ಪಾತ್ರ ಯಾವುದಾದರೇನು, ನಟಿಸುವುದಷ್ಟೇ ನನ್ನ ಕೆಲಸ-ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದ

ಪಾತ್ರ ಯಾವುದಾದರೇನು, ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ ಎನ್ನುವ ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದ. ಭಿಕ್ಷುಕ, ಕುಡುಕ, ಬಡವ ಮೊದಲಾದ ಪಾತ್ರಗಳಿಂದ 350ಕ್ಕೂ ಹೆಚ್ಚು ಚಿತ್ರಗಳ ಮೂಲಕ ರಸಿಕರನ್ನು ರಂಜಿಸುವ ಈ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಲೆಯನ್ನು ದೇವರೆಂದು ನಂಬಿರುವ ವೈಜನಾಥ್​ ಬಿರಾದರ್​ ಅವರು ಗಿರೀಶ್​​ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದು, ಅದಕ್ಕಾಗಿ ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿರಾದರ್​ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಕಾಳಗಿ ತಾಲೂಕಿನ ಮೊಘಾ ಗ್ರಾಮದಲ್ಲಿ ಕಾರ್ಯಕ್ರಮ - ಡಾ.ಅಂಬೇಡ್ಕರ್ ರವರ  ಜೀವನ ಆಧಾರಿತ ಧಾರವಾಹಿ

Sat Oct 10 , 2020
ಚಿಂಚೋಳಿಯ ಕಾಳಗಿ ತಾಲೂಕಿನ ಮೊಘಾ ಗ್ರಾಮದಲ್ಲಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ  ಜೀವನ ಆಧಾರಿತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಮಹಾನಾಯಕ ಧಾರಾವಾಹಿಯ ಪ್ಲೆಕ್ಸ್ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ಹೀಗಾಗಿ  ಭಾರತೀಯ ದಲಿತ ಪ್ಯಾಂಥರ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ದಿನೇಶ ಮೊಘಾ ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.   Please follow and like us:

Advertisement

Wordpress Social Share Plugin powered by Ultimatelysocial