ಕುಷ್ಟಗಿ: ಮೇಕೆ ಸಾಕಾಣಿಕೆಗೆ ಸಿಕ್ತು ನರೇಗಾ ಬಲ!

ಕುಷ್ಟಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ರೈತ ಶರಣಪ್ಪ ತಳವಾರ ಮೇಕೆ ಶೆಡ್‌ ನಿರ್ಮಿಸಿ ಹತ್ತಾರು ಕುರಿ ಮರಿಗಳನ್ನು ಸಾಕುತ್ತಾ ಅವುಗಳನ್ನ ಮಾರಾಟ ಮಾಡಿ ಅಧಿಕ ಲಾಭ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಈ ಗ್ರಾಮದ ಬಹುತೇಕ ರೈತರು ಕೃಷಿ ಬದುಕಿನ ಜೊತೆಗೆ ಹಸು, ಎಮ್ಮೆ, ಎತ್ತು, ಮೇಕೆ ಕುರಿಗಳನ್ನು ಸಾಕುವುದು ಉಪಕಸುಬುವಾಗಿದೆ. ಆದರೆ ಜಾನುವಾರುಗಳನ್ನು ಸಾಕಲು ಸರಿಯಾದ ವ್ಯವಸ್ಥೆ ಸೂಕ್ತ ಆರೈಕೆ ಮಾಡದಿರುವುದರಿಂದ ಸಾವು ನೋವು ಸಹಜವಾಗಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಜನರು ದನಕರುಗಳನ್ನು, ಮೇಕೆ ಗಳನ್ನು ಸಾಕುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಜಾನುವಾರುಗಳು, ಮೇಕೆ ಗಳು ಸಂಕಷ್ಟದಲ್ಲಿರುವ ಪರಿಸ್ಥಿತಿಯನ್ನು ಕಂಡು ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿದಾಗ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಮುಂದಾದರು.ಈ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಮೇಕೆ ಸಾಕಾಣಿಕೆಯಲ್ಲಿ ಲಾಭ ಕಂಡಿದ್ದಾರೆ.ನರೇಗಾ ಅನುದಾನ:68 ಸಾವಿರ ರೂ ಮೊತ್ತದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸುಸಜ್ಜಿತ ಮೇಕೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕಾಮಗಾರಿ ಸಂಕೇತ ಸಂಖ್ಯೆ: 1520003015/ IF/93393042893147465 ಕೂಲಿ ಹಣ ರೂ.8092=00, ಸಾಮಗ್ರಿ ಹಣ ರೂ.57319=00 ಒಟ್ಟು ರೂ.65411=00 ಪಾವತಿಯಾಗಿದ್ದು 28 ಮಾನವ ದಿನಗಳನ್ನು ಸೃಜಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

'ಕೇಂದ್ರ ಸರ್ಕಾರ'ದಿಂದ 60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ ; ತಿಂಗಳಿಗೆ ₹3,000 ಪಿಂಚಣಿ ಗ್ಯಾರೆಂಟಿ

Thu Dec 29 , 2022
ನವದೆಹಲಿ : 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸಂಘಟಿತ ಕಾರ್ಮಿಕರಿಗೆ ಉತ್ತಮ ಭವಿಷ್ಯವನ್ನ ಒದಗಿಸುವ ಉದ್ದೇಶದಿಂದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯನ್ನ ಜಾರಿಗೆ ತಂದಿದೆ.ಸರ್ಕಾರದ ಈ ಪಿಂಚಣಿ ಯೋಜನೆಯು ಆ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವನ್ನ ನೀಡುತ್ತದೆ. ಇದು ಅವರ ಭವಿಷ್ಯವನ್ನ ಆರ್ಥಿಕವಾಗಿ, ಬಲವಾಗಿ ಮತ್ತು ಸುಭದ್ರವಾಗಿಸುತ್ತದೆ.ಈ ಯೋಜನೆಯಡಿ, ಕೇಂದ್ರ ಸರ್ಕಾರವು 60 ವರ್ಷ ವಯಸ್ಸಿನ […]

Advertisement

Wordpress Social Share Plugin powered by Ultimatelysocial