ಮೊಬೈಲ್ ಬಂದ ಮೇಲೆ ಬದುಕು ಮೂರಾಬಟ್ಟೆ ಆಗಿದೆ!

 ಬೆಂಗಳೂರು: ಮೊಬೈಲ್   ಬಂದ ಮೇಲೆ ಬದುಕು   ಮೂರಾಬಟ್ಟೆ ಆಗಿದೆ ಅಂತ ಹಿರಿಯರು ಹೇಳೋದು ಇದಕ್ಕೆ ಕಣ್ರೀ. ಮಂಗನ   ಕೈಯಲ್ಲಿ ಮಾಣಿಕ್ಯ   ಕೊಡೋದು, ಮನುಷ್ಯನ ಕೈಯಲ್ಲಿ ಮೊಬೈಲ್ ಇರೋದು ಎರಡೂ ಒಂದೇ! ಅದೊಂದು ಇದ್ದು ಬಿಟ್ಟರೆ ಮನುಷ್ಯ ಏನ್ ಮಾಡ್ತಾನೋ ಅವನಿಗೇ ಗೊತ್ತಾಗೋದಿಲ್ಲ!ಅದ್ರಲ್ಲೂ ಈ ಆಯಪ್‌ಗಳು   ಬಂದ ಮೇಲೆ ಮನುಷ್ಯನ ಕೈಗೆ ಬಿಡುವೇ ಇಲ್ಲ ಅಂದ್ರೂ ತಪ್ಪಾಗೋದಿಲ್ಲ. ಆಯಪ್‌ನಲ್ಲೇ ಹೊರಜಗತ್ತಿಗೆ ತೆರೆದುಕೊಳ್ಳೋ ಜನರು, ಬಹುತೇಕ ಸಮಯದಲ್ಲಿ ಅಲ್ಲೇ ಮೋಸ ಹೋಗ್ತಾರೆ. ಇಲ್ಲಿ ಆಗಿದ್ದೂ ಅದೇ, ಆಯಪ್‌ ಮೂಲಕ ನಂಬರ್ ಶೇರ್   ಮಾಡಿಕೊಂಡ ಮಹಿಳೆ ಈಗ ಫಜೀತಿ ತಂದಿಟ್ಟುಕೊಂಡಿದ್ದಾಳೆ. ಇಲ್ಲಿ ಒಬ್ಬ ವಂಚಕನೇನೋ ಪೊಲೀಸರ ಬಲೆಗೆ ಬಿದ್ದ. ಆದರೆ ಅದೆಷ್ಟು ವಂಚಕರು ಮಹಿಳೆಯರಿಗೆ ಬಲೆ ಬೀಸಿ ಕುಳಿತಿದ್ದಾರೋ ದೇವರೇ ಬಲ್ಲ. ಈ ಸ್ಟೋರಿಯನ್ನು ಬರೀ ಮಹಿಳೆಯರು ಮಾತ್ರವಲ್ಲ ಸೋಶಿಯಲ್ ಮೀಡಿಯಾಗಳಲ್ಲಿ  ಆಯಕ್ಟೀವ್   ಆಗಿರುವ ಪ್ರತಿಯೊಬ್ಬರೂ ಓದಲೇ ಬೇಕು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕೋಡಿಗೆಹಳ್ಳಿ ಮೂಲದ ಅವಿವಾಹಿತ ಮಹಿಳೆ ವಂಚನೆಗೆ ಒಳಗಾಗಿದ್ದಾಳೆ. ಯುವಕನೊಬ್ಬನ ವಿರುದ್ಧ ಕೋಡಿಗೆಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ನನಗೆ ಅನ್ಯಾಯವಾಗಿದೆ ಸಾರ್, ನ್ಯಾಯ ಕೊಡಿಸಿ. ನನ್ನನ್ನು ಆತ ವಂಚಿಸುತ್ತಿದ್ದಾನೆ, ದಯವಿಟ್ಟು ಅವನಿಗೆ ಶಿಕ್ಷೆ ಕೊಡಿಸಿ ಅಂತ ಕಣ್ಣೀರಿಟ್ಟಿದ್ದಾಳೆ.
‘ಟಿಂಡರ್‌’ನಲ್ಲಿ ಫಜೀತಿ ಮಾಡಿಕೊಂಡ ಮಹಿಳೆ
‘ಟಿಂಡರ್’ ಅನ್ನೋ ಆಯಪ್ ಬಗ್ಗೆ ನೀವೆಲ್ಲ ಕೇಳಿರ್ತೀರಿ. ಇದೇ ಟಿಂಡರ್ ಆಯಪ್‌ನಿಂದ ಮಹಿಳೆ ಮೋಸಕ್ಕೆ ಒಳಗಾಗಿದ್ದಾಳೆ. ಅವಿವಾಹಿತಳಾಗಿದ್ದ ಈಕೆ, ಅಲ್ಲಿ ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡಿದ್ದಾಳೆ. ಆತ ಕೇಳಿದ ಅಂತ ತನ್ನ ಮೊಬೈಲ್ ನಂಬರ್ ಕೊಟ್ಟು, ಯಾಮಾರಿದ್ದಾಳೆ. ಇದೀಗ ಆತನ ವಿರುದ್ಧವೇ ಠಾಣೆ ಮೆಟ್ಟಿಲೇರಿದ್ದಾಳೆ.’ಆಯಪ್‌’ನಲ್ಲೇ ‘ಆಪ್ತ’ನಾಗಿ ವಂಚಿಸಿದ ಖದೀಮ
ಈ ಕಥೆಯ ಖಳನಾಯಕ ಛತ್ತೀಸ್‌ಗಡ ಮೂಲದ ಅಭಿಷೇಕ್ ಅಲಿಯಾಸ್ ಸುಶಾಂಕ್ ಜೈನ್. ಕೋಡಿಗೆಹಳ್ಳಿಯ ಈಕೆಯನ್ನು ಟಿಂಡರ್ ಆಯಪ್ ಮೂಲಕವೇ ಅಭಿಷೇಕ್ ಪರಿಚಯಿಸಿಕೊಂಡಿದ್ದ. ಆಕೆಯ ನಂಬರ್ ಪಡೆದು, ಸಲುಗೆ ಬೆಳೆಸಿಕೊಂಡಿದ್ದ.
ವಂಚಕನ ಜಾಲಕ್ಕೆ ಬಿದ್ದಿದ್ದಳು ಈ ಮಹಿಳೆ
ಈ ಮಹಿಳೆ ಹಾಗೂ ಯುವಕ ಅಭಿಷೇಕ್ ನಡುವೆ ದಿನ ಕಳೆದಂತೆ ಭಾರೀ ಸಲುಗೆ ಬೆಳೆದಿದೆ. ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುವ ಪರಿಸ್ಥಿತಿಗೆ ಈಕೆ ಬಂದಿದ್ದಳು. ಇದನ್ನೇ ಎನ್‌ಕ್ಯಾಶ್ ಮಾಡಿಕೊಂಡ ಭೂಪ, ಆಕೆಯ ಬೆತ್ತಲೆ ಫೋಟೋ ಕೇಳಿದ್ದಾನೆ. ಹಿಂದೆ ಮುಂದೆ ನೋಡದ ಆಕೆ, ಬೆತ್ತಲೆಯಾಗಿ ಫೋಟೋ ತೆಗೆದು, ಆತನ ಮೊಬೈಲ್‌ಗೆ ಕಳಿಸಿದ್ದಾಳೆ.ಬೆತ್ತಲೆ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್!
ಆಕೆಯ ಬೆತ್ತಲೆ ಫೋಟೋ ತನ್ನ ಮೊಬೈಲ್ ಸೇರುತ್ತಿದ್ದಂತೆ ಅಭಿಷೇಕ್‌ನಲ್ಲಿದ್ದ ವಂಚಕ ಜಾಗೃತನಾಗಿದ್ದಾನೆ. ಫೋಟೋ ಇಟ್ಟುಕೊಂಡು ಹಣ ಮಾಡುವ ಪ್ಲಾನ್ ಮಾಡಿದ್ದಾನೆ. ನೀನು ದುಡ್ಡು ಕೊಡದೇ ಇದ್ದರೆ, ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುವುದಾಗಿ ಆಕೆಗೆ ಬೆದರಿಸಿದ್ದಾನೆ.ಕಣ್ಣೀರಿಟ್ಟರು ಬಿಡಲಿಲ್ಲ, ದಮ್ಮಯ್ಯ ಅಂದರೂ ಕೇಳಲಿಲ್ಲ
ಈತ ಸ್ನೇಹಿತನಲ್ಲ, ವಂಚಕ ಎನ್ನುವುದು ಈ ಮಹಿಳೆಗೆ ನಿಧಾನಕ್ಕೆ ಅರ್ಥವಾಗಿದೆ. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಆದರೂ ಫೋಟೋ ಡಿಲೀಟ್ ಮಾಡುವಂತೆ ಪರಿಪರಿಯಾಗಿ ಬೇಡಿದ್ದಾಳೆ. ಸ್ನೇಹಕ್ಕೆ ಮಸಿ ಬಳಿಯಬೇಡು, ನಂಬಿಕೆಗೆ ದ್ರೋಹ ಬಗೆಯಬೇಡ ಅಂತ ಕಣ್ಣೀರಿಟ್ಟಿದ್ದಾಳೆ. ಆದರೂ ಆತ ಬಗ್ಗಲೇ ಇಲ್ಲ. ದಿನದಿಂದ ದಿನಕ್ಕೆ ಕಿರುಕುಳ ಜಾಸ್ತಿ ಮಾಡತೊಡಗಿದ.ಕೋಡಿಗೆಹಳ್ಳಿ ಪೊಲೀಸರಿಂದ ಆರೋಪಿ ಬಂಧನ
ಕೊನೆನೆ ಬೇರೆ ದಾರಿ ಕಾಣದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ನ್ಯಾಯ ಕೊಡಿಸುವಂತೆ ಕೋಡಿಗೆಹಳ್ಳಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾಳೆ. ಆಕೆ ನೀಡಿದ ದೂರನ್ನು ದಾಖಲಿಸಿಕೊಂಡ ಕೋಡಿಗೆಹಳ್ಳಿ ಠಾಣೆ ಪೊಲೀಸರು ಕಾರ್ಯ ಪ್ರವೃತ್ತರಾದರು. ದೂರು ಸ್ವೀಕರಿಸಿದ ಮೂರು ಗಂಟೆ ಒಳಗೆ ಆರೋಪಿಯನ್ನ ಬಂಧಿಸಿ, ಜೈಲಿಗಟ್ಟಿದ್ದಾರೆ. ಸದ್ಯ ಬಂಧಿತನಿಂದ ಮೂರು ಮೊಬೈಲ್ ಹಾಗೂ 3 ಲಕ್ಷದ 60 ಸಾವಿರ ರೂಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೂರತ್: ಮಹಿಳೆ ಕೇರ್‌ಟೇಕರ್ ಹಾಸಿಗೆಯ ಮೇಲೆ ಥಳಿಸಿದ ನಂತರ ಗಂಭೀರ ಸ್ಥಿತಿಯಲ್ಲಿ 8 ತಿಂಗಳ ಮಗು

Sun Feb 6 , 2022
    ಸೂರತ್‌ನ ರಾಂಡರ್ ಪ್ರದೇಶದಲ್ಲಿ ಮಗುವಿನ ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ 8 ತಿಂಗಳ ಗಂಡು ಮಗುವನ್ನು ಮಹಿಳಾ ಆರೈಕೆ ಮಾಡುವವರು ಹಾಸಿಗೆಯ ಮೇಲೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಬಾಲಕನ ಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಂದೆ ಶಾಲೆಯೊಂದರ ಕ್ರೀಡಾ ಶಿಕ್ಷಕ ಮಿತೇಶ್ ಪಟೇಲ್ ನೀಡಿದ ದೂರಿನ ಮೇರೆಗೆ ಕೇರ್ ಟೇಕರ್ ಕೋಮಲ್ ತಾಂಡೇಲ್ಕರ್ (27) ಕೊಲೆಯತ್ನಕ್ಕಾಗಿ ರಾಂದರ್ ಪೊಲೀಸ್ ಠಾಣೆಯಲ್ಲಿ […]

Advertisement

Wordpress Social Share Plugin powered by Ultimatelysocial