟ್ರಸ್ ಫ್ರೂಟ್ಗಳಲ್ಲಿ ಹೇರಳವಾಗಿ ಸಿಗುತ್ತದೆ.

ವಿಟಮಿನ್ ಡಿ : ವಿಟಮಿನ್ ಕೊರತೆಯು ಕೂದಲಿನ ಕೊರತೆಗೆ ಕಾರಣವಾಗಿರುತ್ತದೆ. ಸೂರ್ಯನ ಕಿರಣಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಮೀನು, ಕಾಡ್ ಲಿವರ್ ಆಯಿಲ್, ಅಣಬೆಗಳು ವಿಟಮಿನ್ ಡಿ ಇರುವ ಆಹಾರಗಳಾಗಿವೆ.

ವಿಟಮಿನ್ ಇ : ಆರೋಗ್ಯಪೂರ್ಣ ಕೂದಲಿನ ಬೆಳವಣಿಗೆಗೆ ವಿಟಮಿನ್ ಇ ಅತ್ಯವಶ್ಯಕ. ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಾಲಾಕ್ ಮತ್ತು ಅವಕಾಡೊಗಳಲ್ಲಿ ಹೆಚ್ಚಾಗಿರುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ʼಟೂತ್ ಪೇಸ್ಟ್ʼ ನಲ್ಲಿದೆ ಸೌಂದರ್ಯದ ಗುಟ್ಟು...!

Thu Dec 16 , 2021
ಟೂತ್ ಪೇಸ್ಟ್ ಕೂಡಾ ಮುಖದ ಕಲೆ, ಮೊಡವೆಗಳನ್ನು ಹೋಗಲಾಡಿಸಬಲ್ಲವು. ಅದು ಹೇಗೆಂದು ತಿಳಿಯಬೇಕೇ.? ಒಂದು ಚಮಚ ನಿಂಬೆ ರಸಕ್ಕೆ ಪೇಸ್ಟ್ ಸೇರಿಸಿ ಮುಖದ ಮೇಲೆ ಮೃದುವಾಗಿ ಲೇಪಿಸಿ. ಒಂದು ಗಂಟೆ ಬಿಟ್ಟು ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮೊಡವೆ ಮೂಡಿರುವ ಜಾಗಕ್ಕೆ ಸ್ವಲ್ಪ ಕೊಲ್ಗೇಟ್ ಹಚ್ಚಿ ಒಂದು ಗಂಟೆಯ ನಂತರ ತೊಳೆದರೆ ಮೊಡವೆ ದೊಡ್ಡದಾಗದೆ ಅಲ್ಲೇ ಮುದುಡುತ್ತದೆ. ರಾತ್ರಿ ಹಚ್ಚಿದರೆ ಬೆಳಗಾಗುವಾಗ ನಿಮ್ಮ ಮೊಡವೆ […]

Advertisement

Wordpress Social Share Plugin powered by Ultimatelysocial