ಮುಂಬೈನ ಎಲ್‌ಐಸಿ ಕಟ್ಟಡದಲ್ಲಿ ಬೆಂಕಿ!

 

 

8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ.

ಶನಿವಾರ ಮುಂಜಾನೆ ಕಚೇರಿಯ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಯಾಲರಿ ಸೇವಿಂಗ್ಸ್ ರೂಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕಿಟಕಿಯಿಂದ ಹೊರಗೆ ಸಹ ಬೆಂಕಿಯ ಕೆನ್ನಾಲಿಗೆ ಕಾಣಿಸಿದ್ದು, ದಟ್ಟ ಹೊಗೆ ಆವರಿಸಿತು.

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ 8 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ದಾಖಲೆಗಳು ಸುಟ್ಟು ಕರಕಲಾಗಿವೆ. ಬೆಂಕಿಯನ್ನು ಹತೋಟಿಗೆ ತರುವ ಕಾರ್ಯ ನಡೆಯುತ್ತಿದೆ.

2ನೇ ಮಹಡಿಯಲ್ಲಿರುವ ಸಂಬಳ ಉಳಿತಾಯ ಯೋಜನೆ ವಿಭಾಗದಲ್ಲಿನ ವಿದ್ಯುತ್ ವೈರಿಂಗ್ ಪ್ರದೇಶದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕಂಪ್ಯೂಟರ್‌, ದಾಖಲೆ, ಮರದ ಪೀಠೋಪಕರಣಗಳು ಇತ್ಯಾದಿಗಳಿಗೆ ಬೆಂಕಿ ಹೊತ್ತಿಕೊಂಡಿದೆ.

8 ಮೋಟಾರ್ ಪಂಪ್‌ಗಳ ಮೂರು ಬೆಂಕಿ ನಂದಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಮುಂಜಾನೆ ಕಚೇರಿಯಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎ.ಆರ್​. ರೆಹಮಾನ್ ಪುತ್ರಿ ಖತೀಜಾ

Sat May 7 , 2022
  ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಪುತ್ರಿ ಖತೀಜಾ ರೆಹಮಾನ್‌ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಡಿಯೋ ಇಂಜಿನಿಯರ್‌ ಆಗಿರುವ ರಿಯಾಸ್‌ದೀನ್‌ ಶೇಕ್‌ ಮೊಹಮದ್‌ ಅವರೊಂದಿಗೆ ಖತೀಜಾ ಅವರ ವಿವಾಹವನ್ನು ಕುಟುಂಬಸ್ಥರು ನಡೆಸಿಕೊಟ್ಟಿದ್ದಾರೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ರೆಹಮಾನ್‌ ‘ನವ ದಂಪತಿಗೆ ಸರ್ವಶಕ್ತನು ಆಶೀರ್ವದಿಸಲಿ’ ಎಂದು ಬರೆದುಕೊಂಡಿದ್ದಾರೆ. ಖತೀಜಾ ಕೂಡ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ‘ಇದು ನಾನು ಅತ್ಯಂತ ಕಾತುರದಿಂದ ಕಾಯುತ್ತಿದ್ದ ದಿನ’ ಎಂದು […]

Advertisement

Wordpress Social Share Plugin powered by Ultimatelysocial